ಬೆಂಗಳೂರು:ಅನಾರೋಗ್ಯಕ್ಕೀಡಾಗಿದ್ದ ಪತಿಯ ಚಿಕಿತ್ಸೆಗಾಗಿ ಹಣ ಇಲ್ಲದೆ ಪರದಾಡುತ್ತಿದ್ದ ಮಹಿಳೆಯ ಕಷ್ಟವನ್ನೇ ಲಾಭ ಮಾಡಿಕೊಂಡ ಉದ್ಯಮಿಯೊಬ್ಬ, ತನ್ನೊಂದಿಗೆ ಸಲುಗೆಯಿಂದ ಇರುವಂತೆ ಬೇಷರತ್​ ಹಾಕಿ ಆಕೆಗೆ ಸಾಲ ಕೊಟ್ಟಿದ್ದ. ಸದ್ಯ ಆ ಮಹಿಳೆ ಕ್ಯಾನ್ಸರ್​ಗೆ ತುತ್ತಾಗಿದ್ದು, ಉದ್ಯಮಿಯ ಸಾಲ ಹಿಂತಿರುಗಿಸಿದರೂ ಮತ್ತೆ ಸಂಬಂಧ ಮುಂದುವರಿಸುವಂತೆ ಆಕೆಗೆ ಬ್ಲ್ಯಾಕ್​ಮೇಲ್​ ಮಾಡಿ ಸಿಕ್ಕಿಬಿದ್ದಿದ್ದಾನೆ.
ಕೋರಮಂಗಲದ 40 ವರ್ಷದ ಮಹಿಳೆಗೆ 16 ವರ್ಷಗಳ ಹಿಂದೆ ಆಟೋ ಚಾಲಕನೊಂದಿಗೆ ವಿವಾಹವಾಗಿತ್ತು. ದಂಪತಿಗೆ ಜನಿಸಿದ ಮಗು ನ್ಯುಮೋನಿಯಾಗೆ ತುತ್ತಾಗಿ ಮೃತಪಟ್ಟಿತ್ತು. ವರ್ಷದ ಹಿಂದೆ ಪತಿ ಅನಾರೋಗ್ಯಕ್ಕೀಡಾಗಿದ್ದರು. ಚಿಕಿತ್ಸೆಗೆ 1 ಲಕ್ಷ ರೂ. ಬೇಕಿದ್ದರಿಂದ ಮನೆ ಸಮೀಪದಲ್ಲಿದ್ದ 50 ವರ್ಷದ ಉದ್ಯಮಿ ಬಳಿ ಸಾಲ ಕೇಳಿದ್ದಳು. ತನ್ನ ಜತೆ ಸಹಕರಿಸಿದರೆ ಹಣ ಕೊಡುವುದಾಗಿ ಆತ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದ.
ಇದನ್ನೂ ಓದಿರಿರಾತ್ರೋರಾತ್ರಿ ಅರಿಶಿನ ದೋಚಿದ್ದ ಖತರ್ನಾಕ್​ ಕಳ್ಳರಿಗೆ ಆಯ್ತು ತಕ್ಕಶಾಸ್ತಿ!
ಪತಿ ಗುಣಮುಖನಾದ ಬಳಿಕ ಸಾಲ ಹಿಂದಿರುಗಿಸಿದ್ದ ಮಹಿಳೆ, ಉದ್ಯಮಿ ಜತೆ ಸಲುಗೆ ಮುಂದುವರಿಸಲು ನಿರಾಕರಿಸಿದ್ದಳು. ಆದರೆ, ಉದ್ಯಮಿ ಆಕೆಯೊಂದಿಗಿದ್ದ ಖಾಸಗಿ ದೃಶ್ಯವನ್ನು ತೋರಿಸಿ, ತಾನು ಹೇಳಿದಂತೆ ಕೇಳದಿದ್ದರೆ ಜಾಲತಾಣದಲ್ಲಿ ಅಪ್​ಲೋಡ್ ಮಾಡುವುದಾಗಿ ಹೆದರಿಸಿದ್ದ.
ಇತ್ತೀಚೆಗೆ ಮಹಿಳೆ ನ್ಯಾಯಕ್ಕಾಗಿ ಪರಿಹಾರ’ ಕೌಟುಂಬಿಕ ಸಲಹಾ ಕೇಂದ್ರದ ಮೊರೆ ಹೋಗಿದ್ದಳು. ಉದ್ಯಮಿಯನ್ನು ಕಚೇರಿಗೆ ಕರೆಸಿದ ಆಪ್ತ ಸಮಾಲೋಚಕರು ವಿಚಾರಣೆ ನಡೆಸಿ, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿರಿಕಂಡವರ ಹೆಂಡ್ತಿ ಜತೆ ಅವಿವಾಹಿತನ ಲವ್ವಿ ಡವ್ವಿ… ಆಕೆಯ ಮನೆಯವರಿಗೆ ತಾನೇ ಫೋಟೋ ಕಳಿಸಿ ಗುಟ್ಟನ್ನು ರಟ್ಟು ಮಾಡಿದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
