ಚಿತ್ರದುರ್ಗ:ಸಿಎಎ ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ರಾಜ್ಯದ 58 ಸಾವಿರ ಬೂತ್‌ಗಳಲ್ಲಿ ಜ.26 ರಂದು ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಕಾರ‌್ಯಕರ್ತರಿಂದ ರಾಷ್ಟ್ರ ಧ್ವಜಾರೋಹಣ ಹಾಗೂ ಕಾರ‌್ಯಕ್ರಮದಲ್ಲಿ ಭಾ ಗ ವಹಿಸು ವವರಿಂದ ಸಹಿ ಸಂಗ್ರಹ ಮತ್ತು ಮಿಸ್ ಕಾಲ್ ಆಂದೋಲ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ‌್ಯದರ್ಶಿ ಎನ್. ರವಿಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,8866288662 ಸಂಖ್ಯೆ ಮಿಸ್ ಕಾಲ್ ಕೊಡುವ ಮೂಲಕ ಕೇಂದ್ರದ ನಿಲುವನ್ನು ಬೆಂಬಲಿಸಲಿದ್ದಾರೆ. ಅದೇ ದಿನ ಬೂತ್ ಮಟ್ಟದಲ್ಲಿ ಕಾರ‌್ಯಕರ್ತರು ಪ್ರಧಾನಿಯನ್ನು ಅಭಿನಂದಿಸಿ ಅವರಿಗೆ ಪತ್ರ ಬರೆಯುತ್ತಾರೆ. ಸಿಎಎನ್ನು ದೇಶದ ಶೇ.99 ನಾಗರಿಕರು ಸ್ವಾಗತಿಸಿದ್ದಾರೆ, ಆದರೆ ಕಾಂಗ್ರೆಸ್,ಎಡಪಂಥೀಯ ಪಕ್ಷಗಳುವೋಟ್ ಬ್ಯಾಂಕ್ ರಾಜಕಾರಣದ ಹಿನ್ನೆಲೆಯಲ್ಲಿ ವಿರೋಧಿಸುತ್ತಿದ್ದಾರೆ. ನಾಯಕರು ನೆಹರು ಜಾರಿಗೊಳಿಸಿದ್ದ ಹಾಗೂ ಇಂದಿರಾ,ರಾಜೀವ್‌ಗಾಂಧಿ ಮೊದಲಾದ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದ ಈ ಕಾಯ್ದೆಯನ್ನು ವಿರೋಧಿಸುವ ಮೂಲಕ ಪಾಕಿಸ್ತಾನದ ಪರ ನಿಲುವನ್ನು ರಾಹುಲ್‌ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರದರ್ಶಿಸುತ್ತಿ ದ್ದಾರೆಂದು ದೂರಿದರು.
ಇದು ಹಳೆ ಕಾಯ್ದೆ, 11ವರ್ಷವನ್ನು 5 ವರ್ಷಕ್ಕೆ ಹಾಗೂ ಕಟ್ ಆಫ್ ಡೇಟ್‌ನ್ನು 2014 ಡಿ.31ಕ್ಕೆ ನಿಗದಿಗೊಳಿಸಿದ್ದನ್ನು ಹೊರತು ಪಡಿಸಿ ಇನ್ಯಾವ ಬದಲಾವಣೆಯನ್ನು ಕೇಂದ್ರ ಮಾಡಿಲ್ಲ. ಅಂದು ಕಾಯ್ದೆ ಪರ ಮಾತನಾಡಿದ್ದ ಮನ್‌ಮೋಹನ್‌ಸಿಂಗ್ ಇಂದು ಮೌನವಾಗಿದ್ದಾರೆ ಎಂದು ಟೀಕಿಸಿದರು.ದುರ್ಗಕ್ಕೆ ಮತ್ತೊಂದು ಮಂತ್ರಿ ಸ್ಥಾನ
ಈ ತಿಂಗಳ ಒಳಗೆ ಸಂಪುಟ ವಿಸ್ತರಣೆ ಆಗಲಿದ್ದು, ಚಿತ್ರದುರ್ಗಕ್ಕೆ ಮತ್ತೊಂದು ಮಂತ್ರಿ ಸ್ಥಾನ ಸಿಗಬಹುದೆಂದು ವಿಶ್ವಾಸ ವ್ಯಕ್ತ ಪಡಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮುಖಂಡರಾದ ಜಿ.ಎಂ.ಸುರೇಶ್,ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ನರೇಂದ್ರನಾಥ್, ಸೇತೂರಾಂ,ಶಿವಪ್ರಕಾಶ್ ದಗ್ಗೆ, ನಾಗರಾಜ್ ಬೇಂದ್ರೆ ಇದ್ದರು.—-
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
