ಬೆಂಗಳೂರು:ತನ್ನ ಮಾಜಿ ಪ್ರೇಯಸಿಯೂ ಆದ ವಿವಾಹಿತ ಮಹಿಳೆಯನ್ನು ಪುಸಲಾಯಿಸಿ ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಉದ್ಯಮಿಯೊಬ್ಬ, ಖಾಸಗಿ ದೃಶ್ಯವನ್ನಿಟ್ಟುಕೊಂಡು ಬ್ಲ್ಯಾಕ್​ ಮೇಲ್​ ಮಾಡುತ್ತಿದ್ದಾನೆ.
ಪೀಣ್ಯದ ನಿವಾಸಿ 36 ವರ್ಷದ ಮಹಿಳೆ 15 ವರ್ಷಗಳ ಹಿಂದೆ ನಗರದ ಖಾಸಗಿ ಕಂಪನಿಯ ನೌಕರನನ್ನು ವಿವಾಹವಾಗಿದ್ದಳು. ವಿವಾಹಕ್ಕೂ ಮುನ್ನ ಮಹಿಳೆ ಉದ್ಯಮಿಯೊಬ್ಬನನ್ನು ಪ್ರೀತಿಸಿದ್ದಳು. ಆತನೊಂದಿಗೆ ವೈಮನಸ್ಸು ಉಂಟಾಗಿ ದೂರಾಗಿದ್ದಳು. ಇತ್ತೀಚೆಗೆ ಆ ಮಹಿಳೆಗೆ ಮಾಜಿ ಪ್ರಿಯಕರನು ತನ್ನೊಂದಿಗೆ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದ. ಇದಕ್ಕೆ ಸಮ್ಮತಿಸದ ಮಹಿಳೆ, ನನಗೆ ವಿವಾಹವಾಗಿ ಮಕ್ಕಳಿದ್ದಾರೆ. ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಳು. ಸುಮ್ಮನಾಗದ ಉದ್ಯಮಿ, ಈ ಹಿಂದೆ ಆಕೆ ಜತೆ ಹಲವೆಡೆ ಸುತ್ತಾಡಿದ್ದ ಫೋಟೋಗಳನ್ನು ನಿನ್ನ ಗಂಡನಿಗೆ ತೋರಿಸುವೆ’ ಎಂದು ಬ್ಲ್ಯಾಕ್​ಮೇಲ್​ ಮಾಡಿದ್ದ. ‘ಒಂದು ಬಾರಿ ತನ್ನೊಂದಿಗೆ ಬಂದರೆ ಮತ್ತೆ ತೊಂದರೆ ಕೊಡುವುದಿಲ್ಲ’ ಎಂದು ಪುಸಲಾಯಿಸಿದ್ದ. ಅದನ್ನು ನಂಬಿ ಮಹಿಳೆ ಆತನೊಂದಿಗೆ ಸಂಬಂಧ ಬೆಳೆಸಿದ್ದಳು.
ಇದನ್ನೂ ಓದಿರಿತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!
ಆದರೆ, ತನ್ನ ಚಾಳಿ ಮುಂದುವರಿಸಿದ್ದ ಉದ್ಯಮಿ, ಆಕೆಯ ಗಮನಕ್ಕೆ ಬಾರದಂತೆ ಇಬ್ಬರೂ ಜತೆಗಿದ್ದ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡಿದ್ದ. ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್​ಡೌನ್​ ಆದ ಬಳಿಕ ಮಹಿಳೆಯ ಪತಿ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಮಹಿಳೆಗೆ ಉದ್ಯಮಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ.
ಆದರೂ ಉದ್ಯಮಿ ಮಾತ್ರ ಆಕೆಗೆ ಪದೇಪದೆ ಕರೆ ಮಾಡಿ ತಾನಿದ್ದಲ್ಲಿಗೆ ಬರುವಂತೆ ಒತ್ತಾಯಿಸುತ್ತಿದ್ದ. ಮಹಿಳೆ ತನ್ನ ಪರಿಸ್ಥಿತಿ ಬಗ್ಗೆ ವಿವರಿಸಿದರೂ ಅದನ್ನು ಕಿವಿಗೆ ಹಾಕಿಕೊಳ್ಳದೆ ಪೀಡಿಸುತ್ತಿದ್ದ ಉದ್ಯಮಿ, ಖಾಸಗಿ ದೃಶ್ಯವನ್ನು ನಿನ್ನ ಪತಿಗೆ ತೋರಿಸಿ, ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದ.
ಮಾಜಿ ಪ್ರಿಯಕರನ ಕಿರುಕುಳಕ್ಕೆ ಬೇಸತ್ತ ಮಹಿಳೆ, ತನ್ನ ಆಪ್ತ ಸ್ನೇಹಿತೆ ಬಳಿ ಈ ವಿಚಾರ ಹಂಚಿಕೊಂಡಿದ್ದರು. ಸ್ನೇಹಿತೆ ನೀಡಿದ ಸೂಚನೆ ಮೇರೆಗೆ ನಗರ ಪೊಲೀಸ್​ ಆಯುಕ್ತರ ಕಚೇರಿಯಲ್ಲಿರುವ “ಪರಿಹಾರ ಕೌಟುಂಬಿಕ ಸಲಹಾ ಕೇಂದ್ರ”ಕ್ಕೆ ಭೇಟಿ ನೀಡಿ ತನ್ನ ಸಮಸ್ಯೆ ಹೇಳಿಕೊಂಡಿದ್ದರು. ಆದರೆ, ತನ್ನ ಕುಟುಂಬಸ್ಥರಿಗೆ ಈ ವಿಚಾರ ತಿಳಿಯಬಾರದು ಎಂದು ಮನವಿ ಮಾಡಿದ್ದಾರೆ. ಇಲ್ಲಿನ ಹಿರಿಯ ಆಪ್ತ ಸಮಾಲೋಚಕರು ಇದೀಗ ಉದ್ಯಮಿಯನ್ನು ಕರೆಸಿ ಪ್ರಕರಣ ಇತ್ಯರ್ಥಪಡಿಸಲು ಪ್ರಯತ್ನಿಸುತ್ತಿದ್ದಾರೆ
video/ ಮಹಿಳೆಯರ ಬಟ್ಟೆ, ಚಪ್ಪಲಿಯೇ ಇವನಿಗಿಷ್ಟ.. ರಾತ್ರಿ ವೇಳೆ ಬರ್ತಾನೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 13 =
Remember me
