ಬೆಂಗಳೂರು:‘ಈ ಬಾರಿ 150 ಗುರಿ’ ಘೋಷವಾಕ್ಯದಡಿ‌ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಗಳು ಮಾ.1ರಿಂದ 20ರವರೆಗೆ ನಡೆಯಲಿದೆ ಎಂದು ಯಾತ್ರೆ ಸಂಚಾಲಕ, ಸಚಿವ ಸಿ.ಸಿ.ಪಾಟೀಲ್ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾಹಿತಿ ನೀಡಿದರು.
ಇದನ್ನೂ ಓದಿ:ಆಹಾರ ಅಭದ್ರತೆ; ಸೂಪರ್ ಮಾರ್ಕೆಟ್‌ಗಳಲ್ಲಿ ಹಣ್ಣು, ತರಕಾರಿ ಖರೀದಿಗೆ ಮಿತಿ ಹೇರಿಕೆ!
ಪಕ್ಷದ ರಾಜ್ಯ ಕಚೇರಿಯಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿ‌ಯಲ್ಲಿ ಶನಿವಾರ ಮಾತನಾಡಿದ ಅವರು, ಮಾ.1ರ ರಥಯಾತ್ರೆಗೆ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾ.2ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗದ್ದುಗೆ‌ ಬಳಿ ಕೇಂದ್ರ ಸಚಿವ ರಾಜನಾಥ್ ಸಿಂಗ್, ಮಾ.3 ಹಾಗೂ 4ರ ರಥಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಚಾಲನೆ ನೀಡಲಿದ್ದಾರೆ. ನಾಲ್ಕು ತಂಡಗಳು 20 ದಿನಗಳಲ್ಲಿ ‌8000 ಕಿ.ಮೀ. ಕ್ರಮಿಸಿ 224 ವಿಧಾನಸಭೆ ಕ್ಷೇತ್ರಗಳನ್ನು ತಲುಪಲಿದ್ದು, ಮಾ.25ರೊಳಗೆ ದಾವಣಗೆರೆಯಲ್ಲಿ ಬೃಹತ್ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದು, 15 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಮುಂದಿನ ಚುನಾವಣೆಗಾಗಿ ಜನರ ಬಳಿಗೆ ಹೋಗುತ್ತಿದ್ದೇವೆ. ಸರ್ಕಾರದ ಸಾಧನೆ ತಿಳಿಸಿ, ಅಭಿವೃದ್ಧಿ ಕಾರ್ಯಗಳ ಅವಲೋಕನ ಮಾಡುತ್ತಾ ಕಾಂಗ್ರೆಸ್ ಮ ಹುಸಿ ಭರವಸೆಗಳ ಹುಳುಕು ಬಯಲುಗೊಳಿಸುತ್ತೇವೆ ಎಂದರು‌.
ಹಳೇ ಮೈಸೂರು, ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಸಿಂಹಪಾಲು ಸ್ಥಾನಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್ ಗೆ ಸಂಕಷ್ಟ, ಜೆಡಿಎಸ್ ಗೆ ಬಿಜೆಪಿ ಸವಾಲಾಗಲಿದೆ‌. ಹಳೇ ಮೈಸೂರು ಭಾಗದ ಜನರು‌ ಬಿಜೆಪಿಗೆ ಒಂದು ಅವಕಾಶ ಕೊಟ್ಟು ನೋಡೋಣವೆಂಬ ಚಿಂತನೆ ನಡೆಸಿದ್ದಾರೆ ಎಂದು ಎನ್.ರವಿಕುಮಾರ್ ಹೇಳಿದರು.
ಇದನ್ನೂ ಓದಿ:ಆನ್​ಲೈನ್​ ಆಟದಲ್ಲಿ ಭೇಟಿಯಾದ ಯುವಕನನ್ನು ಮದುವೆಯಾಗಲು ಭಾರತಕ್ಕೆ ಬಂದ ಯುವತಿ ಪಾಕಿಸ್ತಾನಕ್ಕೆ ವಾಪಸ್​
ನಮ್ಮ ಹೆಮ್ಮೆಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಪಕ್ಷದ ಅಗ್ರಮಾನ್ಯ ನಾಯಕ. ನಮ್ಮ ಪಾಲಿನ ಹೆಮ್ಮೆ. ಈ ಚುನಾವಣೆಯಲ್ಲಿ ಅವರನ್ನು ಬಳಸಿಕೊಳ್ಳುವುದಕ್ಕೆ ನಮಗೆ ಯಾವುದೇ ಮುಜುಗರವಿಲ್ಲ. ಎದುರಾಳಿ ಪಾಳೆಯಕ್ಕೆ ನುಗ್ಗಿ ಪಕ್ಷದ ಬಲ ಎರಡರಿಂದ 40, 44 ಸ್ಥಾನಗಳ ಜತೆಗೆ ಎರಡು ಬಾರಿ ಸರಳ ಬಹುಮತ ಸಮೀಪಕ್ಕೆ ತಂದ ಛಾತಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಅವರದು ಎಂದು ಸಿ.ಸಿ.ಪಾಟೀಲ್ ಉತ್ತರಿಸಿದರು.
ಮದ್ವೆ ದಿನವೇ ಹೃದಯಾಘಾತಕ್ಕೆ ವಧು ಸಾವು: ನಿಲ್ಲದ ವಿವಾಹ, ಮೃತಳ ತಂಗಿಗೆ ತಾಳಿ ಕಟ್ಟಿದ ವರ!

ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
