ಬೆಂಗಳೂರು: ಬಿಜೆಪಿಯವರದು ರಾಜಕಾರಣಕ್ಕಾಗಿ ಬರ ಅಧ್ಯಯನ. ರಾಜ್ಯ ಸರ್ಕಾರ ಸಮೀಕ್ಷೆ, ಅಧ್ಯಯನ ಮಾಡಿಯೇ ಬರಪೀಡಿತ ತಾಲೂಕುಗಳು ಎಂದು ಘೋಷಿಸಿದೆ. ಕೇಂದ್ರದ ಅಧಿಕಾರಿಗಳು ಅಧ್ಯಯನ ಮಾಡಿ ದೆಹಲಿಗೆ ಮರಳಿದ್ದಾರೆ. ಈಗ ಬಿಜೆಪಿಯವರ ಅಧ್ಯಯನ ಮಾಡಲಿ ಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಬಿ‌ಎಸ್.ಯಡಿಯೂರಪ್ಪ ಅವರ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಬಿಜೆಪಿಯವರು ಬರ ಅಧ್ಯಯನ ಮಾಡುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಅಧ್ಯಯನ ಮಾಡಿ ವರದಿ ನೀಡಲಿ. ಆದರೆ ರೈತರು, ಬರಪೀಡಿತರ ಬಗ್ಗೆ ನೈಜ ಕಾಳಜಿಯಿದ್ದರೆ ದೆಹಲಿಗೆ ಹೋಗಿ, ಎರಡು ದಿನ ಪಟ್ಟಾಗಿ ಕುಳಿತು ಪರಿಹಾರದ ಅನುದಾನ ಬಿಡುಗಡೆ ಮಾಡಿಸಲಿ ಎಂದು ಸವಾಲೆಸೆದರು.
ಮಳೆ ಕೈಕೊಟ್ಟಿದ್ದರಿಂದ 33 ಸಾವಿರ ಕೋಟಿ ರೂ.ಗೆ ಅಧಿಕ ನಷ್ಡವಾಗಿದೆ. ಕೇಂದ್ರ ಸರ್ಕಾರದ ಬರ ಕೈಪಿಡಿ ಮಾನದಂಡ ಆಧರಿಸಿ ಸಮೀಕ್ಷೆ ಮಾಡಿ ಕೇಂದ್ರಕ್ಕೆ ಮನವಿ ಸಲ್ಲಿಸಿ, ಎನ್ ಡಿಆರ್ ಎಫ್ ನಿಯಮಾವಳಿ ಪ್ರಕಾರ 17,900 ಕೋಟಿ ರೂ ನೆರವಿಗೆ ಕೋರಿದ್ದೇವೆ.
ಬರ ಅಧ್ಯಯನ ಮಾಡಿ ಹೋದ ಕೇಂದ್ರದ ಅಧಿಕಾರಿಗಳು ಇನ್ನೂ ವರದಿ ಕೊಟ್ಟಿಲ್ಲ. ನಮ್ಮ ಮೂವರು ಸಚಿವರು ದೆಹಲಿಗೆ ಹೋಗಿ ಖುದ್ದು ಭೇಟಿಯಾಗಲು ಕೇಳಿದರೂ ಕಾಲಾವಕಾಶ ಕೊಟ್ಟಿಲ್ಲ. ಬರಗಾಲದಿಂದ ಸಂಕಷ್ಟಕ್ಕೆ ತುತ್ತಾದವರ ಬಗ್ಗೆ ಈ ಪಾಟಿ ಅಸಡ್ಡೆ ಯಾಕೆ ? ಎಂದು ತಿಳಿಯುತ್ತಿಲ್ಲ ಎಂದು ಸಿಡಿಮಿಡಿಗೊಂಡರು.
ರಾಜ್ಯದ ಕೇಂದ್ರ ಸಚಿವರು ಒಳಗೊಂಡು 25 ಸಂಸದರು ಈ ಬಗ್ಗೆ ಬಾಯಿಬಿಡುತ್ತಿಲ್ಲ. ಪ್ರಧಾನಿ, ಕೇಂದ್ರದ ಸಂಬಂಧಪಟ್ಟ ಸಚಿವರಿಗೆ ತಾವೇ ಭೇಟಿಯಾಗಿ ನೆರವು ಕೇಳುತ್ತಿಲ್ಲ. ಆದರೆ ಬಿಜೆಪಿಯವರು ಬರ ಅಧ್ಯಯನ ಮಾಡುತ್ತಾರಂತೆ, ಬರ ಅಧ್ಯಯನ. ಇದೊಂದು ರಾಜಕಾರಣ ಬಿಟ್ಟರೆ ಬೇರೇನೂ ಅಲ್ಲವೆಂದು ಸಿಎಂ ಸಿದ್ದರಾಮಯ್ಯ ಛೇಡಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
