ಬೆಂಗಳೂರು:ವೀರಶೈವ-ಲಿಂಗಾಯತ,ಒಕ್ಕಲಿಗರು ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಲು ಅವಕಾಶವಿದೆ. ಅದರಲ್ಲೂ ಬಿಜೆಪಿ ಜಾತಿ-ವರ್ಗವೆಂಬ ಬೇಧವೆಣಿಸದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಕ್ಷದ ಶಾಸಕರು ಹಾಗೂ ವರಿಷ್ಠರು ಸೇರಿ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ‌ಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಆಯಾ ಸಮುದಾಯಗಳ ಮುಖಂಡರು, ಶಾಸಕರು ವ್ಯಕ್ತಪಡಿಸುವುದಕ್ಕೂ ಪಕ್ಷದಿಂದ ನಿರ್ಬಂಧ ವಿಧಿಸಲಾಗದು. ಸಾಮಾನ್ಯ ಹಿನ್ನೆಲೆಯ, ಪ್ರತಿಭಾವಂತ ‌75 ಕಾರ್ಯಕರ್ತರಿಗೆ‌ ಸ್ಪರ್ಧಿಸಲು ಪಕ್ಷ ಈ ಬಾರಿ ಅವಕಾಶ ಕೊಟ್ಟಿದ್ದು, ಪಕ್ಷದ ನಿಲುವು ಏನೆಂಬುದು ರಾಜ್ಯದ ಜನರಿಗೂ ಗೊತ್ತಾಗಿದೆ ಎಂದರು.ಇದನ್ನೂ ಓದಿ:ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರ ಮತ ಎಚ್‌.ಡಿ.ದೇವೇಗೌಡ ಹಾಗೂ ಜಿ.ಟಿ.ದೇವೇಗೌಡರಿಗೆ ಮೀಸಲಿದೆ; ಎಚ್​​ಡಿಕೆ
ಎರಡು ದಿನಗಳ ವಿಶೇಷ ಮಹಾ ಪ್ರಚಾರ ಅಭಿಯಾನದ ಮುಖೇನ ಡಬಲ್ ಇಂಜಿನ್ ಸರ್ಕಾದರ ಸಾಧನೆ, ಅಗತ್ಯತೆ ಮನವರಿಕೆ ಮಾಡಿಕೊಡುತ್ತಿದ್ದು, ಮನೆ ಮನೆ ಸಂಪರ್ಕ ಕಾರ್ಯವೂ ನಡೆಯಲಿದೆ ಎಂದರು.
ಮುಸ್ಲಿಮರಿಗೆ ಶೇ 4ರಷ್ಟು ಮೀಸಲು ರದ್ದುಪಡಿಸಿ ಸರ್ಕಾರ ಹೊರಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆಯೇ ಹೊರತು ಹಿನ್ನಡೆಯಲ್ಲ. ಸಂವಿಧಾನ ಬದ್ಧವಾಗಿ ಮೀಸಲು ನಿರ್ಣಯವಾಗಿದ್ದು, ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಲಿದ್ದು, ಈ ಕಾನೂನು ಹೋರಾಟದಲ್ಲಿ ಜಯ ಸಾಧಿಸುವ ವಿಶ್ವಾಸವಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.ಇದನ್ನೂ ಓದಿ:“ಕಾಶಿಗೆ ಹೋಗಿ ಬಂದರೆ ಕಾಗೆ ಕೋಗಿಲೆಯಾಗಲ್ಲ, ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ”: ಜೆಡಿಎಸ್ ಅಭ್ಯರ್ಥಿ ಹೊನವಾಡ ವಾಗ್ದಾಳಿ
ಪ್ರಧಾನಿ ಮೋದಿ ವರ್ಚುವಲ್ ವೇದಿಕೆಯಲ್ಲಿ ಭಾಷಣ ನಾಳೆ; 58 ಸಾವಿರ ಬೂತ್ ಗಳು 50 ಲಕ್ಷ ಕಾರ್ಯಕರ್ತರು ಭಾಗಿ

“ಕಾಶಿಗೆ ಹೋಗಿ ಬಂದರೆ ಕಾಗೆ ಕೋಗಿಲೆಯಾಗಲ್ಲ, ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ”: ಜೆಡಿಎಸ್ ಅಭ್ಯರ್ಥಿ ಹೊನವಾಡ ವಾಗ್ದಾಳಿ

ನನ್ನ ಮೇಲೆ‌ ಮಾಡಿರುವ ಭ್ರಷ್ಟಾಚಾರ ಆರೋಪವನ್ನು ಸಿದ್ದರಾಮಯ್ಯ ಸಾಬೀತು ಮಾಡಲಿ; ಸವಾಲೆಸೆದ ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 7 =
Remember me
