ಬೆಂಗಳೂರು:ಧಿಕ್ಕಾರವಿರಲಿ ಕಾಂಗ್ರೆಸ್ ಸರ್ಕಾರಕ್ಕೆ(Congress Government), ಧಿಕ್ಕಾರವಿರಲಿ ಹಿಟ್ಲರ್ ಸರ್ಕಾರಕ್ಕೆ ಎಂದು ಬಿಜೆಪಿ(BJP)ಮಾಡಿದ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್, ಟ್ವೀಟ್​ ಮೂಲಕ ಪ್ರತ್ಯುತ್ತರ ನೀಡಿದೆ.
ಇದನ್ನೂ ಓದಿ:ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಐಸ್ ಕ್ರೀಮ್ ತಿಂದ 70 ಮಂದಿ ಅಸ್ವಸ್ಥ
ಬಿಜೆಪಿ ಮಾಡಿದ ಟ್ವೀಟ್(Tweet)ಹೀಗಿದೆ, “ಧಿಕ್ಕಾರವಿರಲಿ ಕಾಂಗ್ರೆಸ್ ಸರ್ಕಾರಕ್ಕೆ…ಧಿಕ್ಕಾರವಿರಲಿ ಹಿಟ್ಲರ್ ಸರ್ಕಾರಕ್ಕೆ…200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ರಾಜ್ಯವನ್ನು ನಂಬಿಸಿ, ರಾಜ್ಯದ ಜನರ ನಂಬಿಕೆದ್ರೋಹ ಮಾಡಿದ್ದಕ್ಕಾಗಿ, ಏಕಾಏಕಿ ವಿದ್ಯುತ್ ದರ ಹೆಚ್ಚಿಸಿದ್ದಕ್ಕಾಗಿ, ಧಿಕ್ಕಾರವಿರಲಿ ಕಾಂಗ್ರೆಸ್ ಸರ್ಕಾರಕ್ಕೆ” ಎಂದು ಟ್ವೀಟ್ ಮಾಡಿದೆ.

“ಹಾಲಿಗೆ ನೀಡುವ ಪ್ರೋತ್ಸಾಹಧನವನ್ನು ಕಡಿತಗೊಳಿಸಿ, ರಾಜ್ಯದ ಹೈನುಗಾರರ ಬದುಕು ಹೈರಾಣಾಗಿಸಿದ್ದಕ್ಕಾಗಿ, ಧಿಕ್ಕಾರವಿರಲಿ ಕಾಂಗ್ರೆಸ್ ಸರ್ಕಾರಕ್ಕೆ. ಬಾಬಾಸಾಹೇಬರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಗೋಹತ್ಯೆ ನಿಷೇಧ ಕಾನೂನಿನ ವಿರುದ್ಧ ಸಂಚು ರೂಪಿಸುತ್ತಿರುವುದಕ್ಕಾಗಿ, ಧಿಕ್ಕಾರವಿರಲಿ ಕಾಂಗ್ರೆಸ್ ಸರ್ಕಾರಕ್ಕೆ. ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ನಾಳೆ ಬೆಳಗ್ಗೆ 11 ಗಂಟೆಗೆ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ. ಎಲ್ಲರೂ ಪಾಲ್ಗೊಳ್ಳೋಣ, ಕಿವುಡು ಸರಕಾರವನ್ನು ಎಚ್ಚರಿಸೋಣ” ಎಂದು ಟ್ವೀಟ್ ಮಾಡಿತ್ತು.
ಇದನ್ನೂ ಓದಿ:ಶಾಲೆಗಳಲ್ಲಿ ವಿಷಪ್ರಾಶನ! ಆಫ್ಘಾನಿಸ್ತಾನದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು…
ಇದಕ್ಕೆ ಪ್ರತ್ಯುತ್ತರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ನಿಮ್ಮ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿದ್ದಕ್ಕಾ? ನೀವು ಹಾಲು ಉತ್ಪಾದಕರಿಗೆ 7 ತಿಂಗಳಿಂದ ಪ್ರೋತ್ಸಾಹ ಧನ ನೀಡದಿರುವುದಕ್ಕಾ? ತಮ್ಮದೇ ನಿರ್ಧಾರಗಳ ವಿರುದ್ದ ತಾವೇ ಪ್ರತಿಭಟನೆ ಮಾಡುವ ವಿಶಿಷ್ಟ ರಾಜಕೀಯ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ!!” ಎಂದು ಟ್ವೀಟ್​ನಲ್ಲಿ ತಿಳಿಸಿದೆ.
ಕಾರು ಅಪಘಾತದಲ್ಲಿ ಮೃತಪಟ್ಟ ಮಲಯಾಳಂ ನಟ ಕೊಲ್ಲಂ ಸುಧಿ; ಕಂಬನಿ ಮಿಡಿದ ಚಿತ್ರರಂಗ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 − 4 =
Remember me
