ಬ್ಯಾಟರಾಯನಪುರ:ಹಿರಿಯ ಬಿಜೆಪಿ ಮುಖಂಡ ಎ. ರವಿ, ಕೆ.ಎ. ಮುನೀಂದ್ರಕುಮಾರ್ ‘ ನೇತೃತ್ವದಲ್ಲಿ ಈ ಬಾರಿ ಕ್ಷೇತ್ರದಲ್ಲಿ ಕಮಲ – ಅರಳಲಿದೆ ಎಂದು ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‌.ಸಿ. ತಮ್ಮೇಶ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರವಿ ಮತ್ತು ಮುನೀಂದ್ರಕುಮಾರ್ ಜತೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಭಿವೃದ್ಧಿ ಪರ ಆಡಳಿತವನ್ನೇ ಮೂಲ ಮಂತ್ರವಾಗಿ ಇಟ್ಟುಕೊಂಡಿರುವಬಿಜೆಪಿ, ಕಾರ್ಯ ಕರ್ತರ ಪಕ್ಷವಾಗಿದೆ. ತನ್ನದೇ ಆದ ವಿಶಿಷ್ಟತೆಯ ಮೂಲಕ ರಾಜ್ಯದಲ್ಲಿ ಮುನ್ನುಗ್ಗುತ್ತಿದೆ. ಮಾದರಿ ಬ್ಯಾಟರಾಯನಪುರ ಕ್ಷೇತ್ರ ನಿರ್ಮಾ ಣದ ಗುರಿಯೊಂದಿಗೆ, ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡರಾದ ರವಿ ಮತ್ತು ಮುನೀಂದ್ರಕುಮಾರ್ ಪ್ರಚಾರ ಕಾರ್ಯದಲ್ಲಿ ನಮ್ಮೊಟ್ಟಿಗೆ ಪಾಲ್ಗೊಂಡಿರುವುದರಿಂದ ವಿಪಕ್ಷ ದವರ ಅಪಪ್ರಚಾರಕ್ಕೆ ಈ ಮೂಲಕ ತೆರೆಬಿದ್ದಿದ್ದು, ಅವರಿಗೆ ಸೋಲಿನ ಭೀತಿ ಶುರುವಾಗಿದೆ ಎಂದು ಹೇಳಿದರು.
ಕಳೆದ ಹದಿನೈದು ವರ್ಷಗಳಿಂದ ಅಭಿವೃದ್ಧಿ ವಂಚಿತವಾಗಿರುವ ಬ್ಯಾಟ ರಾಯನಪುರ ಕ್ಷೇತ್ರದ ಜನತೆ ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದು, ಬಿಜೆಪಿ ಗೆಲ್ಲಿಸಲು ನಿಶ್ಚಯಿಸಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಭಿವೃದ್ಧಿ ಪರ ಆಡಳಿತ, ರಾಜ್ಯ ಸರ್ಕಾರದ ಜನಪರ ಕಾರ್ಯಗಳನ್ನು ಮೆಚ್ಚಿಕೊಂಡಿರುವ ರಾಜ್ಯದ ಜನತೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಹೊಸದೊಂದು ಮೈಲಿಗಲ್ಲು ನಿರ್ಮಿಸಲಿದ್ದಾರೆ ಎಂದು ತಮ್ಮೇಶ ಗೌಡ ಹೇಳಿದರು.
ಕಳೆದ 3 ಬಾರಿ ಬಿಜೆಪಿ ಅಭ್ಯರ್ಥಿ ಯಾಗಿ ಕ್ಷೇತ್ರದಲ್ಲಿ ಕಣದಲ್ಲಿದ್ದ ಎ. ರವಿ ಅವರು 15 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷವನ್ನು ಸುಭದ್ರವಾಗಿ ಕಟ್ಟಿದ್ದಾರೆ. ಸದಾ ಕ್ಷೇತ್ರದ ಜನರೊಟ್ಟಿಗೆ ಸಂಪರ್ಕದಲ್ಲಿದ್ದು, ಜನರ ಅಗತ್ಯತೆ ಪೂರೈಸಿದ್ದಾರೆ. ಮುನೀಂದ್ರಕುಮಾ‌ 2 ದಶಕಗಳಿಂದ ಬ್ಯಾಟರಾಯನ ಪುರ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ನಾನೂ ಜನಸೇವೆಯಲ್ಲಿ ತೊಡಗಿದ್ದೇನೆ. ಗೆಲ್ಲುವ ಎಲ್ಲ ಅರ್ಹತೆ ಗಳಿರುವ ನಾವು ಮೂವರು ಒಗ್ಗಟ್ಟಿ ನಿಂದ ಈ ಬಾರಿಯ ಚುನಾವಣೆ ಎದುರಿಸುತ್ತಿದ್ದು, ಅಭೂತಪೂರ್ವ ಗೆಲುವು ನಮ್ಮದಾಗುವುದರಲ್ಲಿ ಸಂದೇಹವಿಲ್ಲ ಎಂದು ತಮ್ಮೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 10 =
Remember me
