ಮಂಗಳೂರು:ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಹೊಸ ಸ್ವರೂಪ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್​ಕುಮಾರ್ ಕಟೀಲ್, ಈಗ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಪ್ರತಿ ಜಿಲ್ಲೆಯಲ್ಲಿ ನಡೆಸುವ ಹೊಸ ಯೋಜನೆ ರೂಪಿಸಿದ್ದಾರೆ. ಮೊದಲ ಕಾರ್ಯಕಾರಿಣಿ ಸಭೆ ರಾಜ್ಯಾಧ್ಯಕ್ಷರ ತವರು ನೆಲ ಮಂಗಳೂರಿನಲ್ಲಿ ನ.5ರಂದು ನಡೆಯಲಿದೆ. ಎರಡು ದಶಕಗಳ ಬಳಿಕ ಇಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ನಳಿನ್​ಕುಮಾರ್ ಕಟೀಲ್ ಜತೆ ‘ವಿಜಯವಾಣಿ’ ನಡೆಸಿದ ವಿಶೇಷ ಸಂದರ್ಶನದ ವಿವರ ಇಲ್ಲಿದೆ.
ಪ್ರತಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ದೇಶವೇನು?
ಪಕ್ಷದ ಪದಾಧಿಕಾರಿಗಳು ರಾಜ್ಯ ಪ್ರವಾಸ ಮಾಡಬೇಕೆಂಬ ಉದ್ದೇಶದಿಂದ ಪದಾಧಿಕಾರಿಗಳ ಸಭೆ ಹಾಗೂ ಕಾರ್ಯಕಾರಿಣಿ ಯನ್ನು ಪ್ರತಿ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಮೈಸೂರಿನಲ್ಲಿ ಪದಾಧಿಕಾರಿಗಳ ಸಭೆ ನಡೆದಿದೆ. ಕಾರ್ಯಕಾರಿಣಿ ಸಭೆ ನ.5ರಂದು ಮಂಗಳೂರಿನಲ್ಲಿ ನಡೆಯಲಿದೆ. ಇದರಿಂದ ನಾಯಕರಿಗೆ ಹೊಸ ಅನುಭವದ ಜತೆ ಆಯಾ ಜಿಲ್ಲೆಯ ಸಾಮಾಜಿಕ, ಭೌಗೋಳಿಕ ಪರಿಚಯವೂ ಆಗುತ್ತದೆ. ಸಭೆ ನಡೆಯುವ ಜಿಲ್ಲೆಯ ಕಾರ್ಯಕರ್ತರಿಗೂ ಇದರಿಂದ ಪ್ರೇರಣೆ ದೊರೆಯುತ್ತದೆ.
ಮಂಗಳೂರಿನ ಸಭೆಯ ಸ್ವರೂಪ, ಮುಖ್ಯ ಕಾರ್ಯಸೂಚಿ ಏನು?
ಕಾರ್ಯಕಾರಿಣಿ ಉದ್ಘಾಟನೆ ಬಳಿಕ ಪ್ರತ್ಯೇಕ ವಾಗಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ. ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ವಿಭಾಗವಾರು ವರದಿ ಪಡೆಯಲಿದ್ದಾರೆ. ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿಚಾರ ಮಂಡನೆ ಹಾಗೂ ನಿರ್ಣಯ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣ, ಪ್ರವಾಹದ ಸ್ಥಿತಿಗತಿ, ಬೆಳಗಾವಿ ಲೋಕಸಭೆ ಸಹಿತ ಇತರ ಉಪ ಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆ, ಪಕ್ಷದ ಮುಂದಿನ ಕಾರ್ಯಯೋಜನೆಗಳ ಚರ್ಚೆ ನಡೆಯಲಿದೆ.
ನೀವು ಅಧ್ಯಕ್ಷರಾದ ಬಳಿಕ ಯಾವ ರೀತಿ ಪಕ್ಷ ಸಂಘಟನೆ ಕಾರ್ಯ ನಡೆದಿದೆ?
ರಾಜ್ಯದಲ್ಲಿ ಪಕ್ಷದ 38 ಸಂಘಟನಾತ್ಮಕ ಜಿಲ್ಲೆಗಳಿವೆ. ಎಂಟು ಬಾರಿ ರಾಜ್ಯ ಪ್ರವಾಸ ಮಾಡಿದ್ದೇನೆ. ಎಲ್ಲ ಜಿಲ್ಲೆಗಳಿಗೆ ಕನಿಷ್ಠ 5 ಬಾರಿ ಭೇಟಿ ನೀಡಿದ್ದೇನೆ. ಪಕ್ಷದ 311 ಮಂಡಲಗಳ ಪೈಕಿ 220ಕ್ಕೆ ಹೋಗಿದ್ದೇನೆ. ಜಿಲ್ಲೆ, ಮಂಡಲ, ಬೂತ್ ಮಟ್ಟದ ಸಮಿತಿಗಳ ರಚನೆಯಾಗಿದೆ. ಜಿಲ್ಲಾಧ್ಯಕ್ಷ, ಮಂಡಲ ಅಧ್ಯಕ್ಷ, ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿಗೆ ವಯೋಮಿತಿ ನಿಗದಿಪಡಿಸಿದ್ದೇವೆ. ಎಂಟು ದಿನಕ್ಕೊಮ್ಮೆ ಪ್ರಧಾನ ಕಾರ್ಯದರ್ಶಿಗಳ ಸಭೆ, 15 ದಿನಕ್ಕೊಮ್ಮೆ ರಾಜ್ಯ ಪದಾಧಿಕಾರಿಗಳ ಸಭೆ, ತಿಂಗಳಿಗೊಮ್ಮೆ ವಿಶೇಷ ಕಾರ್ಯಕಾರಿಣಿ, 3 ತಿಂಗಳಿಗೊಮ್ಮೆ ಶಾಸಕರನ್ನೂ ಒಳಗೊಂಡ ಪೂರ್ಣ ಕಾರ್ಯಕಾರಿಣಿ ಸಭೆ ನಡೆಸುವ ಪಕ್ಷ ಸಂಘಟನೆಯ ಕಾರ್ಯ ನಿರಂತರ ನಡೆದಿದೆ.
ಮುಂದಿನ ಹೊಸ ಕಾರ್ಯ ಯೋಜನೆ?
ಪ್ರತಿ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸುವಂತೆ ಪಕ್ಷದ ವತಿಯಿಂದ ಪ್ರತಿ ಜಿಲ್ಲೆಗಳಲ್ಲಿ ಎರಡು ತಿಂಗಳಿಗೊಮ್ಮೆ ಸಚಿವರ ಸಭೆ ನಡೆಸಲು ಉದ್ದೇಶಿಸಿದ್ದೇವೆ. ಎಲ್ಲ ಸಚಿವರು ಒಂದು ಜಿಲ್ಲೆಗೆ ಬರುವುದರಿಂದ ಸಮಸ್ಯೆಗಳ ಅಧ್ಯಯನದ ಜತೆಗೆ ಪಕ್ಷದ ಸಂಘಟನೆಗೆ ಹೆಚ್ಚಿನ ನೆರವಾಗಲಿದೆ ಎನ್ನುವುದು ನಮ್ಮ ಅಭಿಪ್ರಾಯ.
ಗ್ರಾಪಂ ಚುನಾವಣೆಗೆ ಹೇಗೆ ಸಜ್ಜಾಗಿದ್ದೀರಿ?
ಪಂಚಾಯಿತಿ ಮಟ್ಟದಲ್ಲಿ ಪಕ್ಷದ ಕುಟುಂಬ ಮಿಲನ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಮಹಿಳೆ, ಹಿಂದುಳಿದ ವರ್ಗ, ಸಾಮಾನ್ಯ ಹೀಗೆ 5 ಮಂದಿಯ ಪಂಚರತ್ನ ಎನ್ನುವ ತಂಡ ರಚಿಸಿದ್ದೇವೆ. ಹಿಂದಿನ ಚುನಾವಣೆಗಳ ಸಂದರ್ಭ ನೇಮಕ ಮಾಡಿದ್ದ ಪೇಜ್ ಪ್ರಮುಖ್​ಗಳನ್ನು ಸಕ್ರಿಯಗೊಳಿಸಿದ್ದೇವೆ. ಎಲ್ಲ ಕಡೆ ಪೇಜ್ ಪ್ರಮುಖರನ್ನು ಅಧಿಕೃತಗೊಳಿಸಿ ವರ್ಷವಿಡೀ ಮತದಾರರ ಸಂಪರ್ಕದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.
ಜಿದ್ದಾಜಿದ್ದಿನ ಕಣದಲ್ಲಿ ಮತದಾನ ಆಗಿದ್ದೆಷ್ಟು? ಯಾರಿಗೆ ಲಾಭ-ನಷ್ಟ ಎಂಬ ಜಿಜ್ಞಾಸೆ ಮೂಡಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 3 =
Remember me
