ಬೆಂಗಳೂರು:ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ನಡೆಯಲಿದ್ದು ಬಿಜೆಪಿ ಇನ್ನೂ ಕಾಂಗ್ರೆಸ್ ಹಾಗೂ ಜೆಡಿಎಸ್​ ರೀತಿಯಲ್ಲಿ ಯಾವುದೇ ಆಶ್ವಾಸನೆಗಳನ್ನು ನೀಡದೇ ಇದ್ದುದರಿಂದ ಭಾರಿ ಕುತೂಹಲ ಉಂಟಾಗಿದೆ. ಇದರಿಂದಾಗಿ ಕೈ ಹಾಗೂ ತೆನೆಗಿಂತ ಬಿಜೆಪಿಯ ಪ್ರಣಾಳಿಕೆ ಭಿನ್ನವಾಗಿರಲಿದೆಯಾ ಎಂಬ ಅನುಮಾನವೂ ಎದ್ದಿದೆ.
ಬೆಳಗ್ಗೆ 10 ಗಂಟೆಗೆ ಖಾಸಗಿ ಹೋಟೆಲ್​ನಲ್ಲಿ ಜೆಪಿ ನಡ್ಡಾರಿಂದ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಈಗಾಗಲೇ 5 ಗ್ಯಾರಂಟಿಗಳ ಮೂಲಕ ಬಹುತೇಕ ಪ್ರಣಾಳಿಕೆಯ ಅಂಶವನ್ನು ಕಾಂಗ್ರೆಸ್ ಬಹಿರಂಗಗೊಳಿಸಿದ್ದು ಪಂಚ ರತ್ನ ಯೋಜನೆಗಳ ಪ್ರಣಾಳಿಕೆಯನ್ನು ಈಗಾಗಲೇ ಜೆಡಿಎಸ್ ಬಿಡುಗಡೆ ಮಾಡಿದೆ. ಇದೀಗ ಇಂದು ಬಿಜೆಪಿಯೂ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು ಒಳಗೇನಿದೆ ಎನ್ನುವ ಕುತೂಹಲ ಶುರುವಾಗಿದೆ.
ಬಿಜೆಪಿಯ ಪ್ರಣಾಳಿಕೆ ಸಮಿತಿ ಆರೋಗ್ಯ ಸಚಿವ ಡಾ.ಸುಧಾಕರ್ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದು ವಿವಿಧ ವಲಯಗಳ ನಿರೀಕ್ಷೆಗಳು ಅಗತ್ಯತೆಗಳಿಗೆ ತಕ್ಕಂತೆ ಪ್ರಣಾಳಿಕೆಯನ್ನು ರಚಿಸಲಾಗಿದೆ ಎನ್ನಲಾಗಿದೆ.
ಎಲ್ಲ ಕಡೆಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಎಲ್ಲಾ ವಲಯಗಳಿಂದ ಸಲಹೆಗಳನ್ನೂ ಸ್ವೀಕರಿಸಿ ವಿಭಾಗ, ಜಿಲ್ಲೆ, ತಾಲ್ಲೂಕುವಾರು ಪಟ್ಟಿ ಮಾಡಿ ಪ್ರಣಾಳಿಕೆ ರಚನೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಈ ಬಾರಿ ಬಿಜೆಪಿ ಸರ್ಕಾರ ಬಂದರೆ ಏನು ಮಾಡಬಹುದು ಎಂದು ಪ್ರಣಾಳಿಕೆಯಲ್ಲಿ ಜೆಪಿ ನಡ್ಡಾ ಘೋಷಿಸಲಿದ್ದು ಗ್ರೇಟರ್ ಬೆಂಗಳೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಬಯಲು ಸೀಮೆ ಸೇರಿದಂತೆ ವಲಯವಾರು ಪ್ರಣಾಳಿಕೆಯನ್ನು ಬಿಜೆಪಿ ಸಿದ್ಧಪಡಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + eleven =
Remember me
