|ಮೃತ್ಯುಂಜಯ ಕಪಗಲ್ಬೆಂಗಳೂರು
ರಾಜ್ಯದಲ್ಲಿ ಸ್ವಂತ ಬಲದ ಮತ್ತೊಮ್ಮೆ ಅಧಿಕಾರಕ್ಕೆ ಬರಲೇಬೇಕು ಎಂದು ಬಿಜೆಪಿ ಪಣತೊಟ್ಟಿದ್ದು, ವ್ಯೂಹಾತ್ಮಕ ತಂತ್ರಗಾರಿಕೆಯ ಮತ್ತೊಂದು ಅಜೆಂಡಾ ಜಾರಿಗೆ ಮುಂದಾಗಿದೆ. ಪಕ್ಷವು 39 ಸಂಘಟನಾತ್ಮಕ ಜಿಲ್ಲೆಗಳು, 3-4 ಜಿಲ್ಲೆಗಳಿಗೊಂದು 10 ವಿಭಾಗಗಳನ್ನು ಹೊಂದಿದ್ದು, ಪ್ರತಿ ವಿಭಾಗಕ್ಕೊಬ್ಬ ಕೇಂದ್ರ ಉಸ್ತುವಾರಿ ಸಚಿವರು ನೇಮಕವಾಗಲಿದ್ದಾರೆ.
ಕೇಂದ್ರ ಸಚಿವರಾದ ಧಮೇಂದ್ರ ಪ್ರಧಾನ್, ಸ್ಮೃತಿ ಇರಾನಿ, ಕ್ರಿಶನ್ ಪಾಲ್ ಗುರ್ಜರ್, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಹೆಸರುಗಳು ಅಂತಿಮಗೊಂಡಿವೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದ ನೆರೆ-ಹೊರೆಯ ರಾಜ್ಯಗಳನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರ ಹೆಸರುಗಳು ಪರಿಗಣನೆಯಲ್ಲಿದ್ದು, ವರಿಷ್ಠರು ಗ್ರೀನ್ ಸಿಗ್ನಲ್ ನೀಡುವುದು ಬಾಕಿಯಿದೆ.
ಉಸ್ತುವಾರಿ ಹೊಣೆಹೊತ್ತವರು ನವೆಂಬರ್​ನಲ್ಲಿ ಫೀಲ್ಡ್​ಗೆ ಇಳಿಯಲಿದ್ದಾರೆ. ಅದಕ್ಕೂ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಆಗಮಿಸಿ ಕಾರ್ಯಯೋಜನೆಗೆ ಅಂತಿಮ ಸ್ಪರ್ಶ ನೀಡಲಿದ್ದಾರೆ. ‘ಆಡಳಿತ ವಿರೋಧಿ ಅಲೆ’ಯನ್ನು ಮೆಟ್ಟಿನಿಂತು, ಮಿಷನ್ 150 ಗುರಿ ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೂಪರೇಷೆ ಸಿದ್ಧಪಡಿಸಿ, ವರಿಷ್ಠರಿಗೆ ವರದಿ ಸಲ್ಲಿಸುವುದು ಉಸ್ತುವಾರಿ ಮೊದಲ ಕೆಲಸ. ಉಸ್ತುವಾರಿ ವಿಭಾಗದ ವ್ಯಾಪ್ತಿಗೆ ಬರುವ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ವಪಕ್ಷದ ಶಾಸಕರಿದ್ದರೆ ಜನಾಭಿಪ್ರಾಯ, ಪ್ರತಿಪಕ್ಷದ ಶಾಸಕರಿದ್ದರೆ ವಸ್ತುಸ್ಥಿತಿ, ಅಭಿವೃದ್ಧಿ ಯೋಜನೆಗಳ ಜನರಿಗೆ ತಲುಪಿಸಿದ ರೀತಿ, ಟಿಕೆಟ್ ಆಕಾಂಕ್ಷೆಗಳ ಬಗ್ಗೆಯೂ ಸಮೀಕ್ಷೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಜ್ಯ ನಾಯಕರಿಂದ ನಿರೀಕ್ಷೆ:ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ವ್ಯಾಪಕ ಪ್ರಚಾರ, ಪ್ರಗತಿ ವರದಿ ಜನರ ಮುಂದಿಟ್ಟು ಜನರ ವಿಶ್ವಾಸ ಗಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಾರಥ್ಯದ ತಂಡ ‘ಜನಸಂಕಲ್ಪ’ ಯಾತ್ರೆ ಆರಂಭಿಸಿದೆ. ಸಂಘಟನಾ ಕಾರ್ಯಯೋಜನೆ ಜಾರಿ, ಚುನಾವಣೆಗೆ ಶ್ರಮಿಸಲು ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷರ ಮತ್ತೊಂದು ತಂಡವು ಸಂಘಟನಾ ಪ್ರವಾಸ ಕೈಗೊಂಡಿದೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿ, ಪ್ರತಿಪಕ್ಷಗಳ ಅಪಪ್ರಚಾರಕ್ಕೆ ತಿರುಗೇಟು ನೀಡಿ, ಪೂರಕ ವಾತಾವರಣ ಸೃಷ್ಟಿಸಿದರೆ, ಮುಂದಿನ ಕೆಲಸ ಸಲೀಸು ಎನ್ನುವುದು ವರಿಷ್ಠರ ಚಿಂತನೆ ಹಿಮಾಚಲಪ್ರದೇಶ, ಗುಜರಾತ್ ವಿಧಾನಸಭೆ ಚುನಾವಣೆಗಳ ಬಳಿಕ ಕೇಂದ್ರದ ಎಲ್ಲ ನಾಯಕರು ರಾಜ್ಯದಲ್ಲಿ ಬಿಡಾರ ಹೂಡಲಿದ್ದು, ಪೂರ್ವನಿಯೋಜಿತ ಕಾರ್ಯಯೋಜನೆ ಪ್ರಕಾರ ಮೋದಿ ಕಾರ್ಯಕ್ರಮಗಳ ಸಂಖ್ಯೆ ಕ್ರಮೇಣ ಹೆಚ್ಚಾಗಲಿವೆ ಎನ್ನಲಾಗುತ್ತಿದೆ.
ಅನುಭವದ ಪಾಠ:ಕಮಲಪಡೆಯ ಭದ್ರಕೋಟೆ ಗುಜರಾತ್​ನಲ್ಲಿ ಮತ್ತೊಂದು ಅಗ್ನಿಪರೀಕ್ಷೆಗೆ ವೇದಿಕೆ ಸಜ್ಜಾಗುತ್ತಿದ್ದು, ಸದ್ಯೋಭವಿಷತ್ತಿನಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಅಜೇಯ ಓಟಕ್ಕೆ ನರೇಂದ್ರ ಮೋದಿ, ಅಮಿತ್ ಷಾ ಜೋಡಿ ಕಾರ್ಯತಂತ್ರ ಹೆಣೆದಿದೆ. ‘ಆಡಳಿತ ವಿರೋಧಿ ಅಲೆ’ ಪ್ರತಿಪಕ್ಷಗಳ ಸಡ್ಡು ಕಟ್ಟಿಹಾಕುವುದಕ್ಕೆ ಉರುಳಿಸಿದ ರಣತಂತ್ರಗಳ ದಾಳ, ಕ್ಷೇತ್ರ ಕಾರ್ಯಾಚರಣೆ ಬಗ್ಗೆ ಪಕ್ಷದ ರಾಜ್ಯ ನಾಯಕರಿಗೂ ಅನುಭವದ ಪಾಠ ಹೇಳಿಕೊಡುತ್ತಿದೆ. ಕಾರ್ಯಾನುಭವದ ಮುಖೇನ ತಿಳಿಯಲೆಂದು ಸರತಿ ಮೇಲೆ ರಾಜ್ಯ ಮುಖಂಡರಿಗೆ ಗುಜರಾತ್​ಗೆ ಬುಲಾವ್ ನೀಡಲು ವರಿಷ್ಠರು ತೀರ್ವನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೆ ಕೇಂದ್ರ ಸಚಿವ ಭಗವಂತ್ ಖೂಬಾ, ಸಂಸದ ಉಮೇಶ್ ಜಾಧವ್, ಶಾಸಕ ಪಿ.ರಾಜೀವ್ ಒಂದು ಸುತ್ತು ಪ್ರವಾಸ ಮಾಡಿದ್ದು ಎರಡನೇ ಕಂತಿನಲ್ಲಿ ತೆರಳಲಿರುವ ನಾಯಕರ ಪಟ್ಟಿ ಸಿದ್ಧತೆ ಹಂತದಲ್ಲಿದೆ. ರಾಜ್ಯದವರೇ ಆದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ಆ ರಾಜ್ಯದ ಚುನಾವಣೆ ಉಸ್ತುವಾರಿಗಳಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಶೋಭಾ ಕರಂದ್ಲಾಜೆಗೂ ಜವಾಬ್ದಾರಿ ಒಪ್ಪಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್, ರಮ್ಯಾಗೇ ನೋ ಎಂಟ್ರಿ; ಕೋಪಗೊಂಡು ವಾಪಸ್​ ಹೋದ ನಟಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
