ಬೆಂಗಳೂರು:ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಒಳಗೊಂಡು ನಾಲ್ಕು ಕ್ಷೇತ್ರಗಳ ಚುನಾವಣೆಗೆ ಆಡಳಿತರೂಢ ಬಿಜೆಪಿ ಬಿಡುವಿಲ್ಲದೆ ದುಡಿದಿದ್ದು, ಉತ್ತಮ ಫಲದ ನಿರೀಕ್ಷೆಯಲ್ಲಿದೆ. ಮೇಲ್ಮನೆಯಲ್ಲೂ ಮೇಲುಗೈ ಸಾಧಿಸುವತ್ತ ಗುರಿಯಿಟ್ಟು ಸಂಘಟನಾಬಲದ ಶ್ರಮ ಪೂರ್ಣ ಹಾಕಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ನಾಯಕರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.
ಚುನಾವಣೆ ನಡೆಯುತ್ತಿರುವ ನಾಲ್ಕು ಸ್ಥಾನಗಳ ಪೈಕಿ ತಲಾ ಎರಡು ಬಿಜೆಪಿ ಹಾಗೂ ಜೆಡಿಎಸ್​ಗೆ ಸೇರಿದ್ದಾಗಿದೆ. ಆದರೆ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಸವರಾಜ ಹೊರಟ್ಟಿ ಜೆಡಿಎಸ್ ತೊರೆದು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮೂರು ಕ್ಷೇತ್ರಗಳ ಜತೆಗೆ ದಕ್ಷಿಣ ಪದವೀಧರ ಕ್ಷೇತ್ರದಲ್ಲೂ ಪಾರಮ್ಯ ಮೆರೆಯಲು ಕಾರ್ಯತಂತ್ರ ರೂಪಿಸಿ, ಬೂತ್ ಹಂತದಿಂದ ಅನುಷ್ಠಾನಕ್ಕೆ ತರಲಾಗಿದೆ. ಮತದಾರರ ನೋಂದಣಿ, ಕೇಂದ್ರ-ರಾಜ್ಯ ಸರ್ಕಾರದ ಸಾಧನೆ ಹಾಗೂ ನೀಡಿದ ಕೊಡುಗೆಗಳನ್ನು ವಿವರಿಸಿ ಪದವೀಧರರು ಮತ್ತು ಶಿಕ್ಷಕರ ಮನ ಗೆಲ್ಲಲು ಬೆವರು ಹರಿಸಿದೆ.
ಬಲವೃದ್ಧಿಗೆ ಗಮನ:ಮಹತ್ವದ ಮಸೂದೆಗಳನ್ನು ಸುಲಭವಾಗಿ ಒಪ್ಪಿಗೆ ಪಡೆಯುವುದಕ್ಕೆ ವಿಧಾನ ಪರಿಷತ್​ನಲ್ಲಿ ಬಹುಮತ ಗಿಟ್ಟಿಸಿಕೊಳ್ಳುವುದು ಕಮಲಪಡೆಗೆ ತುರ್ತು ಅಗತ್ಯವಾಗಿದೆ. ಬಹುಮತವಿಲ್ಲದ ಕಾರಣಕ್ಕೆ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ (ಮತಾಂತರ ನಿಷೇಧ)ವನ್ನು ಮೇಲ್ಮನೆಯಲ್ಲಿ ಮಂಡಿಸಲಿಲ್ಲ. ಬೆಳಗಾವಿ ಅಧಿವೇಶನದಲ್ಲೇ ವಿಧಾನಸಭೆ ಈ ಮಸೂದೆಯನ್ನು ಬಹುಮತದ ಬಲದಿಂದ ಅಂಗೀಕರಿಸಿತ್ತು. ಆದರೆ ಪರಿಷತ್​ನಲ್ಲಿ ಸಾಧ್ಯವಿಲ್ಲವೆಂದು ಅರಿತು ಆ ಸಾಹಸಕ್ಕೆ ಕೈ ಹಾಕದೆ ಸುಗ್ರೀವಾಜ್ಞೆ ಮೊರೆ ಹೋಗಿದೆ. ‘ಚಿಂತಕರ ಚಾವಡಿ’ ಮೇಲುಗೈ ಸಾಧಿಸಲು ಹೆಚ್ಚಿನ ಗಮನ ಕೇಂದ್ರೀಕರಿಸಿದೆ.
ಮನವೊಲಿಕೆ ಕಸರತ್ತು:ಸ್ಥಾನಮಾನ, ಅವಕಾಶ, ಘನತೆಗೆ ತಕ್ಕ ಗೌರವ ಸಿಗಲಿಲ್ಲ ಎಂಬಿತ್ಯಾದಿ ಕಾರಣಗಳಿಗೆ ಅಸಮಾಧಾನಿತ ಪ್ರಭಾವಿ ಮುಖಂಡರ ಮನವೊಲಿಸುವ ಕಸರತ್ತು ನಡೆಯಿತು. ಪಶ್ಚಿಮ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಈ ಬಿಸಿ ಪಕ್ಷಕ್ಕೆ ತಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಸ್​ವೈ, ತದನಂತರ ಸಿಎಂ ಬೊಮ್ಮಾಯಿ ತೆರೆಮರೆಯಲ್ಲಿ ರಾಜಿಸಂಧಾನ ನಡೆಸಿ ಪ್ರಭಾವಿ ಮುಖಂಡರಿಗೆ ಸಮಾಧಾನಪಡಿಸಿದ್ದಾರೆ. ಮುಖಂಡರ ಹಂತದಲ್ಲಿದ್ದ ಅಡೆ-ತಡೆ ನಿವಾರಣೆಯಾಗಿದೆ. ಕ್ಷೇತ್ರ ಕಾರ್ಯವನ್ನು ನಿರಂತರವಾಗಿ ಕಾಯ್ದುಕೊಂಡಿದ್ದು, ಪ್ರತಿಯೊಬ್ಬ ಮತದಾರನಿಗೆ ಐವರು ಕಾರ್ಯಕರ್ತರನ್ನು ಜೋಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾಲ್ಕೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಮತದಾರರ ನೋಂದಣಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೊಡುಗೆ ನೆರವಾಗಲಿವೆ. ಪಕ್ಷದತ್ತ ಶಿಕ್ಷಕರು, ಪದವೀಧರರ ಒಲವು ಸಹಜ.
|ಎನ್.ರವಿಕುಮಾರ್ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ವಿಜಯಪುರ:ವಾಯವ್ಯ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಮತದಾರರಿಗೆ ಭಾನುವಾರ ಹಣ ಹಂಚಲು ತೆರಳುತ್ತಿದ್ದ ವಾಹನವನ್ನು ನಗರದ ಸ್ಯಾಟ್​ಲೈಟ್ ಬಸ್ ನಿಲ್ದಾಣ ಬಳಿ ತಡೆದು, ಅದರಲ್ಲಿದ್ದ 17.40 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ:ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲು ಶನಿವಾರ ತಡರಾತ್ರಿ ಗುಂಡು, ತುಂಡಿನ ಪಾರ್ಟಿ ಮಾಡಿರುವ ಫೋಟೋ ಹಾಗೂ ವಿಡಿಯೋ ತುಣುಕುಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಚಿಕ್ಕೋಡಿಯ ನಾಗರಮುನ್ನೋಳ್ಳಿಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಈ ಪಾರ್ಟಿ ಮಾಡಲಾಗಿದೆ.
ಬೆಂಗಳೂರು:ರಾಜ್ಯಸಭೆ ಚುನಾವಣೆ ಹಿಂದೆಯೇ ಮತ್ತೊಂದು ಚುನಾವಣೆ ಬಂದಿದೆ. ವಿಧಾನ ಪರಿಷತ್ತಿನ 2 ಶಿಕ್ಷಕರ ಕ್ಷೇತ್ರ ಹಾಗೂ 2 ಪದವೀಧರರ ಕ್ಷೇತ್ರಗಳಿಗೆ ಸೋಮವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ವಾಯವ್ಯ ಪದವೀಧರ ಕ್ಷೇತ್ರ, ವಾಯವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಪದವೀಧರರ ಕ್ಷೇತ್ರಗಳ ಚುನಾವಣೆ ನಡೆಯಲಿದೆ. 1,81,773 ಪುರುಷ, 1,03,221 ಮಹಿಳೆ, 28 ಇತರೆ ಮತದಾರರು ಸೇರಿ ಒಟ್ಟು 2,84,922 ಮತದಾರರು ಮತಹಕ್ಕು ಹೊಂದಿದ್ದಾರೆ. ನಾಲ್ಕು ಕ್ಷೇತ್ರದಲ್ಲಿ ಒಟ್ಟು 607 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

45 ಪುರುಷ ಹಾಗೂ 4 ಮಹಿಳೆ ಸೇರಿ 49 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಈ ಪೈಕಿ ಕಾಂಗ್ರೆಸ್ 4, ಬಿಜೆಪಿ 4, ಜೆಡಿಎಸ್ 3, ಪಕ್ಷೇತರ 33, ಇತರೆ ಪಕ್ಷಗಳಿಂದ 5 ಅಭ್ಯರ್ಥಿಗಳು ಸ್ಪರ್ಧಿಸಿ ದ್ದಾರೆ. ಮತದಾನ ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 12 =
Remember me
