ಬೆಂಗಳೂರು:ರಾಜ್ಯ ಸರ್ಕಾರ(State Government)ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ(BJP)ಟ್ವೀಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯ(Siddaramaiah)ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಟೀಕಿಸಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಗೂಂಡಾಗಿರಿ ಪರ್ವ ಶುರು: ಕಾಂಗ್ರೆಸ್​ ವಿರುದ್ಧ ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ
“ಧನದಾಹಿ ಎಟಿಎಂ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಗ್ಯಾರಂಟಿ ಕೊಡುಗೆಗಳು. ಉಚಿತ, ಖಚಿತ, ನಿಶ್ಚಿತ” ಎಂದು ಟ್ವೀಟ್​ನಲ್ಲಿ(Tweet)ಉಲ್ಲೇಖಿಸಿದೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿರುವ ಬಿಜೆಪಿ, “1ನೇ ಗ್ಯಾರಂಟಿ – ವಿದ್ಯುತ್, ಮೀಟರ್ ದರ ಏರಿಕೆ, 2ನೇ ಗ್ಯಾರಂಟಿ – ಕುಡಿಯುವ ನೀರಿನ ಬೆಲೆ ಏರಿಕೆ, 3ನೇ ಗ್ಯಾರಂಟಿ – ಸದ್ದಿಲ್ಲದೆ ಕೆಎಸ್​ಆರ್​ಟಿಸಿ ಟಿಕೆಟ್ ದರ ಏರಿಕೆ, 4ನೇ ಗ್ಯಾರಂಟಿ – ಮದ್ಯಪಾನದ ಬೆಲೆಯೂ ಏರಿಕೆ, 5ನೇ ಗ್ಯಾರಂಟಿ – ನಂದಿನಿ ಹಾಲಿನ ದರವೂ ಏರಿಕೆ, 6ನೇ ಗ್ಯಾರಂಟಿ – ಆಸ್ತಿ ನೋಂದಣಿ ಶುಲ್ಕ ಏರಿಕೆ, 7ನೇ ಗ್ಯಾರಂಟಿ – ಮೊಟ್ಟೆ, ಮಾಂಸದ ದರವೂ ಏರಿಕೆ” ಎಂದು ಟ್ವೀಟ್​ ಮಾಡಿದೆ.
ಇದನ್ನೂ ಓದಿ:ಮಹಿಳಾ ಐಪಿಎಸ್​ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ: ಮಾಜಿ ಡಿಜಿಪಿಗೆ 3 ವರ್ಷ ಶಿಕ್ಷೆ ಪ್ರಕಟ“ಕರ್ನಾಟಕದಲ್ಲಿ ಶಾಂತಿ ನೆಮ್ಮದಿ ಇಳಿಕೆ, ಜನಸಾಮಾನ್ಯರ ಆತಂಕ ಏರಿಕೆ!” ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್(Congress)ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 2 =
Remember me
