ಕೋಲಾರ:ನಿಮ್ಮ ಮನೆಯಲ್ಲಿ 70 ದಶಕದ ಕಪ್ಪು-ಬಿಳುಪು ಟಿವಿ, ರೇಡಿಯೊ, ಟೇಪ್​ ರೆಕಾರ್ಡರ್ ಇದ್ಯಾ? ಹಾಗಿದ್ದಲ್ಲಿ ನೀವು ಕುಬೇರ ಆಗ್ತೀರಿ!
ಹೌದು, ಹಳೇ ಟಿವಿ, ರೇಡಿಯೋ, ಟೇಪ್​ ರೆಕಾರ್ಡರ್​ಗೆ ಭಾರೀ ಡಿಮಾಂಡ್​ ಇದೆ. ಅವುಗಳನ್ನು ನೀವು ಮಾರಾಟ ಮಾಡಿದರೆ ಲಕ್ಷ ಲಕ್ಷ ಹಣ ಸಿಗುತ್ತದೆ. ಇವುಗಳಲ್ಲಿ ಅಳವಡಿಸಿರುವ ಕೆಂಪು ಬಣ್ಣದ ಮಕ್ಯುರ್ರಿ (ಪಾದರಸ) ಬಲ್ಬ್​ ಕೋಟಿ ರೂ. ಬೆಲೆ ಬಾಳುತ್ತದೆ. ಹೈದರಾಬಾದ್​ ಇನ್ನಿತರ ಕಡೆಗಳಿಂದ ವ್ಯಾಪಾರಿಗಳು ಬಂದು ಲಕ್ಷಾಂತರ ಹಣ ನೀಡಿ ಇಂತಹ ವಸ್ತು ಖರೀದಿಸುತ್ತಾರೆ… ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಂದಹಾಗೆ ಇದರ ಅಸಲಿಯತ್ತು ಏನು ಗೊತ್ತಾ?ಇದನ್ನೂ ಓದಿರಿಜನರ ಕೈಗೆ ಹಣ ಕೊಟ್ಟು ಮತ್ತೊಮ್ಮೆ ಲಾಕ್​ಡೌನ್​?
ಹಳೇ ಟಿವಿಗಳನ್ನು ಲಕ್ಷಾಂತರ ರೂ.ಗೆ ಖರೀದಿಸಲಾಗುತ್ತಿದೆ ಎಂಬುದು ಸುಳ್ಳು. ಅನಾಮಿಕನೊಬ್ಬ ವದಂತಿ ಹರಿಯಬಿಟ್ಟಿದ್ದು, ಹಲವರು ಇದನ್ನು ನಿಜವೆಂದೇ ಭಾವಿಸಿದ್ದಾರೆ. ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಿದೆ.
ಹಳೇ ಟಿವಿ, ರೇಡಿಯೋ, ಟೇಪ್​ ರೆಕಾರ್ಡರ್​ನಲ್ಲಿ ಅಳವಡಿಸಿರುವ ಕೆಂಪು ಬಣ್ಣದ ಮಕ್ಯುರ್ರಿ ಬಲ್ಬ್​ ಕೋಟಿ ರೂ. ಬೆಲೆ ಬಾಳುತ್ತದೆ, ಒಂದು ವೇಳೆ ಯಾರ ಬಳಿಯಾದರೂ ಇದ್ದಲ್ಲಿ ಅದೃಷ್ಟ ಲಕ್ಷ್ಮೀ ನಿಮ್ಮ ಮನೆಗೆ ಒಲಿದು ಬರುತ್ತಾಳೆ. ಒಂದು ವೇಳೆ ಡೋರ್​ ಇರುವ ಹಳೇ ಟಿವಿ ಚೆನ್ನಾಗಿದ್ದಲ್ಲಿ ಹೆಚ್ಚು ಹಣ ನೀಡಿ ಕೊಳ್ಳಲಿದ್ದಾರೆ. ಮಕ್ಯುರ್ರಿ ಬಲ್ಬ್​ ಸಂಗ್ರಹಿಸಿ ಅಣು ವಸ್ತು ತಯಾರಿಸುವ ವ್ಯಾಪಾರಿಗಳಿಗೆ ಮಾರಾಟ ಮಾಡಿದಲ್ಲಿ ಕಣ್ಣು ಮುಚ್ಚಿ ಕಣ್ಣು ತೆರೆಯುವುದಲ್ಲಿ ಕುಬೇರ ಆಗಬಹುದು ಎಂದು ಮಾಹಿತಿ ಹಬ್ಬಿಸಲಾಗಿದೆ.
ಈ ವಿಷಯ ತಿಳಿದ ಕೆಲವರು ಕಪ್ಪು-ಬಿಳುಪು ಟಿವಿ, ಟೇಪ್​ ರೆಕಾರ್ಡರ್​ ಹಿಂದೆ ಬಿದ್ದಿದ್ದಾರೆ. ಅನೇಕರು ಹಳ್ಳಿಗಳಿಗೆ ತೆರಳಿ ಹಳೇ ಟಿವಿ ರಿಪೇರಿ ಮಾಡುವವರಿಗಾಗಿ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜನರನ್ನು ವಂಚಿಸಲು ಯತ್ನಿಸುತ್ತಿರುವ ದುಷ್ಕರ್ಮಿಗಳನ್ನು ಪೊಲೀಸರು ಪತ್ತೆ ಮಾಡಬೇಕು. ಇದೊಂದು ವದಂತಿ- ವಂಚನೆಯ ಜಾಲ, ಜಾಗೃತರಾಗಿರಿ ಎಂದು ಜನರಲ್ಲಿ ಅರಿವು ಮೂಡಿಸಬೇಕು ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.
ಥೂ, ಇವರೆಂಥ ಜನ! ಕರೊನಾ ಇಲ್ಲದಿದ್ರೂ ಪುಟ್ಟಕಂದನಿಗೆ ಹೀಗಾ ಮಾಡೋದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − four =
Remember me
