ಬೆಂಗಳೂರು:ಚುನಾವಣೆಗೆ ಮುಂಚೆ, ನಂತರ ಯಾವುದೇ ಇರಲಿ. ಸಮೀಕ್ಷೆಗಳು ಏನೇ ಹೇಳಿರಲಿ. ನನ್ನದು ಆಗಲೂ ಈಗಲೂ ಒಂದೇ ಮಾತು. ಅದು, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಗ್ರೌಡ್ ರಿಪೋರ್ಟ್ ಕೂಡ ಅದೇ ಹೇಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.
ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ವಸ್ತುಸ್ಥಿತಿ ವರದಿಯನ್ನು ವರಿಷ್ಠರಿಗೆ ಸಲ್ಲಿಸಿರುವೆ. ಬಿಜೆಪಿ ಗಳಿಸಲಿರುವ ನಂಬರ್ ಗಳ ಬಗ್ಗೆ ಹಿರಿಯ ನಾಯಕ ಹೇಳಿದ್ದೇ ನನ್ನ ನಂಬರ್. ಇಬ್ಬರದೂ ಬೇರೆ ನಂಬರ್ ಗಳಿಲ್ಲ ಎಂದರು.
ಇದನ್ನೂ ಓದಿ:ಬಾಜಿ ಕಟ್ಟುವವರಿದ್ದರೆ ಬನ್ನಿ! ದಾವಣಗೆರೆಯಲ್ಲಿ ಚುನಾವಣಾ ಬೆಟ್ಟಿಂಗ್ ಜೋರು, ಡಂಗುರ ಸಾರಿಸಿ ಪಂಥಾಹ್ವಾನ
ಕಾಂಗ್ರೆಸ್ ನವರಿಗೆ ಬಹುಮತ ಬರಲ್ಲ. ಹಾಗಾಗಿ ಬೇರೆ ಪಕ್ಷದವರ ಜತೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಪಕ್ಷದ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದಾಯಿತು ಎಂದು ಸಿಎಂ ಬೊಮ್ಮಾಯಿ‌ ಕುಟುಕಿದರು.
ಮೈತ್ರಿ ಸಂದರ್ಭವೇ ಬರುವುದಿಲ್ಲ. ಈಗ ನಮ್ಮ ಮುಂದೆ ಆ ಪ್ರಶ್ನೆ ಇಲ್ಲ. ನಾವು ಬಹುಮತದ ಸಂಖ್ಯೆ ದಾಟುತ್ತೇವೆ. ಕಾಂಗ್ರೆಸ್‌ನವರು ಏನೇ ಸಭೆ ಮಾಡಲಿ. ಆ ಬಗ್ಗೆ ನಾವೇಕೆ ಯೋಚಿಸಬೇಕು. ಅವರಿಗೆ ಸಭೆ ಮಾಡುವ ಹಕ್ಕಿದೆ ಮಾಡಿಕೊಳ್ಳುತ್ತಾರೆ. ಎಲ್ಲ ಪಕ್ಷಗಳೂ ಸಭೆ ಮಾಡುವುದು ಹೊಸದೇನಲ್ಲ ಎಂದು ಬೊಮ್ಮಾಯಿ‌ ಹೇಳಿದರು.
ಇದನ್ನೂ ಓದಿ:ವೋಟ್ ಹಾಕುವಲ್ಲಿ ಪುರುಷರೇ ಮೇಲುಗೈ: ಜಿಲ್ಲೆಯಲ್ಲಿ ಶೇ.84.45ರಷ್ಟು ಮತದಾನ
ಆರ್ ಟಿ ನಗರ ನಿವಾಸಕ್ಕೆ ದೌಡಾಯಿಸಿದ ವಿ.ಸೋಮಣ್ಣ, ಚಾಮರಾಜನಗರ ಮತ್ತು ವರುಣಾ ಕ್ಷೇತ್ರದ ಅಂಕಿಅಂಶಗಳನ್ನು ವಿವರಿಸಿದರೆ, ಹೊಸಕೋಟೆ ಕ್ಷೇತ್ರದಲ್ಲಿ ದಾಖಲೆಯ ಮತದಾನ ಆಗಿರುವುದಕ್ಕೆ ಖುಷಿಯಿಂದ ಉಬ್ಬಿರುವ ಎಂಟಿಬಿ ತಮ್ಮದೇ ಗೆಲುವು ಎಂಬ ವಿಶ್ವಾಸವನ್ನು ಸಿಎಂ ಮುಂದೆ ವ್ಯಕ್ತಪಡಿಸಿದ್ದಾರೆ.
1964ರಲ್ಲಿ 7 ಸಾವಿರ ರೂ.ಗೆ ಖರೀದಿ: ಈಗ ಹರಾಜಿನಲ್ಲಿ ರೊಲೆಕ್ಸ್​ ಸೇಲಾದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!​

ISSF ವರ್ಲ್ಡ್​ಕಪ್​: ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಕನ್ನಡತಿ

ಸಿಬಿಎಸ್​​​ಇ 12ನೇ ತರಗತಿ ಫಲಿತಾಂಶ ಪ್ರಕಟ: ವಿದ್ಯಾರ್ಥಿಗಳು ಫಲಿತಾಂಶವನ್ನು ಹೀಗೆ ಪರಿಶೀಲಿಸಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
