ಬೆಂಗಳೂರು:ಡಾ.ಬಿ.ಆರ್. ಅಂಬೇಡ್ಕರ್ ಅವರು ಅಸಮಾನತೆ ಹೋಗಲಾಡಿಸಬೇಕೆಂದು ಹೇಳಿದ್ದರು. ಇದಕ್ಕೆ ಬಿಜೆಪಿಯಿಂದ ವಿರುದ್ದ ಇದೆ. ಅವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಇದನ್ನು ಶೋಷಿತ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ RSSನ ರಾಜಕೀಯ ಅಂಗವಾಗಿದ್ದು, ಆರ್​ಎಸ್​​ಎಸ್​​ ಮತ್ತು ಹಿಂದು ಮಹಾಸಭಾ ನಿಯಂತ್ರಣ ಮಾಡುತ್ತಿದೆ. ಆರ್​​ಎಸ್​​ಎಸ್​ ಅವರ ಚಿಂತನಾ ಗಂಗಾ ಪುಸ್ತಕ, ಆರ್​​ಎಸ್​​ಎಸ್​​ ಮುಖವಾಣಿ ಪತ್ರಿಕೆಯಲ್ಲೂ ಅಂಬೇಡ್ಕರ್ ಸಂವಿಧಾನವನ್ನು ಅವರು ಒಪ್ಪಿಕೊಂಡಿಲ್ಲ. ಸಂವಿಧಾನ ಸರಿಯಾಗಿ ರಚನೆ ಮಾಡಿಲ್ಲ, ಈ ದೇಶಕ್ಕೆ ಯೋಗ್ಯವಾದ ಸಂವಿಧಾನ ಅಲ್ಲ ಎನ್ನುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಪೂಂಚ್​ನಲ್ಲಿ ಒಳನುಸುಳುವಿಕೆ ಯತ್ನ; ಓರ್ವ ಭಯೋತ್ಪಾದಕನ ಹತ್ಯೆ
ಬಿಜೆಪಿ ಮೀಸಲಾತಿಯನ್ನು ವಿರೋಧ ಮಾಡುತ್ತಾ ಬರುತ್ತಿದೆ. ಶೋಷಿತ ಸಮಾಜಗಳು ಈ ಬಾರಿ ರಾಜ್ಯದಲ್ಲಿ ಕೋಮುವಾಗಿ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಬೇಕು. ಬಿಜೆಪಿ ಪಕ್ಷ ಆರ್​ಎಸ್​ಎಸ್ ಹಾಗೂ ಹಿಂದು ಮಹಾಸಭಾದ ರಾಜಕೀಯ ಮುಖವಾಡ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಅವರೆಲ್ಲ ಕೂಗು ಮಾರಿಗಳು. ಅವರು ಸಂವಿಧಾನದ ಬಗ್ಗೆ ‌ಮಾತಾಡುತ್ತಾರೆ. ಆರ್​ಎಸ್​​ಎಸ್​ ಮತ್ತು ಹಿಂದು ಮಹಾಸಭಾ ಸಂವಿಧಾನಕ್ಕೆ ಕವಡೆಕಾಸಿನ ಬೆಲೆ ಕೊಡುವುದಿಲ್ಲ. ಇವರು ಸಂವಿಧಾನ ವಿರೋಧವಾಗಿ ಇದ್ದಾರೆ. ಎಲ್ಲರಿಗೂ ಶಿಕ್ಷಣ ಕೊಡೋದು ಇಷ್ಟ ಇಲ್ಲ. ಸಮ ಸಮಾಜ ನಿರ್ಮಾಣ ಆದರೆ ಶೋಷಣೆಗೆ ಅವಕಾಶ ಕಡಿಮೆ ಆಗುತ್ತದೆ. ಆರ್​ಎಸ್​​ಎಸ್​ ಅವರಿಗೆ ಸಮಾಜದ ಎಲ್ಲಾ ಕಂಟ್ರೋಲ್ ಅವರ ಕೈಯಲ್ಲಿ ಇರಬೇಕು. ಅವರು ಬಯಸಿರುವುದು ಮನುಸ್ಮೃತಿ ಆಧಾರದ ಸಂವಿಧಾನ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ನಾಪತ್ತೆ ಆಗಿದ್ದವಳ ಕಂಡು ದೇವತೆ ಅಂದುಕೊಂಡ ಜನರು!; ನೀರ ಮೇಲೆ ನಡೆದ ವಿಡಿಯೋ ವೈರಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
