|ಮರಿದೇವ ಹೂಗಾರಹುಬ್ಬಳ್ಳಿ
ಕೋವಿಡ್ ಸೋಂಕಿನಿಂದ ಮುಕ್ತರಾಗಿ ಹೊರಬಂದೆವು ಎನ್ನುವಷ್ಟರಲ್ಲೇ ಬ್ಲ್ಯಾಕ್ ಫಂಗಸ್ (ಮ್ಯುಕೋರ್ ಮಯೋಸಿಸ್) ಬೆನ್ನತ್ತಿದೆ. ಈ ರೋಗಕ್ಕೆ ತುತ್ತಾದ ವ್ಯಕ್ತಿ ಚಿಕಿತ್ಸೆ ಪಡೆದುಕೊಳ್ಳಲು ಕನಿಷ್ಠ 2 ಲಕ್ಷ ರೂ. ವರೆಗೂ ಖರ್ಚು ಮಾಡಲೇಬೇಕಿದೆ. ವ್ಯಕ್ತಿಯಲ್ಲಿ ಬ್ಲ್ಯಾಕ್ ಫಂಗಸ್ ಬಂದಿದೆಯೋ ಇಲ್ಲವೋ ಎಂಬುದನ್ನು ರೇಡಿಯಾಲಜಿ, ಅರಿವಳಿಕೆ ವಿಭಾಗದ ತಜ್ಞರು ಪತ್ತೆ ಹಚ್ಚುವ ಕೆಲಸ ಮಾಡುತ್ತಾರೆ. ನಂತರ ನೇತ್ರ ವಿಭಾಗ ಹಾಗೂ ಕಿವಿ, ಮೂಗು ಮತ್ತು ಗಂಟಲ ವಿಭಾಗದ ತಜ್ಞರು ಚಿಕಿತ್ಸೆ ಮುಂದುವರಿಸುತ್ತಾರೆ. ಒಬ್ಬ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲು ಅಂದಾಜು ಮೂರು ತಾಸು ಬೇಕು. ಸ್ವಲ್ಪ ಸಮಯ ಮೀರಿದರೆ ಅಪರೇಷನ್ ವೈಫಲ್ಯ ಕಾಣುವ ಸಾಧ್ಯತೆ ಹೆಚ್ಚು. ಮಧುಮೇಹಿಗಳಿದ್ದರೆ ಶಸ್ತ್ರಚಿಕಿತ್ಸೆ ನಡೆಸುವುದು ಮತ್ತಷ್ಟು ಕಷ್ಟ.
ಬ್ಲ್ಯಾಕ್ ಫಂಗಸ್ ಆದ ವ್ಯಕ್ತಿಗೆ 50 ಮಿ.ಗ್ರಾಂ. ಆಂಪೊಟೊರಿಸಿಯನ್ ಎಂಬ ಚುಚ್ಚುಮದ್ದು ಪ್ರತಿ ದಿನ ನೀಡಬೇಕು. ಅದೂ ರೋಗ ವಾಸಿ ಆಗುವವರೆಗೆ ಕೊಡಬೇಕು. ಒಂದು ಚುಚ್ಚುಮದ್ದಿನ ಬೆಲೆ 5 ಸಾವಿರದಿಂದ 7,500 ರೂ. ಇದೆ. ಹಿಂದೆ ಈ ಚುಚ್ಚುಮದ್ದಿಗೆ ಬೇಡಿಕೆ ಇರಲಿಲ್ಲ. ಈಗ ಏಕಾಏಕಿ ಬೇಡಿಕೆ ಜಾಸ್ತಿ ಆಗಿದ್ದರಿಂದ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ. ಇನ್ನು ಮೈಕ್ರೋಡಿಬ್ರಾಯಿಡರ್ ಎಂಬ ಯಂತ್ರದ ಮೂಲಕ ಈ ರೋಗಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕು. ಆದರೆ, ಇದುವರೆಗೆ ಈ ಯಂತ್ರಗಳು ಧೂಳು ತಿನ್ನುತ್ತಿದ್ದವು. ಮೂಲೆ ಸೇರಿದ್ದ ಈ ಯಂತ್ರಗಳಿಂದ ಗುಣಮಟ್ಟದ ಶಸ್ತ್ರಚಿಕಿತ್ಸೆ ನಿರೀಕ್ಷಿಸಲಾಗುತ್ತಿಲ್ಲ ಎಂಬ ಮಾತಿದೆ.
ಎಬಿಎಆರ್​ಕೆಯಲ್ಲಿ ಶಸ್ತ್ರಚಿಕಿತ್ಸೆ ಅಸಾಧ್ಯ:ಆಯುಷ್ಮಾನ್ ಭಾರತ -ಆರೋಗ್ಯ ಕರ್ನಾಟಕ (ಎಬಿಎಆರ್​ಕೆ) ಯೋಜನೆಗಳಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ಇಲ್ಲ. ಈ ಕುರಿತು ಈಗಾಗಲೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳೂ ನಡೆದಿವೆ. ಬ್ಲ್ಯಾಕ್ ಫಂಗಸ್ ಆದವರಿಗೆ ಯೋಜನೆಯಡಿ ಶಸ್ತ್ರಚಿಕಿತ್ಸೆ ನೀಡಲು ಅವಕಾಶ ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯುವ ಸಾಧ್ಯತೆ ಇದೆ.
12 ಜನರು ದಾಖಲು:ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಕರೊನಾ ಸೋಂಕಿತ 12 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಅದು ಕೂಡ 10 ದಿನದಲ್ಲಿ ಈ ರೀತಿಯಾಗಿದೆ. ವರ್ಷದಲ್ಲಿ ಸುಮಾರು 7-8 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸುತ್ತಿತ್ತು. ಈಗ ಮಿತಿ ಮೀರುತ್ತಿದೆ. ಇದೇ ರೀತಿ ಮುಂದುವರಿದರೆ ಬಹಳಷ್ಟು ಜನರು ತೊಂದರೆಗೊಳಗಾಗುವ ಸಾಧ್ಯತೆ ಇದೆ. ಹಾಗಾಗಿ, ಕರೊನಾ ಸೋಂಕಿತರಿಗೆ ಸರತಿ ಪ್ರಕಾರ ಚಿಕಿತ್ಸೆ ನೀಡುವುದರ ಜತೆಗೆ ಬ್ಲ್ಯಾಕ್ ಫಂಗಸ್ ಆದವರಿಗೆ ಶಸ್ತ್ರಚಿಕಿತ್ಸೆ ನಡೆಸುವ ಜವಾಬ್ದಾರಿಯೂ ಬಿದ್ದಿದೆ. ಈ ಸಂಖ್ಯೆ ಇನ್ನೆರಡು ತಿಂಗಳಲ್ಲಿ 150ಕ್ಕೆ ಹೆಚ್ಚುವ ಅಂದಾಜಿದೆ ಎನ್ನುತ್ತಾರೆ ವೈದ್ಯರು.
ಸ್ವಲ್ಪ ತಲೆನೋವು ಕಾಣಿಸಿಕೊಳ್ಳುವುದು, ಮೂಗಿನಲ್ಲಿ ರಕ್ತ ಮಿಶ್ರಿತ ನೀರು ಸೋರುವುದು, ಕಣ್ಣು ಬಾವು ಬರುವುದು ಕಂಡುಬಂದರೆ ಬೇಗ ಆಸ್ಪತ್ರೆಗೆ ದಾಖಲಾಗಬೇಕು. ಇದರಿಂದ ಬೇಗ ಈ ರೋಗ ದಿಂದ ಗುಣಮುಖರಾಗಬಹುದು. ಇಲ್ಲವಾದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು.
|ಡಾ. ರವೀಂದ್ರ ಗದಗಕಿಮ್ಸ್ ಇಎನ್​ಟಿ ವಿಭಾಗದ ಮುಖ್ಯಸ್ಥ
ಕರೊನಾ ಸೋಂಕಿನಿಂದ ಹೆಚ್ಚು ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬರುತ್ತಿದ್ದು, ಜಿಲ್ಲೆಯಲ್ಲಿಯೂ ಈ ಸಮಸ್ಯೆ ಕಂಡುಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ನಗರದಲ್ಲಿ ಎರಡು ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈ ಫಂಗಸ್ ನಿಂದ ಯಾವುದೇ ಸಾವು ಸಂಭವಿಸಿಲ್ಲ. ಆದ್ದರಿಂದ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಸಾಮಾನ್ಯವಾಗಿ 13-14 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ಕೋವಿಡ್ ಸೋಂಕಿತರಲ್ಲಿ ಈ ಫಂಗಸ್ ಗುಣಲಕ್ಷಣ ಕಂಡುಬರುತ್ತಿವೆ. ಪತ್ತೆಯಾದ 2 ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕಲಬುರಗಿ: ಕೆಲ ತಿಂಗಳ ಹಿಂದೆ ಕರೊನಾ ಸೋಂಕಿತರಾಗಿದ್ದ ನಗರದ 45 ವರ್ಷದ ಪೊಲೀಸ್ ಪೇದೆಯೊಬ್ಬರ ಒಂದು ಕಣ್ಣಿನ ದೃಷ್ಟಿ ಕೆಲದಿನ ಹಿಂದೆ ಹೋಗಿದ್ದು, ಇನ್ನೊಂದು ಮಂಜಾಗಿದೆ. ನರಗಳ ದೋಷ ಕಾಣಿಸಿಕೊಂಡು ಪಾರ್ಶ್ವವಾಯು ಹೊಡೆತದಿಂದ ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಂಡಿದೆ. ಹೀಗಾಗಿ ಇವರಿಗೆ ಬ್ಲ್ಯಾಕ್ ಫಂಗಸ್ ಇನ್ಪೆಕ್ಷನ್ ಆಗಿರಬಹುದು ಎಂಬ ಶಂಕೆ ಮೂಡಿದ್ದು, ಆರೋಗ್ಯ ಇಲಾಖೆ ಖಚಿತಪಡಿಸಬೇಕಾಗಿದೆ.
ಬೀದರ್: ಜಿಲ್ಲೆಯಲ್ಲಿ ಕೋವಿಡ್​ನಿಂದ ಗುಣ ಹೊಂದಿದ ಕೆಲವರಿಗೆ ಬ್ಲ್ಯಾಕ್ ಫಂಗಸ್ ಕಾಡುತ್ತಿದ್ದು, 12ಕ್ಕೂ ಹೆಚ್ಚು ಜನ ಇದರಿಂದ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಒಬ್ಬರ ಸ್ಥಿತಿ ತೀವ್ರ ಚಿಂತಾಜನಕ ಆಗಿರುವುದು ಆತಂಕ ಮೂಡಿಸಿದೆ. ಬೀದರ್ ನಗರದ 55 ವರ್ಷದ ಉದ್ಯಮಿಯೊಬ್ಬರು ಬ್ಲ್ಯಾಕ್ ಫಂಗಸ್​ನಿಂದ ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಸಾವು-ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ವೈದ್ಯರೊಬ್ಬರ 40 ವರ್ಷದ ಪುತ್ರನ ದವಡೆಯಲ್ಲಿ ಈ ಫಂಗಸ್ ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕಣ್ಣು, ಮೂಗು, ಹಲ್ಲಿನ ಸಮಸ್ಯೆ ಎಂದು ತೋರಿಸಿಕೊಂಡ ಇನ್ನೂ 10 ಜನರಲ್ಲಿ ಬ್ಲ್ಯಾಕ್ ಫಂಗಸ್ ಖಚಿತವಾಗಿದ್ದು, ಬಹುತೇಕರು ಹೈದರಾಬಾದ್ ಇತರೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆರೋಗ್ಯ ಅಧಿಕಾರಿಗಳಿಂದ ಅಧಿಕೃತ ಅಂಕಿ-ಸಂಖ್ಯೆ, ಮಾಹಿತಿ ಸಿಗುತ್ತಿಲ್ಲ.
ಇಲ್ಲಿ ಕಳ್ಳರು ಶವಗಳನ್ನೂ ಬಿಡುತ್ತಿಲ್ಲ; ಕೋವಿಡ್ ಸೋಂಕಿನಿಂದ ಮೃತಪಟ್ಟವರ ಚಿನ್ನಾಭರಣ ಕಳವು!

2 ದಿನಗಳ ಹಿಂದೆ ನಾಪತ್ತೆಯಾಗಿದ್ದ ದಾಯಾದಿ ಸಹೋದರಿಯರ ಶವ ಬಾವಿಯಲ್ಲಿ ಪತ್ತೆ; ಸಾವಿನ ಸುತ್ತ ಮೂಡಿವೆ ಹಲವು ಅನುಮಾನಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
