ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್​ ನಿರಾಕರಿಸಿರುವ ಕಾರಣ ಕಾಂಗ್ರೆಸ್​ ಸೇರಿರುವ ಮಾಜಿ ಸಿಎಂ ಜಗದೀಶ್​​ ಶೆಟ್ಟರ್​, ಲಕ್ಷ್ಮಣ್​ ಸವದಿ ಹಾಗೂ ಡಿ.ಕೆ. ಶಿವಕುಮಾರ್​​ ವಿರುದ್ಧ ಸರಣಿ ಟ್ವೀಟ್​ ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.
ಗೆಲ್ಲುವ ಅಭ್ಯರ್ಥಿಗಳಲ್ಲ, ಕಾಂಗ್ರೆಸ್​ಗೆ ನಿಲ್ಲುವ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ಟ್ವೀಟ್​ ಮಾಡುವ ಮೂಲಕ ಟೀಕಿಸಿದೆ.
ಈ ಕುರಿತು ಟ್ವೀಟ್​ ಮಾಡಿರುವ ಬಿಜೆಪಿ ಕಾಂಗ್ರೆಸ್​ಗೆ ಗೆಲ್ಲುವ ಅಭ್ಯರ್ಥಿಗಳಲ್ಲ ನಿಲ್ಲುವ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹಾಗಾಗಿ ಅಭ್ಯರ್ಥಿಗಳನ್ನು ಆಮದು ಮಾಡುವ ಸ್ಥಿತಿಗೆ ತಲುಪಿದೆ.
ಕಮಲವನ್ನೇ ಅರಳಿಸುತ್ತೇವೆಂದು ಜನ ತೀರ್ಮಾನ ಮಾಡಿರುವಾಗ, ನಿಮ್ಮ ಹಳೇ ಬಂಡಿಗೆ ಎಷ್ಟೇ ಬಣ್ಣ ಬಳಿದರೂ ಬಂಡಿ ಮಾತ್ರ ಹೊಸತಾಗುವುದಿಲ್ಲ ಎಂದು ವ್ಯಂಗ್ಯವಾಡಿದೆ.
ಗೆಲ್ಲುವ ಅಭ್ಯರ್ಥಿಗಳಲ್ಲ,@INCKarnatakaಕ್ಕೆ ನಿಲ್ಲುವ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹಾಗಾಗಿ ಅಭ್ಯರ್ಥಿಗಳನ್ನು ಆಮದು ಮಾಡುವ ಸ್ಥಿತಿಗೆ ತಲುಪಿದೆ.ಕಮಲವನ್ನೇ ಅರಳಿಸುತ್ತೇವೆಂದು ಜನ ತೀರ್ಮಾನ ಮಾಡಿರುವಾಗ, ನಿಮ್ಮ ಹಳೇ ಬಂಡಿಗೆ ಎಷ್ಟೇ ಬಣ್ಣ ಬಳಿದರೂ ಬಂಡಿ ಮಾತ್ರ ಹೊಸತಾಗುವುದಿಲ್ಲ.#BJPYeBharavasepic.twitter.com/JmZHiFjLRm
ಇದನ್ನೂ ಓದಿ:ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕೋರ್ಟ್​ ಶಾಕ್​: ಧಾರವಾಡಕ್ಕೆ ನೋ ಎಂಟ್ರಿ, ಅರ್ಜಿ ವಜಾ
ಇನ್ನು ಇತ್ತೀಚಿಗೆ ಪ್ರಕಟವಾದ ಕೆಪಿಸಿಸಿ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಕೃಷ್ಣಮೂರ್ತಿ ತಮ್ಮಗೆ ಟಿಕೆಟ್​ ಸಿಗದಿದ್ದಕ್ಕೆ ಡಿಕೆ ಸಹೋದರರ ವಿರುದ್ಧ ಆರೋಪವನ್ನು ಮಾಡಿದ್ಧಾರೆ.
ರಾಜ್ಯ ಕಾಂಗ್ರೆಸ್​ ಚುಕ್ಕಾಣಿ ಹಿಡಿದವರಿಗೆ ಚುಕ್ಕಾಣಿ‌ ಹಿಡಿದವರಿಗೆ ದುಡ್ಡೇ ದೊಡ್ಡಪ್ಪ. ಹಣಕ್ಕಾಗಿ ಯಾವ‌ ಮಟ್ಟಕ್ಕೂ ಇಳಿಯಲು‌ ತಯಾರಿರುವ ಡಿ.ಕೆ. ಶಿವಕುಮಾರ್​ ಹಣಕ್ಕಾಗಿ‌ ಟಿಕೆಟ್ ಮಾರಿಕೊಂಡು ಸ್ವಂತ ಸಮುದಾಯದವರಿಗೇ ಅನ್ಯಾಯ ಮಾಡಿದ್ದಾರೆಂಬ ಕೂಗು ದಾಸರಹಳ್ಳಿ ಕ್ಷೇತ್ರದಿಂದ ಕೇಳಿಬಂದಿದೆ. ಇನ್ನುಳಿದ ಕ್ಷೇತ್ರಗಳ ಕಥೆಯೂ ಇದೇ ಎಂದು ಟ್ವೀಟ್​ ಮಾಡಿ ಕಿಡಿಕಾರಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 17 =
Remember me
