ಚಿಕ್ಕಬಳ್ಳಾಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಸ್ಮರಿಸಿಕೊಂಡು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಕಣ್ಣೀರು ಹಾಕಿದ್ದಾರೆ. ರ‍್ಯಾಲಿಯಲ್ಲಿ ಭಾಷಣದ ವೇಳೆಯೇ ಕೆಲ ಕ್ಷಣ ಭಾವುಕರಾಗಿದ್ದಾರೆ.
ದೂರ ಮಾಡಿದ್ದೀರಿ,ದೂರ ಮಾಡಿದ್ದೀರಿ,ಕಳೆದ10ತಿಂಗಳಿಂದ ಅಜ್ಞಾತವಾಸದಲ್ಲಿದ್ದೇನೆ,ನಾನೇನು ತಪ್ಪು ಮಾಡಿಲ್ಲ,ನಾನೇನು ತಪ್ಪು ಮಾಡಿಲ್ಲ,ದಯವಿಟ್ಟು ನನ್ನ ಕೈ ಬಿಡಬೇಡಿ,ನಿಮ್ಮ ಮಗನಾಗಿ ನಿಮ್ಮ ಸೇವೆಯನ್ನು ಮಾಡುತ್ತೇನೆ ಎನ್ನುತ್ತಲೇ ಕಣ್ಣೀರು ಸುರಿಸಿದರು. ಕರವಸ್ತ್ರದೊಂದಿಗೆ ಹೊರೆಸಿಕೊಂಡು ಮತ್ತೆ ಮಾತನಾಡಲು ಯತ್ನಿಸಿ,ಸಾಧ್ಯವಾಗದೇ ನಮಸ್ಕಾರ ಹೇಳಿ ಸುಮ್ಮನಾದರು. ಬಳಿಕ ಮೈಕನ್ನು ಪಕ್ಕದಲ್ಲಿಯೇ ಇದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಗೆ ಕೊಟ್ಟರು.
ಉಮೇದುವಾರಿಕೆ ಸಲ್ಲಿಕೆಗೆ ಕಡೇ ದಿನವಾದ ಗುರುವಾರ ಬಿಜೆಪಿ ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ರೋಡ್ ಶೋ ಕೈಗೊಂಡಿತ್ತು. ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಹೆಚ್ಚಿನ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶಿಸಿತು. ಇದೇ ವೇಳೆ ಅಭ್ಯರ್ಥಿ ಡಾ ಕೆ.ಸುಧಾಕರ್ ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸಗಳು,ಪ್ರಧಾನಿ ನರೇಂದ್ರ ಮೋದಿ ನಾಯಕತ್ವ,ಜೆಡಿಎಸ್ ಮೈತ್ರಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಕೊನೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದನ್ನು ಸ್ಮರಿಸಿ,ಭಾವುಕರಾದರು. ಪಕ್ಕದಲ್ಲಿಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,ಮಾಜಿ ಸಚಿವರಾದ ಡಾ ಕೆ.ಸುಧಾಕರ್,ಎಂ.ಟಿ.ಬಿ.ನಾಗರಾಜ್ ಭುಜವನ್ನು ತಟ್ಟಿ ಸಮಾಧಾನಪಡಿಸಿದರು. ಹಾಗೆಯೇ ಬೆಂಬಲಿಗರು ಅಳುವುದನ್ನು ನೋಡಲಾಗದೇ ಬೇಡ,ಬೇಡ ಎಂದು ಘೋಷಣೆಗಳನ್ನು ಕೂಗಿದರು.
ಕಳೆದ2023ರ ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರದೀಪ್ ಈಶ್ವರ್ ಅಯ್ಯರ್ ವಿರುದ್ಧ ಸುಧಾಕರ್ ಸೋಲು ಅನುಭವಿಸಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡರೂ ಕೈ ಹಿಡಿಯಲಿಲ್ಲ,ಚುನಾವಣೆಯಲ್ಲಿ ಸೋಲಿಸಲಾಯಿತು ಎನ್ನುವುದನ್ನು ಕೆ.ಸುಧಾಕರ್ ಪ್ರಸ್ತಾಪಿಸಿ ಭಾವುಕರಾದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
