ಕಲಬುರಗಿ:ಬಿಜೆಪಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಬೃಹತ್ ಸಮಾವೇಶಕ್ಕೆ ಕಲಬುರಗಿ ಸಜ್ಜಾಗಿದೆ. ಭಾನುವಾರ ಬೆಳಗ್ಗೆ 11.30ಕ್ಕೆ ನಾಗನಹಳ್ಳಿ ಹತ್ತಿರದ ವಿಶಾಲ ಪ್ರದೇಶದಲ್ಲಿ ಆಯೋಜಿಸಿರುವ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನ ಹರಿದುಬರುವ ನಿರೀಕ್ಷೆ ಇದ್ದು, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಕೇಸರಿ ಪಡೆ ವಿರಾಟ್ ಶಕ್ತಿ ಪ್ರದರ್ಶನ ನಡೆಸಲು ಸಕಲ ತಯಾರಿ ನಡೆಸಿದೆ.
ದಾವಣಗೆರೆಯಲ್ಲಿ ಜರುಗಿದ ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆಯುವ ಜತೆಗೆ ಹಿಂದುಳಿದ ವರ್ಗದವರನ್ನು ತನ್ನತ್ತ ಸೆಳೆಯಲು ಬಿಜೆಪಿ ನಾಯಕರು ಕಾರ್ಯತಂತ್ರ ರೂಪಿಸಿದ್ದು, ಸುಮಾರು ನಾಲ್ಕೈದು ಲಕ್ಷ ಜನರನ್ನು ಸೇರಿಸಿ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಪ್ರತಿಪಕ್ಷಗಳಿಗೆ ಟಾಂಗ್ ಕೊಡಲು ನಿರ್ಧರಿಸಿದ್ದಾರೆ. ಒಬಿಸಿ ಸಮಾವೇಶ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳ 312 ಬಿಜೆಪಿ ಮಂಡಲಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಕ್ಷೇತ್ರವಾರು ಜನರನ್ನು ಕರೆತರುವುದಕ್ಕೆ ಟಾರ್ಗೆಟ್ ಸಹ ನೀಡಲಾಗಿದೆ. ಮಧ್ಯಪ್ರದೇಶ ಸಿಎಂ ಶಿವರಾಜಸಿಂಗ್ ಚೌಹಾಣ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ ಸೇರಿ ಕೇಂದ್ರ, ರಾಜ್ಯ ಸಚಿವರು, ಹಲವು ಮುಖಂಡರು ಪಾಲ್ಗೊಳ್ಳುವರು. ನೂರಕ್ಕೂ ಅಧಿಕ ಧರ್ಮಗುರುಗಳು ಸಹ ಭಾಗವಹಿಸುವ ಸಾಧ್ಯತೆಗಳಿವೆ.
ಇಡೀ ನಗರ ಕೇಸರಿಮಯ: ಸಮಾವೇಶ ಹಿನ್ನೆಯಲ್ಲಿ ಕಲಬುರಗಿ ನಗರ ಅಕ್ಷರಶಃ ಕೇಸರಿಮಯವಾಗಿದೆ. ಎಲ್ಲ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬಿಜೆಪಿ ಧ್ವಜ ರಾರಾಜಿಸುತ್ತಿವೆ. ಹೊರವಲಯದ ನಾಗನಹಳ್ಳಿ ಹತ್ತಿರ ಸಮಾವೇಶವಿದ್ದು, ಅಲ್ಲಿಗೆ ಸಂರ್ಪಸುವ ಎಲ್ಲ ಮಾರ್ಗಗಳಲ್ಲಿ ಪಕ್ಷದ ಧ್ವಜ ಜತೆಗೆ ಬೃಹತ್ ಕಟೌಟ್, ಸ್ವಾಗತ ಕಮಾನು, ಬ್ಯಾನರುಗಳು ತಲೆ ಎತ್ತಿವೆ.
ಭರ್ಜರಿ ಸಿದ್ಧತೆ: ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಬಳಿಯ ರದ್ದೇವಾಡಗಿ ಲೇಔಟ್​ನ 100 ಎಕರೆ ವಿಶಾಲ ಜಾಗದಲ್ಲಿ ಸಮಾವೇಶದ ಬೃಹತ್ ಪೆಂಡಾಲ್ ತಲೆ ಎತ್ತಿದೆ. ಎರಡೂವರೆ ಲಕ್ಷ ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಊಟಕ್ಕೆ 26 ಎಕರೆ ಪ್ರದೇಶದಲ್ಲಿ ಪ್ರತ್ಯೇಕ ಪೆಂಡಾಲ್ ಹಾಕಲಾಗಿದೆ. ಸಮಾವೇಶಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನು ಕರೆತರಲು 25 ಸಾವಿರ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಸರಣಿ ಸಭೆ ನಡೆಸಿ ಸಮಾವೇಶ ಯಶಸ್ವಿಗೆ ರೂಪುರೇಷೆ ಸಿದ್ಧಪಡಿಸಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರೂ ಒಗ್ಗಟ್ಟಿನಿಂದ ಸಮಾವೇಶ ಯಶಸ್ಸಿಗೆ ದುಡಿಯುತ್ತಿದ್ದಾರೆ.
ಒಬಿಸಿ ಸಮಾವೇಶಕ್ಕಾಗಿ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಐದು ಲಕ್ಷ ಜನರು ಸೇರಲಿದ್ದು, ಕಲ್ಯಾಣ ನಾಡಿನಿಂದ ರಾಜ್ಯ ರಾಜಕಾರಣಕ್ಕೆ ಸಮಾವೇಶ ಹೊಸ ಸಂದೇಶ ರವಾನಿಸಲಿದೆ. ಒಬಿಸಿ ವರ್ಗದ ಹಿತ ಬಿಜೆಪಿಯಿಂದ ಮಾತ್ರ ಸಾಧ್ಯ.
|ಎನ್.ರವಿಕುಮಾರ್ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ರಾಜ್ಯದಲ್ಲಿ ಮೊದಲ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಒಬಿಸಿ ಸಮಾವೇಶ ಕಲಬುರಗಿ ಜಿಲ್ಲೆ ಇತಿಹಾಸದ ಪುಟ ಸೇರಲಿದೆ. ಒಬಿಸಿ ಜನರ ವಿಕಾಸ ಮತ್ತು ಹಿತ ಕಾಯುವುದಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ತೋರಿಸಿ ಕೊಡುವುದು ಈ ಸಮಾವೇಶದ ಉದ್ದೇಶ.
|ಡಾ.ಬಿ.ಜಿ. ಪಾಟೀಲ್ವಿಧಾನ ಪರಿಷತ್ ಸದಸ್ಯ
ಬೆಂಗಳೂರು:ಆಡಳಿತ ಬಿಜೆಪಿ ಚುನಾವಣಾ ಪೂರ್ವ ಚಟುವಟಿಕೆಗಳು ಮತ್ತೆ ಗರಿಗೆದರಿದ್ದು, ಸರ್ಕಾರದ ಸಾಧನೆ ತಿಳಿಸಿ ಜನರ ವಿಶ್ವಾಸ ಗಳಿಸಲು ಉದ್ದೇಶಿತ ಕಾರ್ಯಕ್ರಮಗಳಿಗೆ ಭೂಮಿಕೆ ಸಿದ್ಧಪಡಿಸಿದೆ. ಕಲಬುರಗಿಯಲ್ಲಿ ಭಾನುವಾರ ಒಬಿಸಿ ಮೋರ್ಚಾ ಸಮಾವೇಶದ ಮೂಲಕ ಡಬಲ್ ಇಂಜಿನ್ ಸರ್ಕಾರದ ಯೋಜನೆಗಳ ಪ್ರಯೋಜನ ಅನಾವರಣಗೊಳಿಸಲಿದೆ. ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಸೇರಿಸುವುದು, ಕಾರ್ಯಕರ್ತರನ್ನು ಸಜ್ಜುಗೊಳಿಸುವುದು ಈ ಕಾರ್ಯಕ್ರಮಗಳ ಪ್ರಧಾನ ಕಾರ್ಯಸೂಚಿಯಾಗಿದೆ. ಮೂರು ವರ್ಷಗಳ ‘ಪ್ರಗತಿ ವರದಿ’ ಜನರ ಮುಂದಿಡುವುದಕ್ಕಾಗಿ ‘ಜನ ಸಂಕಲ್ಪ’ ಯಾತ್ರೆ ನವೆಂಬರ್ ಮೊದಲ ವಾರದಲ್ಲಿ ಶುರುವಾಗಲಿದ್ದು, ಮೋರ್ಚಾಗಳು ಹಾಗೂ ಜನಸಂಕಲ್ಪ ಸಮಾವೇಶಕ್ಕೆ ನಿಗದಿತ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಸಂಘಟನಾ ಚಟುವಟಿಕೆಗಳು ಪುನಾರಂಭದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ‘ಕಾವೇರಿ’ ನಿವಾಸಕ್ಕೆ ಶನಿವಾರ ಧಾವಿಸಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನ ಹಾಗೂ ಮುಂದೆ ಅನುಸರಿಸಬೇಕಾದ ನಡೆ ಬಗ್ಗೆ ಪ್ರಸ್ತಾಪವಾಗಿದೆ. ಕಲಬುರಗಿಯಲ್ಲಿ ಭಾನುವಾರ ನಡೆಯಲಿರುವ ಒಬಿಸಿ ಮೋರ್ಚಾ ಸಮಾವೇಶ, ನವೆಂಬರ್ ಮೊದಲ ವಾರದಲ್ಲಿ ಆಳಂದದಿಂದ ‘ಜನಸಂಕಲ್ಪ’ ಯಾತ್ರೆ ಶುರುವಾಗುತ್ತಿರುವ ಬಗ್ಗೆ ಬೊಮ್ಮಾಯಿ ಮಾಹಿತಿ ನೀಡಿ, ಆಹ್ವಾನಿಸಿದರು ಎಂದು ಮೂಲಗಳು ಹೇಳಿವೆ.
ನಟಿ ವಿನಯಪ್ರಸಾದ್ ಮನೆಯಲ್ಲಿ ಕಳವು; ಬೆಡ್​ರೂಮ್​ನಲ್ಲಿದ್ದ ನಗದು ಕದ್ದ ಕಳ್ಳರು!

ಇಬ್ಬರ ಜೀವ ತೆಗೆದ ಸೈಡ್ ​ಸ್ಟ್ಯಾಂಡ್​, ಒಬ್ಬನ ಪ್ರಾಣ ಉಳಿಸಿದ ಹೆಲ್ಮೆಟ್​: ಆದ್ರೆ ತಪ್ಪು ಮೂವರದ್ದೂ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
