ಬೆಂಗಳೂರು: ರಾಹುಲ್​​ ಗಾಂಧಿ ಪರ ಕಾಂಗ್ರೆಸ್​ ನಾಯಕರು ನಡೆಸಿದ ಪ್ರತಿಭಟನೆ ಕುರಿತು ರಾಜ್ಯ ಬಿಜೆಪಿ ಟ್ವೀಟ್​​ ಮೂಲಕ ವ್ಯಂಗ್ಯವಾಡಿದೆ.
ಇದನ್ನೂ ಓದಿ:Karnataka Assembly Session 2023 | Byrathi Suresh v/s Prasad Abbayya | ಹುಬ್ಬಳ್ಳಿ ಮಾರುಕಟ್ಟೆಯ ಟ್ರ್ಯಾಫಿಕ್ ನಿಯಂತ್ರಣದ ವಿಚಾರ; ಬೈರತಿ ಸುರೇಶ್ v/s ಪ್ರಸಾದ್ ಅಬ್ಬಯ್ಯ
ಸರಣಿ ಟ್ವೀಟ್​​ ಮಾಡಿರುವ ಬಿಜೆಪಿ, “ಅನರ್ಹ ಸಂಸದ ರಾಹುಲ್ ಗಾಂಧಿಯ ಪರ ಎಟಿಎಂ ಸರ್ಕಾರದವರು ಮೌನ ಪ್ರತಿಭಟನೆ ನಡೆಸಿದ್ದು ಒಂದು ಹಾಸ್ಯಾಸ್ಪದ ಸಂಗತಿ. ಜಾತಿನಿಂದನೆ ಅಪರಾಧವೇ, ಅದರಲ್ಲಿಯೂ ರಾಜಕೀಯ ದ್ವೇಷದಿಂದ ಭಾರತದ ಪ್ರಧಾನಿಯವರ ಜಾತಿಯನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿದ್ದು, ವಿದೇಶಿ ಕೈಗೊಂಬೆ ರಾಹುಲ್ ಗಾಂಧಿಯ ಅಪ್ರಬುದ್ಧತೆಗೆ ಮತ್ತು ಸಂವಿಧಾನ ವಿರೋಧಿ ಮಾನಸಿಕತೆಗೆ ಸಾಕ್ಷಿಯಾಗಿದೆ” ಎಂದು ಟ್ವೀಟ್ ಮಾಡಿದೆ.
“ಇಂತಹ ಹೀನ ಮನಸ್ಥಿತಿಯುಳ್ಳ ರಾಹುಲ್ ಪರ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್​​ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಹಿಂದುಳಿದ ವರ್ಗಗಳನ್ನು ಹೀಯಾಳಿಸಿದ್ದಾರೆ ಎಂಬ ಕಾರಣಕ್ಕೆ ಘನ ನ್ಯಾಯಾಲಯವು ರಾಹುಲ್​​ ಗಾಂಧಿಗೆ ಶಿಕ್ಷೆ ನೀಡಿದ್ದು, ಕಾನೂನಿನ ಪ್ರಕಾರ ಸಹಜವಾಗಿಯೇ ಅನರ್ಹಗೊಂಡಿದ್ದಾರೆ. ಆದ್ರೆ, ಕೋರ್ಟ್​​​ನ​​​ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿರುವ ‘ಕೈ’ ಪಕ್ಷದವರು, ನ್ಯಾಯಾಂಗ ವ್ಯವಸ್ಥೆಯ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದಾರೆ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ:ಚಂದ್ರಯಾನ 3ರ ಮಹತ್ವಗಳೇನು.?: ತಾಂತ್ರಿಕ ಅಂಶ ವಿವರಿಸಿದ ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ್
“ಸಂವಿಧಾನದ ರಕ್ಷಕರು ಎಂದು ಬಡಾಯಿಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಮತ್ತು ಕೋ ಈ ನೆಲದ ಕಾನೂನು ಮತ್ತು ಸಂವಿಧಾನಕ್ಕೆ ಗೌರವ ನೀಡುತ್ತಿರುವ ಪರಿ ಇದು” ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್​ ವಿರುದ್ಧ ವ್ಯಂಗ್ಯವಾಡಿದೆ.
ಮುಂಡದಿಂದ ಆಂತರಿಕವಾಗಿ ಬೇರ್ಪಟ್ಟ ಶಿರವನ್ನು ಯಶಸ್ವಿಯಾಗಿ ಜೋಡಿಸಿದ ವೈದ್ಯರು…!

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:fourteen − nine =
Remember me
