ಬೆಂಗಳೂರು:ಎದುರಾಳಿಗಳು ಸೋತು ಸುಣ್ಣವಾದಾಗ ಇನ್ನಷ್ಟು ಆಕ್ರಮಣಕಾರಿಯಾಗು ಎಂಬ ‘ರಣನೀತಿ’ ಅನುಸರಿಸಲು ಬಿಜೆಪಿ ಮುಂದಾಗಿದ್ದು, ಉಪ ಚುನಾವಣೆ ಗೆಲುವಿನಿಂದ ಮೈಮರೆಯದೆ ಮುಂಬರುವ ಉಪ ಚುನಾವಣೆಗಳಲ್ಲೂ ಯಶೋಗಾಥೆ ಮುಂದುವರಿಸಲು ಭೂಮಿಕೆ ಸಿದ್ಧಪಡಿಸಲಾರಂಭಿಸಿದೆ.
ಬೆಳಗಾವಿ ಲೋಕಸಭೆ, ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಅಧಿಕೃತ ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಸರ್ಕಾರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಜತೆಗೆ ಚುನಾವಣಾ ಕಣದಲ್ಲಿ ಮುನ್ನುಗ್ಗುವ ಛಾತಿಯನ್ನೂ ಪ್ರದರ್ಶಿಸಿದೆ.
ಓಲೈಕೆ ತಂತ್ರ:ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿ, 50 ಕೋಟಿ ರೂ. ಮೀಸಲಿಟ್ಟಿದ್ದಾರೆ. ಹಾಗೆಯೇ 2 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಸ್ಕಿ ನಾಲಾ ಎಡ-ಬಲದಂಡೆ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಅಸ್ತು ಎಂದಿದ್ದು, 53 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಲ್ಲಿ ಮರಾಠಿ ಸಮುದಾಯದ 40,000 ಮತದಾರರಿದ್ದು, ಫಲಿತಾಂಶದಲ್ಲಿ ನಿರ್ಣಾಯಕರಾಗಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸಮುದಾಯದ ಜನರು ಗಮನಾರ್ಹ ಸಂಖ್ಯೆಯಲ್ಲಿದ್ದು, ಮಸ್ಕಿಯಲ್ಲಿ ಸಮುದಾಯ ಜನಸಂಖ್ಯೆ ಅಲ್ಪಪ್ರಮಾಣದಲ್ಲಿದೆ.
ಪಕ್ಷದ ರಾಜ್ಯ ಉಪಾಧ್ಯಕ್ಷ, ಬಿಎಸ್​ವೈ ಪುತ್ರ ಬಿ.ವೈ.ವಿಜಯೇಂದ್ರ ಬೀದರ್​ನಲ್ಲಿ ಮರಾಠ ಸಮುದಾಯದ ಸಭೆ ನಡೆಸಿದ ಬೆನ್ನಲ್ಲೇ ಮರಾಠ ಪ್ರಾಧಿಕಾರ ರಚನೆ ನಿರ್ಧಾರ ಹೊರ ಬಿದ್ದಿದೆ. ಅವರು ಭರವಸೆ ನೀಡಿದಂತೆ 24 ಗಂಟೆಯಲ್ಲೆ ಸರ್ಕಾರದಿಂದ ಆದೇಶವೂ ಹೊರಬಿದ್ದಿದೆ.
ಬೆಳಗಾವಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡದ್ದೂ ಲೋಕಸಭೆ ಉಪ ಚುನಾವಣೆ ಭಾಗವಾಗಿದೆ. ಹಲವು ಮಠಗಳು, ಧಾರ್ವಿುಕ ಸಂಸ್ಥೆಗಳಿಗೆ ಅನುದಾನ ಬಿಡುಗಡೆಯ ಹಿನ್ನೆಲೆಯಲ್ಲೂ ಮೆಚ್ಚಿಸುವ ರಾಜಕಾರಣವಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಚಟುವಟಿಕೆ ಚುರುಕು
ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಘಟನಾತ್ಮಕ ಚಟುವಟಿಕೆ ಚುರುಕುಗೊಳಿಸಲಾಗಿದ್ದು, ಶಿರಾ ಮತ್ತು ಕೆ.ಆರ್.ಪೇಟೆ ಮಾದರಿ ಪ್ರಯೋಗಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬಸವಕಲ್ಯಾಣದಲ್ಲಿ ವಿಜಯೇಂದ್ರ ಮತ್ತು ಮಸ್ಕಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮತ್ತವರ ತಂಡವು ಸಮುದಾಯಗಳು, ಕಾರ್ಯಕರ್ತರು, ಪ್ರಮುಖರ ಒಂದು ಸುತ್ತಿನ ಸಭೆಯನ್ನು ಪೂರ್ಣಗೊಳಿಸಿದ್ದಾರೆ. ಸಂಘಟನೆಯಲ್ಲಿ ಒಗ್ಗಟ್ಟು, ಮುಖಂಡರ ಮಧ್ಯೆ ಸಮನ್ವಯತೆ ಸಾಧಿಸುವ ಜತೆಗೆ ಬೂತ್​ವುಟ್ಟದಲ್ಲಿ ಸಮಿತಿಗಳು, ವಾಟ್ಸ್​ಆಪ್ ಗ್ರೂಪ್​ಗಳ ರಚನೆ, ಪೇಜ್ ಪ್ರಮುಖರನ್ನು ಸಕ್ರಿಯಗೊಳಿಸುವುದು ಇತ್ಯಾದಿ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಸಂಘಟನೆ ಪ್ರವೇಶಿಸಿದ ಡಾ.ಸುಧಾಕರ್
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬಿಜೆಪಿ ‘ಸಂಘಟನೆ’ ಚಟುವಟಿಕೆಗೂ ಪ್ರವೇಶಿಸಿದ್ದಾರೆ. ಮುಂಬರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇಮಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಉಸ್ತುವಾರಿಯಾಗಿದ್ದು, ಡಾ.ಕೆ.ಸುಧಾಕರ್​ಗೆ ಸಹ ಉಸ್ತುವಾರಿ ನೀಡುವ ಮೂಲಕ ವರಿಷ್ಠರು ರಾಜ್ಯದ ಮಟ್ಟಿಗೆ ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಶಾಸಕ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಸತೀಶ್ ರೆಡ್ಡಿ ಅವರಿಗೆ ಪ್ರತ್ಯೇಕ ಜಿಲ್ಲೆ ಹೊಣೆಗಾರಿಕೆ ನೀಡಿದ್ದ್ದು, ರಾಜ್ಯದ ಇಬ್ಬರಿಗೆ ದೆಹಲಿ ನಾಯಕರು ಮಹತ್ವ ನೀಡಿದ್ದಾರೆ. ಇಲ್ಲಿ ಯಶಸ್ಸು ಸಿಕ್ಕಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಇವರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಶಾಸಕ ಸ್ಥಾನ ತ್ಯಜಿಸಿ, ಪಕ್ಷಕ್ಕೆ ವಲಸೆ ಬಂದ 17 ಜನರ ಪೈಕಿ ಡಾ.ಸುಧಾಕರ್ ಸಂಘಟನೆಯೊಳಗೆ ಪ್ರವೇಶಿಸಿದ ಮೊದಲಿಗರಾಗಿದ್ದು, ಮಹತ್ವದ ಜವಾಬ್ದಾರಿ ನೀಡುವ ಮೂಲಕ ಮೂಲ-ವಲಸಿಗ ಚರ್ಚೆ ಅರ್ಥಹೀನವೆಂಬ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ. ಅಲ್ಲದೆ, ಖಾತೆ ಬದಲಾವಣೆ ವಿಚಾರದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಏಕಮುಖವಾದದ್ದಲ್ಲ ಎನ್ನುವುದೂ ದಿಟವಾಗಿದೆ.
ಭದ್ರವಾದ ನೆಲೆ:ಕರೊನಾ ನಿಯಂತ್ರಣದ ಭಾಗವಾಗಿ ಬಿಎಸ್​ವೈ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಸುಧಾಕರ್ ಸಲಹೆಗಳು ಸೇರಿದ್ದು, ಇವು ವರಿಷ್ಠರ ಗಮನಕ್ಕೆ ಬಂದು ನಿಕಟತೆ ಹಾಗೂ ಭದ್ರವಾದ ನೆಲೆ ಒದಗಿಸಲು ನೆರವಾಗಿವೆ. ಅಲ್ಲದೆ, ರಾಜ್ಯಗಳ ಜತೆಗಿನ ಪ್ರಧಾನಿ- ಗೃಹ ಸಚಿವರ ಸಂವಾದದ ವೇಳೆ ಡಾ.ಸುಧಾಕರ್ ಚಾಕಚಕ್ಯತೆ ಗಮನ ವೇದ್ಯವಾಗಿ ಕಾಣಿಸಿತ್ತು. ಇಂಗ್ಲಿಷ್ ಮತ್ತು ತೆಲುಗು ಭಾಷೆಯ ಮೇಲೆ ಹಿಡಿತ, ಹೈದರಾಬಾದ್​ನ ಪ್ರಮುಖ ರಾಜಕೀಯ ನಾಯಕರೊಂದಿಗೆ ಒಡನಾಟ ಅನುಕೂಲಕರ ಅಂಶಗಳಾಗಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 7 =
Remember me
