ಬೆಂಗಳೂರು:2023ರ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ವಾರ್​ ರೂಮ್​ ಈಗಿಂದಲೇ ಆರಂಭಗೊಂಡಿದ್ದು, ಅದಕ್ಕಾಗಿ ಸಕಲ ವ್ಯವಸ್ಥೆಗಳನ್ನು ಒಳಗೊಂಡ ಕೇಂದ್ರವನ್ನೂ ತೆರೆಯಲಾಗಿದೆ. ಮಲ್ಲೇಶ್ವರದ 8ನೇ ಮುಖ್ಯ ರಸ್ತೆಯಲ್ಲಿ ಕೆನರಾ ಯೂನಿಯನ್ ಎದುರು ಇಂದು ಈ ವಾರ್​ ರೂಮ್ ಉದ್ಘಾಟನೆಗೊಂಡಿದೆ.
ಈ ವಾರ್ ರೂಮ್​ನಲ್ಲಿ ಮೀಡಿಯಾ ಸೆಂಟರ್, ಕಾಲ್ ಸೆಂಟರ್, ಸಾಮಾಜಿಕ ಜಾಲತಾಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ, ಮಾಧ್ಯಮ ಮಿತ್ರರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ ಸರ್ವಸನ್ನದ್ಧಗೊಳಿಸಲಾಗಿದೆ.
ಬಿಜೆಪಿ ಮುಂದಿನ ಚುನಾವಣೆ ದೃಷ್ಟಿಯಿಂದ ಪೇಜ್ ಕಮಿಟಿಯಿಂದ ಆರಂಭಿಸಿ ಬೂತ್ ಸಶಕ್ತೀಕರಣ ಕಾರ್ಯಪೂರ್ಣಗೊಳಿಸಿದೆ. ಚುನಾವಣೆಗೆ ಕಾರ್ಯಕರ್ತ ಸೈನಿಕರ ಪೂರ್ಣ ಸಿದ್ಧತೆ ಆಗಿದೆ. ಮತಗಟ್ಟೆಯಲ್ಲೂ ವಾರ್ ರೂಮ್​ಗಳು ಆರಂಭಗೊಂಡಿವೆ.
ಮತಗಟ್ಟೆ ವಾರ್ ರೂಂ ಮೂಲಕ ಜಿಲ್ಲೆ, ಜಿಲ್ಲೆಯಿಂದ ಮಂಡಲ, ಮಂಡಲದಿಂದ ಮತಗಟ್ಟೆವರೆಗೆ, ಮತಗಟ್ಟೆಯಿಂದ ಕಾರ್ಯಕರ್ತ, ಅಲ್ಲಿಂದ ಮತದಾರರನ್ನು ಸಂಪರ್ಕಿಸುವ ಕಾರ್ಯಯೋಜನೆಗಳನ್ನು ಬಿಜೆಪಿ ಅನುಷ್ಠಾನಕ್ಕೆ ತರಲಿದೆ.
ಕಾಲುಸಂಕದಿಂದ ಬಿದ್ದ ಸ್ಥಳದ ಬಳಿಯೇ 2 ದಿನಗಳ ಬಳಿಕ ಬಾಲಕಿಯ ಶವ ಪತ್ತೆ!

ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದ ಆತಂಕ; ಇಂದು-ನಾಳೆ ರಾತ್ರಿ ವಾಹನ ಸಂಚಾರ ಸಂಪೂರ್ಣ ನಿಷೇಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
