ಕರೊನಾ ಅಟ್ಟಹಾಸದನಟ್ಟನಡುವೆ ಆರ್ಥಿಕ ಹಿಂಜರಿತ, ಉದ್ಯೋಗ ಕಡಿತ, ಜಿಡಿಪಿ ಇಳಿಕೆಯಂಥ ವಿಚಾರಗಳನ್ನು ಮುಂದುಮಾಡಿ ವಿಪಕ್ಷಗಳು ನಡೆಸುತ್ತಿರುವ ಟೀಕಾಪ್ರಹಾರಕ್ಕೆ ಮಹತ್ವ ಕೊಡದ ಮತದಾರರು ಬಿಹಾರ ಚುನಾವಣೆ, ಮತ್ತು ದೇಶಾದ್ಯಂತ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಹಾಕಿದ್ದಾರೆ. ಕರ್ನಾಟಕದಲೂ ಆರ್.ಆರ್.ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಶಕ್ತಿ, ವರ್ಚಸ್ಸು ಮತ್ತೊಮ್ಮೆ ಅನಾವರಣಗೊಂಡಿದೆ. ಬಿಹಾರದಲ್ಲಿ ಮತದಾನೋತ್ತರ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಿ ಬಿಜೆಪಿ ಒಳಗೊಂಡ ಎನ್​ಡಿಎ ಮೈತ್ರಿಕೂಟ ಸರಳ ಬಹುಮತದ ಸಮೀಪಕ್ಕೆ ಬಂದು ನಿಂತಿದ್ದು ಅಂತಿಮ ಗೆಲುವಿಗಾಗಿ ಮಹಾಘಟಬಂಧನ್ ಜತೆ ಜಿದ್ದಾಜಿದ್ದಿ ಏರ್ಪಟ್ಟಿದೆ. ವೈಯಕ್ತಿಕ ಮತಗಳಿಕೆಯಲ್ಲಿ ಬಿಜೆಪಿ ತನ್ನ ಮಿತ್ರ ಜೆಡಿಯು ಹಿಂದಿಕ್ಕಿ ಸಾಧನೆ ಮರೆದಿದೆ. 11 ರಾಜ್ಯಗಳ 56 ಅಸೆಂಬ್ಲಿ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬಹುಪಾಲು ಸ್ಥಾನಗಳನ್ನು ಗೆದ್ದು ಬೀಗಿದೆ. ಮೋದಿ ಅಲೆ ವಿಸ್ತರಿಸಿರುವುದನ್ನು ಈ ಎಲ್ಲ ಫಲಿತಾಂಶಗಳು ಸಾಬೀತುಪಡಿಸಿವೆ.
ರಾಜ್ಯದ 2 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವುರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರೋಧಿಗಳ ಬಾಯಿಗೆ ಬೀಗ ಬಿದ್ದಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ಗೆ ಆತ್ಮಾವಲೋಕನದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದೆ. ಆರ್.ಆರ್. ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಈ ಫಲಿತಾಂಶ ಮೂರೂ ಪ್ರಮುಖ ಪಕ್ಷಗಳಿಗೆ ಬೇರೆ ಬೇರೆಯದೇ ಆದ ಸಂದೇಶಗಳನ್ನು ರವಾನಿಸಿದೆ.
ಸಿಎಂ ನಾಯಕತ್ವ ಗಟ್ಟಿ:ಬಿಜೆಪಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ನಾಯಕತ್ವ ಬದಲಾವಣೆಯ ಗುಸುಗುಸು ಕೇಳಿ ಬರುತ್ತಲೇ ಇತ್ತು. ಉತ್ತರ ಕರ್ನಾಟಕದ ಅನೇಕ ಶಾಸಕರು ಬಂಡಾಯದ ದನಿಯನ್ನು ನಿಧಾನವಾಗಿ ಎತ್ತಲಾರಂಭಿಸಿದ್ದರು. ಹೈಕಮಾಂಡ್​ನಲ್ಲಿರುವ ಕೆಲ ಮುಖಂಡರಿಗೆ ಯಡಿಯೂರಪ್ಪ ಬಗ್ಗೆ ಇರುವ ‘ಅಸಂತೋಷ’ ಶಾಸಕರ ಮೂಲಕ ಹೊರ ಬರುತ್ತಿತ್ತು. ಆದರೆ ಈ ಚುನಾವಣೆಯ ಫಲಿತಾಂಶ ಹೈಕಮಾಂಡ್​ಗೀಗ ‘ಸಂತೋಷ’ ತರಿಸುವಂತಾಗಿದೆ. ರಾಜ್ಯ ಬಿಜೆಪಿಗೆ ಚುನಾವಣೆ ಎದುರಿಸಲು ಯಡಿಯೂರಪ್ಪ ಅನಿವಾರ್ಯ ಎಂಬ ಸಂದೇಶವನ್ನೂ ಜನಾದೇಶ ಖಡಕ್ಕಾಗಿ ರವಾನಿಸಿದೆ. ಇದರಿಂದ ಈ ಅವಧಿಯನ್ನು ಯಡಿಯೂರಪ್ಪ ಅವರೇ ಪೂರ್ತಿ ಮಾಡುವುದು ನಿಚ್ಚಳವಾಗಿದೆ. ಆರ್.ಆರ್. ನಗರದಲ್ಲಿ ಬಿಜೆಪಿಗೆ ತನ್ನದೇ ಆದ ನೆಲೆ ಇದೆ. ಆದರೆ ಶಿರಾದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದ ಕ್ಷೇತ್ರದಲ್ಲಿ ಮತಬ್ಯಾಂಕ್ ಇರಲಿಲ್ಲ.
ಅಂತಹ ಕಡೆ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ರೀತಿಯಲ್ಲಿ ಸಂಘಟಿಸಿದ್ದು ಯಡಿಯೂರಪ್ಪ ಅವರ ಚುನಾವಣಾ ತಂತ್ರಗಾರಿಕೆಗೆ ಹಿಡಿದ ಕೈಗನ್ನಡಿಯಾಗಿದೆ.
ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಹೇಳಿದ ರೀತಿಯಲ್ಲಿಯೇ ಪಕ್ಷ ಸರಿಸುಮಾರು ಅಷ್ಟೇ ಬಹುಮತ ಪಡೆದಿದೆ. ಅಂದರೆ ಯಡಿಯೂರಪ್ಪ ಕಾರ್ಯತಂತ್ರವನ್ನು ಎಷ್ಟು ಕರಾರುವಕ್ಕಾಗಿ ರೂಪಿಸುತ್ತಾರೆ. ಅದನ್ನು ತಮ್ಮ ಆಪ್ತರ ಮೂಲಕ ಹೇಗೆ ಕಾರ್ಯರೂಪಕ್ಕೆ ಇಳಿಸುತ್ತಾರೆ ಎಂಬುದಕ್ಕೆ ಶಿರಾ ಸಾಕ್ಷಿಯಾಗಿದೆ. ತಮ್ಮ ಪುತ್ರ ವಿಜಯೇಂದ್ರ ಹಾಗೂ ತಂಡದ ಮೂಲಕ ಶಿಸ್ತುಬದ್ಧವಾಗಿ ಅನುಷ್ಠಾನಗೊಳಿಸಿದರು. ಆದ್ದರಿಂದಲೇ ಪವಾಡಸದೃಶ ರೀತಿಯಲ್ಲಿ ಶಿರಾದಲ್ಲಿ ಕಮಲ ಅರಳಿತು.
ಸಂಪುಟ ಪುನಾರಚನೆ ಸಕಾಲ:ದೀರ್ಘ ಕಾಲದಿಂದ ಸಂಪುಟ ಪುನಾರಚನೆಗೆ ಒತ್ತಡ ಇದೆ. ಮುಖ್ಯಮಂತ್ರಿ ಸಹ ವಿಸ್ತರಣೆ ಅಥವಾ ಪುನಾರಚನೆ ಒತ್ತಡ ಹಾಕುತ್ತಲೇ ಇದ್ದಾರೆ. ಆದರೆ ಹೈಕಮಾಂಡ್​ನಲ್ಲಿ ಹಸಿರುನಿಶಾನೆ ಸಿಗುತ್ತಿಲ್ಲ. ಈಗ ವರಿಷ್ಠರು ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ನೀಡಲೇಬೇಕಾಗಿದೆ. ಆದ್ದರಿಂದ ಯಾವುದೇ ಕ್ಷಣದಲ್ಲಿ ಮಂತ್ರಿ ಮಂಡಲ ಪುನಾರಚನೆಯಾಗಬಹುದೆಂಬ ಎಂಬ ಅಭಿಪ್ರಾಯವನ್ನು ಮೂಡಿಸಿದೆ.
ಭವಿಷ್ಯಕ್ಕೆ ಉತ್ಸಾಹ:ರಾಜ್ಯದಲ್ಲಿ ಇನ್ನೂ ಎರಡು ಕ್ಷೇತ್ರಗಳಿಗೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆ ಹಾಗೂ ಪಂಚಾಯಿತಿ ಚುನಾವಣೆ ಎದುರಿಸಲು ಬಿಜೆಪಿ ವಲಯಕ್ಕೆ ಈ ಫಲಿತಾಂಶ ಮತ್ತಷ್ಟು ಉತ್ಸಾಹ ತಂದಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶಕ್ಕೂ ಬಿಜೆಪಿ ತೆಗೆದುಕೊಂಡು ಹೋಗುವುದು ಖಚಿತವಾಗಿದೆ.
ತಪು್ಪ ತಿದ್ದಿಕೊಳ್ಳದ ಕೈ ಪಡೆ:ಕಾಂಗ್ರೆಸ್​ನಲ್ಲಿ ತಪು್ಪಗಳನ್ನು ತಿದ್ದಿಕೊಳ್ಳುವುದಿಲ್ಲ, ಯಾವುದೇ ಕಾರ್ಯತಂತ್ರವೂ ಇರುವುದಿಲ್ಲ, ಕಾರ್ಯಕರ್ತರಲ್ಲಿ ಉತ್ಸಾಹವನ್ನು ತುಂಬುವುದಿಲ್ಲವೆಂಬುದಕ್ಕೆ ಎರಡು ಕ್ಷೇತ್ರದ ಉಪ ಚುನಾವಣೆ ಸಾಕ್ಷಿಯಾಯಿತು. ಪಕ್ಷದ ಮುಖಂಡರು ರ್ಚವಿತಚರ್ವಣ ಭಾಷಣ ಮಾಡುವುದು ಬಿಟ್ಟರೆ ಎದುರಾಳಿಗಳ ಸಾಮರ್ಥ್ಯ ಅಳೆದು ಅದಕ್ಕೆ ಪ್ರತಿತಂತ್ರಗಳನ್ನು ರೂಪಿಸುವುದಿಲ್ಲ. ಶಿರಾ ಹಾಗೂ ಆರ್​ಆರ್ ನಗರದಲ್ಲಿ ಕಾಂಗ್ರೆಸ್ ಮತಬುಟ್ಟಿಗೆ ಬಿಜೆಪಿ ಕೈ ಹಾಕಿದ್ದರೂ ಸಹ ಅದನ್ನು ತಡೆಯುವ ಪ್ರಯತ್ನ ನಡೆಯಲಿಲ್ಲ. ಶಿರಾದಲ್ಲಿ ಜಯಚಂದ್ರ ಅನೇಕ ಸಮುದಾಯಗಳ ವಿರೋಧ ಕಟ್ಟಿಕೊಂಡಿದ್ದರು. ಅಂತಹ ಸಮುದಾಯಗಳನ್ನು ಸೆಳೆಯಲು ಬಿಜೆಪಿ ಯಶಸ್ವಿಯಾಯಿತು. ಆದರೆ ಕಾಂಗ್ರೆಸ್ ಆ ಸಮುದಾಯಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳಲಿಲ್ಲ. ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಂತ್ರಗಾರಿಕೆಯಲ್ಲಿ ನಿಪುಣ ಎಂದು ಅವರ ಬೆಂಬಲಿಗರು ಕರೆಯುತ್ತಿದ್ದರು. ಆದರೆ ಅವರು ಅಧ್ಯಕ್ಷರಾದಾಗಿನಿಂದ ಕಾರ್ಯಕರ್ತರನ್ನು ಬೆಳೆಸುವಂತಹ ಯಾವುದೇ ತಂತ್ರಗಾರಿಕೆಯನ್ನು ರೂಪಿಸಲಿಲ್ಲ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರದಲ್ಲಿ ಕೂಸು ಹುಟ್ಟುವುದಕ್ಕೆ ಮುನ್ನ ಕುಲಾವಿ ಹೊಲಿಸಿದರು ಎಂಬಂತೆ ಡಿಕೆಶಿ ಮತ್ತು ಸಿದ್ದರಾಮಯ್ಯ ನಡೆದುಕೊಂಡರು. ಭಾಷಣ ಕೇಳಲು ಬರುವ ಜನರನ್ನು ಮತದಾರರನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಆಗಲಿಲ್ಲ. ಪ್ರತ್ಯೇಕವಾದ ತಂತ್ರಗಾರಿಕೆಯನ್ನೇ ರೂಪಿಸುವ ಅಗತ್ಯವಿದೆ ಎಂಬ ಸಂದೇಶವನ್ನು ಈ ಚುನಾವಣೆ ಕಾಂಗ್ರೆಸ್​ಗೆ ನೀಡಿದೆ.
ಬಿಜೆಪಿ ಗೆದ್ದಿದ್ದೇಕೆ?
ಗೆಲುವು ಕೈಕೊಟ್ಟಿದ್ದೇಕೆ
ಮೇಲ್ಮನೆಯಲ್ಲೂ ಬಿಜೆಪಿ ಬಲ
ಪರಿಷತ್ ಚುನಾವಣೆಯ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ಪುಟ್ಟಣ್ಣ, ಪಶ್ಚಿಮ ಪದವೀಧರ ಕ್ಷೇತ್ರದಿಂದ ಎಸ್. ವಿ. ಸಂಕನೂರು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶಿಲ್ ಜಿ.ನಮೋಶಿಗೆ ಅದೃಷ್ಟ ಖುಲಾಯಿಸಿದೆ. ಆಗ್ನೇಯ ಪದವೀಧರ ಕ್ಷೇತ್ರದ ಫಲಿತಾಂಶ ಬಾಕಿಯಿದೆ.
ದಳ ಸೋತಿದ್ದೇಕೆ?
ದಳಪಡೆಗಿದೆ ಸವಾಲು
ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ದಾರಿ ತಪ್ಪಿದೆ. ಕಾರ್ಯಕರ್ತರನ್ನು ಉಳಿಸಿಕೊಳ್ಳಲಾಗದ ಸ್ಥಿತಿಗೆ ಪಕ್ಷ ಬಂದಿದೆ ಎಂದರೆ ಅದಕ್ಕೆ ಪಕ್ಷದ ನಾಯಕತ್ವವೇ ಕಾರಣವಾಗಿದೆ. ಪಕ್ಷದಲ್ಲಿ ಸ್ಪಷ್ಟವಾದ ನಿರ್ಧಾರವಿಲ್ಲ, ತಾತ್ವಿಕವಾದ ನಿಲುವನ್ನು ತೆಗೆದುಕೊಳ್ಳುತ್ತಿಲ್ಲ. ಹೊಂದಾಣಿಕೆಯ ಪಕ್ಷ ಎಂಬ ಹೆಸರು ಪಡೆದುಕೊಂಡಿದೆ. ಅಂತಹ ಕಳಂಕ ತೊಳೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬುದು ಪಕ್ಷಕ್ಕೆ ಸಿಕ್ಕ ಸಂದೇಶವಾಗಿದೆ ಜೆಪಿ ಚಳವಳಿಯ ಭಾಗವಾಗಿ ಹುಟ್ಟಿದ ಜನತಾದಳ ನಾಯಕರು ಇರುವ ಪಕ್ಷವೇ ಹೊರತು ಕಾರ್ಯಕರ್ತರ ಪಕ್ಷವಲ್ಲ. ಈ ಪಕ್ಷವನ್ನು ಕಾರ್ಯಕರ್ತರ ಪಕ್ಷವನ್ನಾಗಿ ಮಾಡುವ ಅಗತ್ಯವಿದೆ ಎಂಬುದು ಆ ಪಕ್ಷದ ಮುಖಂಡರ ಅಭಿಪ್ರಾಯವಾಗಿದೆ. ಶಿರಾದಲ್ಲಿ ಅಮ್ಮಾಜಮ್ಮ ಅವರ ಪಾಲಿಗೆ ಇದ್ದ ಅನುಕಂಪವನ್ನು ಮತವಾಗಿ ಪರಿವರ್ತನೆ ಮಾಡಿಕೊಳ್ಳಲು ಜೆಡಿಎಸ್​ಗೆ ಸಾಧ್ಯವಾಗಿಲ್ಲ. ಮುನಿದ ಅನೇಕ ಮುಖಂಡರನ್ನು ಸಮಾಧಾನ ಮಾಡಲು ಸಾಧ್ಯವಾಗಲಿಲ್ಲ. ಕುಟುಂಬದಲ್ಲಿನ ಭಿನ್ನಾಭಿಪ್ರಾಯ ಹೊರಬಂತು. ಪಕ್ಷದಲ್ಲಿ ಬೇರೆ ಬೇರೆ ಗುಂಪುಗಳಾಗಿರುವುದು, ನಾಯಕತ್ವ ವಹಿಸಿರುವ ಎಚ್.ಡಿ. ಕುಮಾರಸ್ವಾಮಿಗೆ ಅನೇಕರ ಅಭಿಪ್ರಾಯಗಳು ಪಥ್ಯವಾಗದೇ ಇರುವುದು ಪಕ್ಷದ ಇಂದಿನ ಸ್ಥಿತಿಗೆ ಕಾರಣವಾಗಿದೆ.
ಫಲಿತಾಂಶದ ಸಂದೇಶ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
