ಬೆಂಗಳೂರು:ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಈ ಬಾರಿಯ ನಾಡ ಹಬ್ಬ ದಸರಾವನ್ನು ಸರಳವಾಗಿ ಆಚರಿಸಲಾಗುವುದೆಂಬ ಸಚಿವ ಎಚ್.ಸಿ. ಮಹದೇವಪ್ಪ ಹೇಳಿಕೆಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಬಿಜೆಪಿ ಮೈಸೂರು ದಸರಾ ಅಂದರೆ ಈ ಸರ್ಕಾರ ಮೂಗು ಮುರಿಯುವುದೇಕೆ ಎಂದು ಕಾಂಗ್ರೆಸ್​ಅನ್ನು ಪ್ರಶ್ನಿಸಿದೆ. ಬಿಟ್ಟಿ ಶೋಕಿಗಳಿಗೆ ಕೋಟಿ ಕೋಟಿ ಖರ್ಚು ಮಾಡುವ ಸಿದ್ದರಾಮಯ್ಯನವರು ಸರ್ಕಾರ ದೀಗ ಮೈಸೂರು ದಸರಾ ಆಚರಣೆಯನ್ನು ಮಾತ್ರ ಸರಳವಾಗಿ ಆಚರಣೆ ಮಾಡಲು‌ ಮುಂದಾಗಿದೆ ಎಂದು ಕಿಡಿಕಾರಿದೆ.
ಬಿಟ್ಟಿ ಶೋಕಿಗಳಿಗೆ ಕೋಟಿ ಕೋಟಿ ಖರ್ಚು ಮಾಡುವ@siddaramaiahಅವರ ಸರ್ಕಾರ ಇದೀಗ ಮೈಸೂರು ದಸರಾ ಆಚರಣೆಯನ್ನು ಮಾತ್ರ ಸರಳವಾಗಿ ಆಚರಣೆ ಮಾಡಲು‌ ಮುಂದಾಗಿದೆ.ರಾಜೀವ್ ಗಾಂಧಿ ಪ್ರತಿಮೆ ಮಾಡುವುದಕ್ಕೆ, I.N.D.I ಮೈತ್ರಿಕೂಟದ ಸಭೆ ಮಾಡುವುದಕ್ಕೆ, ಅಲ್ಪಸಂಖ್ಯಾತರು, ಮಿಷನರಿಗಳ ಉದ್ಧಾರಕ್ಕಾಗಿ@INCKarnatakaಸರ್ಕಾರದ ಬಳಿ ಕೋಟಿ ಕೋಟಿ…pic.twitter.com/oFCFUSTpjn
ಇದನ್ನೂ ಓದಿ:ಮಾಧ್ಯಮ ಚರ್ಚೆಯಲ್ಲಿ ಭಯೋತ್ಪಾದಕರು; ಸುದ್ದಿ ವಾಹಿನಿಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ
ರಾಜೀವ್ ಗಾಂಧಿ ಪ್ರತಿಮೆ ಮಾಡುವುದಕ್ಕೆ, I.N.D.I.A ಮೈತ್ರಿಕೂಟದ ಸಭೆ ಮಾಡುವುದಕ್ಕೆ, ಅಲ್ಪಸಂಖ್ಯಾತರು, ಮಿಷನರಿಗಳ ಉದ್ಧಾರಕ್ಕಾಗಿ ಕಾಂಗ್ರೆಸ್​ ಸರ್ಕಾರದ ಬಳಿ ಕೋಟಿ ಕೋಟಿ ಹಣವಿದೆ. ಆದರೆ ನಾಡ ಹಬ್ಬ ದಸರಾ ಆಚರಿಸಲು, ಕನ್ನಡ ವಿವಿಗಳಿಗೆ ಅನುದಾನ ಕೊಡಲು, ಹಂಪಿ ಉತ್ಸವ ಆಚರಿಸಲು ಮಾತ್ರ ಸರ್ಕಾರಕ್ಕೆ ಬರ, ಅನುದಾನದ ಕೊರತೆ ಅಡ್ಡ ಬರುತ್ತದೆ.
ಈ ಹಿಂದೆಯೂ ಸಿದ್ದರಾಮಯ್ಯ ಅವರು ದಸರಾ ಆಚರಣೆಗೆ ಹಣವಿಲ್ಲವೆಂದು ಹೇಳಿ, ಅದ್ಧೂರಿಯಾಗಿ ರಾಜ್ಯದ ತುಂಬಾ ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಮೈಸೂರು ದಸರಾ ಅಂದರೆ ಈ ಸರ್ಕಾರ ಮೂಗು ಮುರಿಯುವುದೇಕೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದೆ.


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × five =
Remember me
