ಬೆಂಗಳೂರು:ಬಿಜೆಪಿ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್​ನಿಂದ ವಲಸೆ ಬಂದಿದ್ದ ನಾಗರಾಜ ಛಬ್ಬಿ ಅವರಿಗೆ ಕಲಟಗಿಯಲ್ಲಿ ಮಣೆ ಹಾಕಿದೆ. ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಹಾವೇರಿಯ ನೆಹರೂ ಓಲೇಕಾರ್​ ಹಾಗೂ ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿ ಅವರಿಗೆ ಟಿಕೆಟ್​ ನಿರಾಕರಿಸಿದೆ.
ಚನ್ನಗಿರಿಯಲ್ಲಿ ಕಳಂಕಿತ ಮಾಡಾಳ್​ ವಿರುಪಾಕ್ಷಪ್ಪ ಬದಲು ಶಿವಕುಮಾರ್​ಗೆ ಹಾಗೂ ಬೈಂದೂರಿನಲ್ಲಿ ಸುಕುಮಾರ್​ ಶೆಟ್ಟಿ ಬದಲು ಗುರುರಾಜ್​ ಗಂಟಿಹೊಳೆ ಟಿಕೆಟ್​ ನೀಡಲಾಗಿದೆ. ಕಲಟಗಿಯಲ್ಲೂ ಛಬ್ಬಿಗೆ ಟಿಕೆಟ್​ ನೀಡಿದ್ದರಿಂದ ಹಾಲಿ ಶಾಸಕ ನಿಂಬಣ್ಣವರ್​ಗೆ ಟಿಕೆಟ್​ ಕೈತಪ್ಪಿದೆ. ಮಾಯಕೊಂಡದಲ್ಲಿ ಶಾಸಕ ನಿಂಗಣ್ಣ ಬದಲು ಬಸವರಾಜ ನಾಯ್ಕ್​ ಅವಕಾಶ ಪಡೆದುಕೊಂಡಿದ್ದಾರೆ. ದಾವಣಗೆರೆ ಉತ್ತರದಲ್ಲಿ ರವೀಂದ್ರನಾಥ ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಲೋಕಿಕೆರೆ ನಾಗರಾಜ್​ ಅವಕಾಶ ಪಡೆದಿದ್ದಾರೆ.
ಬಿಜೆಪಿ ಮಂಗಳವಾರ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಜಗದೀಶ್​ ಶೆಟ್ಟರ್​ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ, ಕೆ.ಎಸ್​. ಈಶ್ವರಪ್ಪ- ಶಿವಮೊಗ್ಗ, ಅರವಿಂದ ಲಿಂಬಾವಳಿ ಅವರ ಮಹಾದೇವಪುರ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಇನ್ನೂ 13 ಕ್ಷೇತ್ರಗಳಿಗೆ ಪ್ರಕಟಿಸುವುದು ಬಾಕಿ ಇದೆ.
ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಸಂಬಂಧಿ ಸಂತೋಷ್​ ಅರಸೀಕೆರೆಯಿಂದ ಆಕಾಂಯಾಗಿದ್ದರು. ಆದರೆ ಟಿಕೆಟ್​ ನಿರಾಕರಿಸುವ ಮೂಲಕ ಶಾಕ್​ ನೀಡಿದೆ. ಅರಸೀಕೆರೆಗೆ ಜಿವಿ ಬಸವರಾಜು ಅವರಿಗೆ ಟಿಕೆಟ್​ ನೀಡಲಾಗಿದೆ. ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ ಅವರಿಗೆ ಬಸವನ ಬಾಗೇವಾಡಿಯಿಂದ ಟಿಕೆಟ್​ ನೀಡಲಾಗಿದೆ. ಹರಪ್ಪನಹಳ್ಳಿಯಿಂದ ಮಾಜಿ ಸಚಿವ ಕರುಣಾಕರ ರೆಡ್ಡಿ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಕೆಜಿಎ್​ನಲ್ಲಿ ಮಾಜಿ ಶಾಸಕ ಸಂಪಂಗಿ ಅವರ ಪತ್ನಿ ಅಶ್ವಿನಿಗೆ ಅವಕಾಶ ನೀಡಲಾಗಿದೆ.
ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್​ಬಸವನಬಾಗೇವಾಡಿ- ಎಸ್​.ಕೆ.ಬೆಳ್ಳುಬ್ಬಿಇಂಡಿ- ಕೆ.ಬಿರಾದಾರ್​ಗುರುಮಿಟ್ಕಲ್​- ಲಲಿತಾ ಅನಾಪುರ್​ಬೀದರ್​- ಈಶ್ವರ್​ ಸಿಂಗ್​ ಠಾಕೂರ್​ಭಾಲ್ಕಿ- ಪ್ರಕಾಶ್​ ಖಂಡ್ರೆಗಂಗಾವತಿ- ಪರಣ್ಣ ಮುನವಳ್ಳಿಕಲಟಗಿ- ನಾಗರಾಜ ಛಬ್ಬಿಹಾನಗಲ್​- ಶಿವರಾಜ್​ ಸಜ್ಜನರ್​ಹಾವೇರಿ- ಗವಿಸಿದ್ದಪ್ಪ ದ್ಯಾಮಣ್ಣವರ್​ಹರಪನಹಳ್ಳಿ- ಕರುಣಾಕರ ರೆಡ್ಡಿದಾವಣಗೆರೆ ಉತ್ತರ- ಲೋಕೀಕೆರೆ ನಾಗರಾಜ್​ದಾವಣಗೆರೆ ದಣ- ಅಜಯ್​ ಕುಮಾರ್​ಮಾಯಕೊಂಡ- ಬಸವರಾಜ ನಾಯಕ್​ಚನ್ನಗಿರಿ- ಶಿವಕುಮಾರ್​ಬೈಂದೂರು- ಗುರುರಾಜ್​ ಗಂಟಿಹೊಳೆಮೂಡಿಗೆರೆ- ದೀಪಕ್​ ದೊಡ್ಡಯ್ಯಗುಬ್ಬಿ- ಎಸ್​.ಡಿ.ದಿಲೀಪ್​ ಕುಮಾರ್​ಶಿಡ್ಲಟ್ಟ- ರಾಮಚಂದ್ರ ಗೌಡಕೋಲಾರ ಗೋಲ್ಡ್​ ಫಿಲ್ಡ್ಡ್​- ಅಶ್ವಿನಿ ಸಂಪಂಗಿಶ್ರವಣಬೆಳಗೊಳ- ಚಿದಾನಂದಅರಸೀಕೆರೆ- ಜಿ.ವಿ.ಬಸವರಾಜುಹೆಗ್ಗಡದೇವನಕೋಟೆ- ಕೃಷ್ಣಾ ನಾಯ್ಕ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
