ಬೆಂಗಳೂರು:ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ ಬಳಿಕ, ವಿದ್ಯುತ್ ದರದಲ್ಲಿ ಏರಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯುತ್‌ ದರ ಹೆಚ್ಚಳ ಮಾಡಿರುವುದನ್ನು ಸಾರ್ವಜನಿಕರು ಖಂಡಿಸುತ್ತಿದ್ದಾರೆ. ‘ಪ್ರತಿ ತಿಂಗಳು ನಮ್ಮ ಮನೆಗೆ ತಿಂಗಳಿಗೆ 300 ರೂ. ಒಳಗೆ ಕರೆಂಟ್ ಬಿಲ್ ಬರುತ್ತಿತ್ತು. ಈ ತಿಂಗಳು 600 ರೂಪಾಯಿಯಷ್ಟು ಬಿಲ್ ಬಂದಿದೆ’ ಎಂದು ಜನರು ಆರೋಪಿಸುತ್ತಿದ್ದಾರೆ.
ಈ ವಿಚಾರವಾಗಿ ರಾಜ್ಯ ಬಿಜೆಪಿ ಕಿಡಿಕಾರಿದ್ದು, ‘ಎಲ್ಲರಿಗೂ ಉಚಿತ ವಿದ್ಯುತ್ ಎಂದು ಘೋಷಿಸಿದ್ದ ಕಾಂಗ್ರೆಸ್, ಈಗ ಸಾವಿರ ಸಾವಿರ ರೂಪಾಯಿ ಬಿಲ್ಲು ಜಡಿಯುತ್ತಿದೆ’ ಎಂದು ಹೇಳಿದೆ. ಬಡಜನರ ಜೀವ ಹಿಂಡುತ್ತಿರುವ ಸರ್ಕಾರದ ಈ ನಡೆಗೆ ಜನರು ಆಕ್ರೋಶಗೊಂಡಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ:2-3 ಪಟ್ಟು ಜಾಸ್ತಿ ಬಂತು ವಿದ್ಯುತ್‌ ಬಿಲ್‌! ಆಕ್ರೋಶ ಹೊರಹಾಕುತ್ತಿರುವ ಜನ
‘ಎಟಿಎಂ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಹೀಗೆ ತಾವು ಬೆಲೆ ಏರಿಸುತ್ತಾ ಜನರ ಕುತ್ತಿಗೆ ಹಿಡಿದರೆ, ಅದೇ ಜನ ನಿಮ್ಮ ಖುರ್ಚಿ ಉರುಳಿಸುವುದು ಗ್ಯಾರಂಟಿ’ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಕಳೆದ ತಿಂಗಳ ವಿದ್ಯುತ್ ಬಿಲ್​ನಲ್ಲೂ, ಈ ತಿಂಗಳ ವಿದ್ಯುತ್ ಬಿಲ್​ನಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಇದರಿಂದಾಗಿ ಜನಸಾಮಾನ್ಯರು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಉಚಿತ ವಿದ್ಯುತ್ ಕೊಡುತ್ತೇವೆ ಎಂದಿದ್ದ ಸರ್ಕಾರ, ಇದೀಗ ಜನರ ಜೇಬಿಗೆ ಬರೆ ಎಳೆದಿದೆ ಎಂದು ಕಿಡಿಕಾರುತ್ತಿದ್ದಾರೆ. ಏಕಾಏಕಿ ಇಷ್ಟೊಂದು ಹೆಚ್ಚಳ ಮಾಡಿ, ಹಣ ವಸೂಲಿ ಮಾಡುತ್ತಿದ್ದಾರೆ. ಇಷ್ಟೊಂದು ಹಣ ಕಟ್ಟುವುದು ಎಲ್ಲಿಂದ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದು ಜನ ಹೈರಾಣಾಗುವಂತೆ ಮಾಡಿದೆ. ಸದ್ಯ ಈ ಹಿಂದಿನ ವಿದ್ಯತ್ ಬಿಲ್ ಮತ್ತು ಜೂನ್ ತಿಂಗಳ ಬಿಲ್​ನ್ನು ಹೋಲಿಕೆ ಮಾಡಿಕೊಂಡು ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಟ್ವಿಟರ್​ನಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಕಳೆದ ಮೇ ತಿಂಗಳಿನ ಬಿಲ್​ನಲ್ಲಿ 881 ರೂ. ಬಂದಿದ್ದರೆ, ಜೂನ್ ತಿಂಗಳಿನಲ್ಲಿ 2067 ರೂಪಾಯಿ ಬಂದಿದೆ.
ಇದನ್ನೂ ಓದಿ:ಸಚಿವೆ ನಿರ್ಮಲಾ ಸೀತಾರಾಮನ್ ಅಳಿಯ ಪಿಎಂಒ ಅಧಿಕಾರಿ; ಇವರಿಗಿರುವ ಮಹತ್ವದ ಜವಾಬ್ದಾರಿ ಏನು? ಇಲ್ಲಿದೆ ಮಾಹಿತಿ…
ಹುಬ್ಬಳ್ಳಿ: ಗ್ಯಾರಂಟಿ ಯೋಜನೆ ಜಾರಿಗೆ ಬಳಿಕ ವಿದ್ಯುತ್ ದರ ಹೆಚ್ಚು ಮಾಡಿರುವ ಹೆಸ್ಕಾಂ ವಿರುದ್ಧ ಉತ್ತರ ಕರ್ನಾಟಕ ವಾಣಿಜ್ಯೋದ್ಯಮ‌ ಸಂಸ್ಥೆಗಳು ಹೋರಾಟದ ಹಾದಿ ಹಿಡಿಯಲು ಮುಂದಾಗಿವೆ. ಕೆಇಆರ್‌ಸಿಯಿಂದ ಮನಸೋ ಇಚ್ಚೆ ವಿದ್ಯುತ್ ದರ ಏರಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಜನರು ಕಂಗಾಲಾಗಿದ್ದಾರೆ.
ಹೆಸ್ಕಾಂ ಕೆಇಆರ್‌ಸಿ ಮುಂದೆ ಪ್ರತಿ ಯುನಿಟ್​ಗೆ 50% ಹೆಚ್ಚಳದ ಬೇಡಿಕೆ ಇಟ್ಟಿತ್ತು. ಈ ರೀತಿಯ ಬೇಡಿಕೆ ಇಟ್ಟಾಗ ಕೇವಲ 20 ರಿಂದ 30 ಪೈಸೆ ರೂ. ಹೆಚ್ಚಳ ಮಾಡುತ್ತಿದ್ದ ಕೆಇಆರ್‌ಸಿ, ಈ ವರ್ಷ ಪ್ರತಿ ಯುನಿಟ್‌‌ಗೆ 2.54 ರೂ. ನಿಗದಿ ಮಾಡಿದೆ. ವಿದ್ಯುತ್ ದರ ಹೆಚ್ಚಿಗೆ ಮಾಡುವ ಮೂಲಕ ವಾಣಿಜ್ಯೋದ್ಯಮಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ಹಾಗೂ ಜನಸಾಮಾನ್ಯರಿಗೆ ಹೊರೆ ಹಾಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
