ಶಿವಮೊಗ್ಗ:ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಬಿಟ್ಟು, ಬೇರೆಲ್ಲಿಯೂ ಕಾಂಗ್ರೆಸ್ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಶಿವಮೊಗ್ಗದಲ್ಲ ಮಾತನಾಡುತ್ತಾ, ಕಾಂಗ್ರೆಸ್ ಕಾರ್ಯಕರ್ತರಿಗೆ ಇವತ್ತು ಧ್ವನಿ ಇಲ್ಲ. ಹೀಗಾಗಿ ಪ್ರಜಾಧ್ವನಿ ಹಿಡಿದುಕೊಂಡು ರಾಜ್ಯದಾದ್ಯಂತ ಸಂಚಾರ ಆರಂಭಿಸಿದ್ದಾರೆ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್​ನ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಕಾರ್ಯಕಾರಿಣಿಯೇ ನಡೆದಿಲ್ಲ. ಅದನ್ನು ಮಾಡಲು ಹೋದರೆ ರಾಜ್ಯವಲ್ಲದೆ, ಜಿಲ್ಲಾ ಮಟ್ಟದಲ್ಲಿಯೇ ಪಕ್ಷದಲ್ಲಿ ಒಡಕು ಮೂಡಲಿದೆ. ಜಿಲ್ಲಾಧ್ಯಕ್ಷರನ್ನೂ ಬದಲಾವಣೆ ಮಾಡದ ಸ್ಥಿತಿಯಲ್ಲಿ ಡಿಕೆಶಿ ಇದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದರು.
ಜಗತ್ತಿನಲ್ಲಿ ಅಧ್ಬುತ ಬದಲಾವಣೆ ಆಗುತ್ತಿದ್ದು, ಅಮೇರಿಕಾದ ಜತೆಗೆ ನಿಲ್ಲುವ ಯಾವುದಾದರೊಂದು ದೇಶವಿದ್ದರೆ ಅದು ಭಾರತ ಮಾತ್ರ ಎಂದು ಆ ದೇಶದ ಅಧ್ಯಕ್ಷರೇ ಹೇಳಿದ್ದಾರೆ. ಇದೇ ಮಾತನ್ನು ಜಪಾನ್ ಪ್ರಧಾನಿಯೂ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವ ಬಗ್ಗೆ ಗುಣಗಾನ ನಡೆದಿದೆ. ಕಾಂಗ್ರೆಸ್‌ ಆಡಳಿತದಲ್ಲಿ ಭಾರತ ಭಿಕ್ಷುಕರ, ಸಾಲಗಾರರ ಹಾಗೂ ಹಾವಾಡಿಗರ ದೇಶವೆಂದು ಗುರುತಿಸಲಾಗಿತ್ತು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಕೋವಿಡ್ ವೇಳೆ ವಿದೇಶಗಳು ಔಷಧ ಹಾಗೂ ಲಸಿಕೆಗಾಗಿ ಭಾರತದತ್ತ ಕೈ ಚಾಚಿದವು. ಆದರೆ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಲಸಿಕೆ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದರು. ಆದರೆ, ಅವರೇ ಕದ್ದು ಮುಚ್ಚಿ ರಾತ್ರಿಯಲ್ಲಿ ಲಸಿಕೆ ಪಡೆದರು. ಜಗತ್ತಿಗೆ ಆಸರೆಯಾಗಿ ಇಂದು ಭಾರತ ನಿಂತಿದೆ. ನೇಪಾಳ ಹಾಗೂ ಶ್ರೀಲಂಕಾದ ಸಂಕಷ್ಟದಲ್ಲಿ ಭಾರತ ಭಾಗಿಯಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿದೆ. ಕಾಶಿ, ಮಥುರಾ ಬೆಳಗುತ್ತಿದೆ. ರಾಜ್ಯದಲ್ಲಿ ಕೇಸರಿ ಅಲೆ ಎದ್ದು ಕಾಣುತ್ತಿದೆ. ಪ್ರಧಾನಿ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಗರೀಬಿ ಹಠಾವೋ ಘೋಷಣೆ ಮಾಡಿತು. ಆದರೆ ಕೇವಲ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್ ಅವರ ಗರೀಭೀ ಹಠಾವೋ ಆಯಿತು. ಆದರೆ, ಪ್ರಧಾನಿ ನರೇಂದ್ರ ನೇತೃತ್ವದ ಆಡಳಿತದಲ್ಲಿ ನಿಜವಾದ ಗರೀಬಿ ಹಠಾವೋ ನಡೆದಿದೆ ಎಂದರು.
ಸಿದ್ದರಾಮಯ್ಯ ದೇವರಾಣೆ ಮತ್ತೆ ಸಿಎಂ ಆಗುವುದಿಲ್ಲ. ಕಾಂಗ್ರೆಸ್​ನಲ್ಲಿ ಈಗಾಗಲೇ ಭಿನ್ನಮತ ಆರಂಭವಾಗಿದೆ. ಜೆಡಿಎಸ್​ನಲ್ಲಿ ಕುಟುಂಬ ಜಗಳ ಶುರುವಾಗಿದೆ. ಸಿದ್ದರಾಮಯ್ಯಗೆ ಟಕ್ಕರ್ ನೀಡಲು ನಮಗೆ ಈಶ್ವರಪ್ಪ ಬೇಕು. ಬೊಮ್ಮಾಯಿ ಹಾಗೂ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗಳಿಸುತ್ತೇವೆ. ಸಂಗೀತ ಕುರ್ಚಿಯಂತಾಗಿರುವ ಕಾಂಗ್ರೆಸ್​ನಲ್ಲಿ ಮೂರು ಹೋಳಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + five =
Remember me
