ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪಕ್ಷದ ರಾಜ್ಯ ಘಟಕ ಮಹತ್ವದ ಸಂಕಲ್ಪ ಮಾಡಿದೆ.
ಮುಂಬರಲು ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲೂ ಗೆಲ್ಲಬೇಕೆಂದು ಸಂಕಲ್ಪಿಸಿದೆ. ಪಕ್ಷದ ರಾಜ್ಯ ನಾಯಕರು ಜಯಘೋಷದ ಮೂಲಕ ಈ ಒತ್ತಾಸೆಗೆ ತಮ್ಮ ಸಹಮತವನ್ನೂ ವ್ಯಕ್ತಪಡಿಸಿದರು.
ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಲೋಕಸಭೆ ಚುನಾವಣೆಯಲ್ಲಿ ನಮ್ಮ‌ಗುರಿ 28 ಲೋಕಸಭಾ ಕ್ಷೇತ್ರ ಗೆಲ್ಲುವುದಾಗಿದೆ‌. ಈ‌ ಮೂಲಕ ಕಳೆದ ಹತ್ತು ವರ್ಷದಿಂದಲೂ ದೇಶಕ್ಕಾಗಿ ಹಗಲಿರುಳೂ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸೋಣ ಎಂದು ಕರೆ ನೀಡಿದರು.

ಈ ಹಿಂದಿನ‌ ಚುನಾವಣೆ ನಮ್ಮ ತಂದೆಯವಾದ ಬಿಮೆಸ್ ಯಡಿಯೂರಪ್ಪ ಇಪ್ಪತ್ತಕ್ಕಿಂತ ಹೆಚ್ಚಿನ‌ ಕ್ಷೇತ್ರ ಗೆಲ್ಲುತ್ತೇವೆಂದಾಗ ಹಾಸ್ಯ ಮಾಡಿದ್ದರು. ಆದರೆ ಜನ‌ ಆಶೀರ್ವಾದ ಮಾಡಿದ್ದರು, ಪಕ್ಷದ ನಾಯಕೆರಲ್ಲ ಅವರ ನಾಯಕತ್ವದಲ್ಲಿ‌ ಒಗ್ಗಟ್ಟಾಗಿ ಕೆಲಸ ಮಾಡಿದರು, ಇದರ ಪರಿಣಾಮ 25 ಸ್ಥಾನ ಗೆಲ್ಲಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಇನ್ನು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಸರ್ಕಾರ ರಚನೆಯಾಗಿ ಒಂದು ವರ್ಷವಾಗಿಲ್ಲ. ಆಗಲೇ ದರ್ಪ, ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಇವರಿಗೆ ತಕ್ಕಪಾಠ ಕಲಿಸಬೇಕು, ಲೋಕ ಸಭೆ ಚುನಾವಣೆಯಲ್ಲಿ ನಾವು 28 ಸ್ಥಾನವನ್ನೂ ಗೆಲ್ಲಬೇಕೆಂದು ಘೋಷಿಸಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.
ಹರ್ಭಜನ್ ಸಿಂಗ್ ಇಸ್ಲಾಂ ಸೇರಲು ತಯಾರಾಗಿದ್ದರೆಂದ ಪಾಕ್​​ ಮಾಜಿ ನಾಯಕ; ನಾನು ಹೆಮ್ಮೆಯ ಭಾರತೀಯನೆಂದ ಎಂದ ಭಜ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + two =
Remember me
