ಬೆಂಗಳೂರು: ವಿದೇಶದಲ್ಲಿ ಮಹಿಳೆಗೆ ಪರಿಚಯವಾಗಿದ್ದ ಯುವಕ ಆಕೆಯ ಜತೆಗಿನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನಿಟ್ಟುಕೊಂಡು ಜಾಲತಾಣದಲ್ಲಿ ಅಪ್​ಲೋಡ್ ಮಾಡುವುದಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾನೆ. ಎನ್. ಆರ್. ಕಾಲನಿ ನಿವಾಸಿ ಸಂತ್ರಸ್ತ ಮಹಿಳೆ ತಂದೆ ಈ ಬಗ್ಗೆ ಹರ್ಯಾಣದ ಫರೀದಾಬಾದ್ ಮೂಲದ ನಿತೀಶ್ ಕುಮಾರ್ ಸಿಂಗ್ ಎಂಬಾತನ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ ಮಹಿಳೆ ಪತಿಯ ಜೊತೆ ಜರ್ಮನಿಯಲ್ಲಿ ನೆಲೆಸಿದ್ದಳು. ಇದೇ ವೇಳೆ ಹರ್ಯಾಣದ ನಿತೀಶ್​ಕುಮಾರ್ ಎಂಬಾತ ಪರಿಚಯವಾಗಿದ್ದ. ಇಬ್ಬರ ನಡುವೆ ಸ್ನೇಹವಿತ್ತು. ಹೋಟೆಲ್, ರೆಸ್ಟೋರೆಂಟ್​ಗಳಿಗೆ ಸುತ್ತಾಡಿದ್ದರು. ಈ ವೇಳೆ ಆತ ಮಹಿಳೆ ಜೊತೆ ಸಲುಗೆಯಿಂದ ಕಾಲಕಳೆದಿದ್ದ. ಆ ಸಂದರ್ಭಗಳ ಫೋಟೋ ಮತ್ತು ವಿಡಿಯೋಗಳನ್ನು ಮೊಬೈಲ್​ನಲ್ಲಿ ಚಿತ್ರಿಸಿಕೊಂಡಿದ್ದ. ಇದಾದ ಬಳಿಕ ಆತನಿಂದ ಮಹಿಳೆ ದೂರವಾಗಿದ್ದಳು. ಜೂನ್​ನಲ್ಲಿ ಜರ್ಮನಿಯಿಂದ ವಾಪಸ್ ಆಗಿ ಎನ್.ಆರ್. ಕಾಲನಿ ಯಲ್ಲಿರುವ ತಂದೆ ಮನೆಗೆ ಬಂದು ನೆಲೆಸಿದ್ದಳು.
ಇದನ್ನೂ ಓದಿ:ಕೆಪಿಸಿಸಿ ಅಕಾಡೆಮಿ: ಪಕ್ಷದ ಸಿದ್ಧಾಂತ ಇತಿಹಾಸ ದಾಖಲೀಕರಣದ ಹೊಸ ಪ್ರಯತ್ನ
ಜುಲೈ 18ರಂದು ಸಂತ್ರಸ್ತ ಮಹಿಳೆಯ ತಂದೆಗೆ ಕರೆ ಮಾಡಿದ್ದ ಆರೋಪಿ ನಿತೀಶ್, ಪುತ್ರಿಯ ಸ್ನೇಹಿತನೆಂದು ಹೇಳಿಕೊಂಡು ಅವಹೇಳನಕಾರಿಯಾಗಿ ಮಾತನಾಡಿದ್ದ. ಆಕೆ ತನ್ನೊಂದಿಗೆ ಸಂಬಂಧ ಮುಂದುವರಿಸದಿದ್ದಲ್ಲಿ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ. ಮರುದಿನವೂ ಫೋನ್ ಮಾಡಿದ್ದ ನಿತೀಶ್, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ವ್ಯಾಟ್ಸ್​ಆಪ್ ಗೆ ಕಳುಹಿಸಿದ್ದ. ಆತ ಹೇಳಿದಂತೆ ಕೇಳದಿದ್ದರೆ ಅವುಗಳನ್ನು ಜಾಲತಾಣದಲ್ಲಿ ವೈರಲ್ ಮಾಡಿ ಮಾನ ಕಳೆಯುವುದಾಗಿ ಬ್ಲ್ಯಾಕ್​ಮೇಲ್ ಮಾಡಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ಸಂತ್ರಸ್ತೆ ಮಹಿಳೆಯ ತಂದೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಮಭಕ್ತ ಹೂಡಿ ಮಂಜುನಾಥ್ 2,060 ಕಿ.ಮೀ. ಪಾದಯಾತ್ರೆ ಮಾಡಿದ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + one =
Remember me
