ಬೆಂಗಳೂರು:ಬಾಕಿ ಉಳಿಸಿಕೊಂಡಿರುವ ಬಿಲ್​ಅನ್ನು ಪಾವತಿಸುವಂತೆ ಆಗ್ರಹಿಸಿ ಸರ್ಕಾದರ ಮೇಲೆ ಒತ್ತಡ ಹೇರಿದ ಗುತ್ತಿಗೆದಾರರ ವಿರುದ್ಧ FIR ದಾಖಲಿಸಿರುವುದನ್ನು ರಾಜ್ಯ ಬಿಜೆಪಿ ಘಟಕ ಖಂಡಿಸಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದೆ.
ಭ್ರಷ್ಟಾಚಾರದ ಆರೋಪದಡಿ ಸೂಕ್ತ ಸಾಕ್ಷಿಗಳು ದೊರೆತರೂ, ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ಎಟಿಎಂ ಸರ್ಕಾರ, ತನ್ನ ತಪ್ಪುಗಳ ಬಗ್ಗೆ ಪ್ರಶ್ನಿಸುವವರನ್ನು ಶಿಕ್ಷಿಸಲು ಸದಾ ಸಿದ್ದವಾಗಿರುತ್ತದೆ. ಸರ್ಕಾರದ ಜನವಿರೋಧಿ ನೀತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವವರ ಮೇಲೆ ಎಫ್.ಐ.ಆರ್ ಮಾಡಿದ್ದಾಯ್ತು ಎಂದು ಕಿಡಿಕಾರಿದೆ.
ಈಗ ಸರ್ಕಾರದ ಲಂಚಗುಳಿತನವನ್ನು ಬಹಿರಂಗಪಡಿಸಿದರು ಎಂಬ ಕಾರಣಕ್ಕೆ ಗುತ್ತಿಗೆದಾರರ ವಿರುದ್ಧ ಸಹ ಎಫ್.ಐ.ಆರ್ ದಾಖಲಿಸಿ ತನ್ನ ದ್ವೇಷದ ರಾಜಕಾರಣವನ್ನು ಪ್ರದರ್ಶಿಸುತ್ತಿದೆ. ಸರ್ಕಾರದ ಈ ಭಂಡತನಕ್ಕೆ ಕೊನೆ ಯಾವಾಗ ಎಂದು ಪ್ರಶ್ನಿಸಿದೆ.
ಭ್ರಷ್ಟಾಚಾರದ ಆರೋಪದಡಿ ಸೂಕ್ತ ಸಾಕ್ಷಿಗಳು ದೊರೆತರೂ, ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ#ATMSarkara, ತನ್ನ ತಪ್ಪುಗಳ ಬಗ್ಗೆ ಪ್ರಶ್ನಿಸುವವರನ್ನು ಶಿಕ್ಷಿಸಲು ಸದಾ "ಸಿದ್ದ"ವಾಗಿರುತ್ತದೆ.ಸರ್ಕಾರದ ಜನವಿರೋಧಿ ನೀತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವವರ ಮೇಲೆ ಎಫ್.ಐ.ಆರ್ ಮಾಡಿದ್ದಾಯ್ತು.ಈಗ…pic.twitter.com/i1cJOC4UUy
ಇದನ್ನೂ ಓದಿ:VIDEO| ಮೆಟ್ರೋ ರೈಲಿನಲ್ಲಿ ನಿಲ್ಲುವ ಜಾಗಕ್ಕಾಗಿ ಕಿತ್ತಾಡಿಕೊಂಡ ಮಹಿಳೆಯರು
ರಾಜ್ಯ ಎಟಿಎಂ ಸರ್ಕಾರದಲ್ಲಿ ಶಾಸಕ-ಸಚಿವರ ಒಳಜಗಳಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸ್ವಪಕ್ಷೀಯ ಶಾಸಕರನ್ನೇ ನಿರ್ಲಕ್ಷಿಸುವ ಸಚಿವರುಗಳು, ಇನ್ನು ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾರೆಯೇ ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದೆ.
ಭ್ರಷ್ಟಾಚಾರ, ವರ್ಗಾವಣೆ ದಂಧೆ, ಒಳಜಗಳ, ಕುರ್ಚಿ ತಿಕ್ಕಾಟ, ಹೀಗೆ ಕಾಂಗ್ರೆಸ್​ ಸರ್ಕಾರದ ಸಾಲು ಸಾಲು ವೈಫಲ್ಯಗಳು ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ ಗೇರ್‌ನಲ್ಲಿರಿಸಿದೆ ಎಂದು ರಾಜ್ಯ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹರಿಹಾಯ್ದಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
