ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಗೆ ಒಂಬತ್ತು ತಿಂಗಳಷ್ಟೇ ಬಾಕಿ ಉಳಿದಿರುವುದರಿಂದ ಸಚಿವರ ಕಾರ್ಯವೈಖರಿಯ ಮೇಲೆ ತೀವ್ರ ನಿಗಾ ಇರಿಸುವ ಮೂಲಕ ಮತಸಮರಕ್ಕೆ ಬಿಜೆಪಿ ಸಜ್ಜಾಗುತ್ತಿದೆ.
ಚುನಾವಣಾ ವರ್ಷದಲ್ಲಿ ಸರ್ಕಾರದ ಇಮೇಜ್ ವೃದ್ಧಿಯಾಗುವ ರೀತಿಯಲ್ಲಿ ಬಹುತೇಕ ಸಚಿವರ ಕಾರ್ಯವೈಖರಿ ಇಲ್ಲ. ಆದ್ದರಿಂದಲೇ ಪಕ್ಷದ ವರಿಷ್ಠರು ತಲೆ ಕೆಡಿಸಿಕೊಂಡಿದ್ದಾರೆ. ಹಿಂದೆ ಸಾಕಷ್ಟು ಎಚ್ಚರಿಕೆ ನೀಡಿದರೂ ಸಚಿವರು ಅದಕ್ಕೆ ಸೊಪು್ಪ ಹಾಕಿಲ್ಲ. ಹೀಗಾಗಿ ಪಕ್ಷ ಈಗ ಕಠಿಣ ತೀರ್ವನಕ್ಕೆ ಮುಂದಾಗಿದೆ.
ಸಚಿವರ ಕಾರ್ಯವೈಖರಿ ಕುರಿತಂತೆ ಪಕ್ಷದ ವರಿಷ್ಠರಿಗೂ ದೂರು ಹೋಗಿವೆ. ಸರ್ಕಾರ ಒಂದು ತಂಡವಾಗಿ ಕೆಲಸ ಮಾಡುತ್ತಿಲ್ಲವೆಂಬ ಆರೋಪಗಳೂ ತಲುಪಿವೆ. ಆ ಹಿನ್ನೆಲೆಯಲ್ಲಿ ವರಿಷ್ಠರು ಕೆಲವೊಂದು ಸೂಚನೆಗಳನ್ನು ರಾಜ್ಯ ಘಟಕಕ್ಕೆ ರವಾನಿಸಿದ್ದಾರೆ. ಆ ಸೂಚನೆಗಳ ಅನುಷ್ಠಾನಕ್ಕೆ ರಾಜ್ಯ ಘಟಕ ಯೋಜನೆ ರೂಪಿಸಿದೆ. ಚುನಾವಣೆ ಸಿದ್ಧತೆಗೆ ತಕ್ಕಂತೆ ಸಚಿವರ ಕಾರ್ಯವೈಖರಿಯೂ ಇರಬೇಕಾಗಿದೆ. ಸರ್ಕಾರ ಚುರುಕಾಗಿದ್ದರೆ ಇಮೇಜ್ ತಾನಾಗಿಯೇ ವೃದ್ಧಿಯಾಗುತ್ತದೆ. ಆ ಹಿನ್ನೆಲೆಯಲ್ಲಿ ನಿಗಾ ವಹಿಸುವ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಬಜೆಟ್ ಮಂಡನೆಯಾದ ಒಂದೇ ತಿಂಗಳಿನಲ್ಲಿ ಆದೇಶಗಳನ್ನು ಹೊರಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುರುಕಾಗಿ ಈ ಕೆಲಸ ಮಾಡಿದ್ದಾರೆ. ಆದರೆ, ಅದಕ್ಕೆ ಪೂರಕವಾಗಿ ಸಚಿವರ ಕಾರ್ಯವೈಖರಿ ಇಲ್ಲದಿರುವುದನ್ನು ವರಿಷ್ಠರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆಗಸ್ಟ್​ನಿಂದ ಚುನಾವಣೆಯ ಕೆಲಸಗಳು ಪಕ್ಷದಲ್ಲಿ ತೀವ್ರತೆ ಪಡೆದುಕೊಳ್ಳಲಿವೆ. ಡಿಸೆಂಬರ್​ನಿಂದ ವರಿಷ್ಠರು ಹಾಗೂ ಕೇಂದ್ರ ಸಚಿವರ ತಂಡ ರಾಜ್ಯದಲ್ಲಿ ಬೀಡು ಬಿಡಲಿದೆ.
ನಿಗಾ ಯಾವ ರೀತಿ?ಪ್ರತಿಯೊಬ್ಬ ಸಚಿವರು ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಪಕ್ಷಕ್ಕೆ ಕಳುಹಿಸಿಕೊಡಬೇಕು. ಇಲಾಖೆಯ ಪ್ರಗತಿ ಪರಿಶೀಲನೆ ಎಷ್ಟು ಮಾಡಲಾಗಿದೆ? ಎಷ್ಟು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ? ಕಾರ್ಯಕರ್ತರು ಹಾಗೂ ಶಾಸಕರಿಗೆ ಹೇಗೆ ಸ್ಪಂದಿಸಲಾಗಿದೆ? ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಸುದ್ದಿಗಳನ್ನು ಹಾಕಲಾಗಿದೆ? ಬಜೆಟ್ ಅನುಷ್ಠಾನ ಯಾವ ಹಂತದಲ್ಲಿದೆ? ಪಕ್ಷ, ಸರ್ಕಾರದ ವಿರುದ್ಧದ ಟೀಕೆಗಳಿಗೆ ಎಷ್ಟು ಸಮರ್ಥವಾಗಿ ಉತ್ತರ ನೀಡಿದ್ದಾರೆ ಎಂಬ ಮಾಹಿತಿ ನೀಡಬೇಕಾಗುತ್ತದೆ.
ಸಚಿವರಿಂದ ಪಕ್ಷಕ್ಕೆ ಬರುವ ಮಾಹಿತಿಯನ್ನು ಕ್ರೋಡೀಕರಿಸಿ, ಸಮಗ್ರ ವರದಿಯನ್ನು ವರಿಷ್ಠರಿಗೆ ರವಾನಿಸಲಾಗುತ್ತದೆ. ವರದಿಯ ಆಧಾರದಲ್ಲಿ ವರಿಷ್ಠರು ನೀಡುವ ಸಲಹೆಯನ್ನು ಸಚಿವರಿಗೆ ತಲುಪಿಸಿ ಇನ್ನಷ್ಟು ಚುರುಕುಗೊಳಿಸುವುದು ಪಕ್ಷದ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿವೆ.
ಸಚಿವರ ಬಗೆಗಿನ ದೂರುಗಳೇನು?
ನಿರ್ಲಕ್ಷ್ಯಕ್ಕೆ ಕಾದಿದೆ ಶಾಸ್ತಿ?
ಸಚಿವರಿಗೆ ಚುರುಕಾಗಿರುವಂತೆ ಈ ಹಿಂದೆ ಅನೇಕ ಸಂದರ್ಭದಲ್ಲಿ ಸೂಚನೆಗಳನ್ನು ಪಕ್ಷ ನೀಡಿದೆ. ಆದರೆ, ಬಹುತೇಕರು ಆ ಸೂಚನೆಗಳಿಗೆ ಬೆಲೆ ನೀಡಿಲ್ಲ. ಆದರೆ, ಈ ಬಾರಿ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಇದಕ್ಕೂ ಕಾರಣಗಳು ಇಲ್ಲದಿಲ್ಲ. ಮುಂದಿನ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹೊಸಮುಖಗಳನ್ನು ತರಲು ನಿರ್ಧರಿಸಲಾಗಿದೆ. ಪಕ್ಷದ ಸೂಚನೆಗಳನ್ನು ನಿರ್ಲಕ್ಷಿಸುವ ಸಚಿವರು ಸಹ ಕೊಕ್ ಪಟ್ಟಿಯಲ್ಲಿ ಇದ್ದರೂ ಆಶ್ಚರ್ಯವಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿರುವ ಚುನಾವಣೆಗಳಲ್ಲಿ ಸಚಿವರು ಹಾಗೂ ಶಾಸಕರಿಗೆ ಟಿಕೆಟ್ ನಿರಾಕರಿಸಿರುವ ಉದಾಹರಣೆಗಳಿವೆ ಎಂದು ಮೂಲಗಳು ಹೇಳುತ್ತವೆ. ಅಷ್ಟರೊಳಗೆ ಸಚಿವರ ಮೂಲಕ ಪಕ್ಷ ಹಾಗೂ ಸರ್ಕಾರದ ಇಮೇಜ್ ವೃದ್ಧಿಯಾಗಿರಬೇಕು ಎಂಬುದು ಮೇಲಿನಿಂದ ಬಂದಿರುವ ಕಟ್ಟುನಿಟ್ಟಿನ ಸೂಚನೆಯಾಗಿದೆ.
ಕ್ರಮ ಏನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
