ಬೆಂಗಳೂರು:ಲಿವಿಂಗ್ ಟುಗೆದರ್​ನಲ್ಲಿದ್ದ ಪ್ರೇಯಸಿ ತನ್ನನ್ನು ತೊರೆದು ಮತ್ತೊಬ್ಬನ ಜತೆ ಮದುವೆಯಾದ ಕಾರಣಕ್ಕೆ ಕುಪಿತಗೊಂಡ ಪ್ರಿಯಕರ, ಖಾಸಗಿ ವಿಡಿಯೋಗಳನ್ನು ಪತಿಗೆ ಕಳುಹಿಸಿ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ.
ಕುಂದಲಹಳ್ಳಿಯ 27 ವರ್ಷದ ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಚಿಕ್ಕಮಗಳೂರು ಮೂಲದ ಪೃಥ್ವಿ ಎಂಬಾತನ ವಿರುದ್ಧ ವೈಟ್​ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಖಾಸಗಿ ಕಂಪನಿ ನೌಕರ ಪೃಥ್ವಿ, ಚಿಕ್ಕಮಗಳೂರಿನ ವಿಜಯಪುರದಲ್ಲಿ ನೆಲೆಸಿದ್ದಾನೆ. ಆರೋಪಿ ಹಾಗೂ ಸಂತ್ರಸ್ತೆ ಕೆಲ ವರ್ಷ ಲಿವಿಂಗ್ ಟುಗೆದರ್​ನಲ್ಲಿದ್ದು, ಆಕೆಯ ಜತೆಗೆ ಕಾಲ ಕಳೆದಿದ್ದ ಏಕಾಂತದ ಫೋಟೋ ಹಾಗೂ ವಿಡಿಯೋಗಳನ್ನು ಮೊಬೈಲ್​ನಲ್ಲಿ ಸೆರೆಹಿಡಿದುಕೊಂಡಿದ್ದ. ಕೆಲ ತಿಂಗಳ ಹಿಂದೆ ಜಗಳವಾಡಿಕೊಂಡು ಇಬ್ಬರು ಪ್ರತ್ಯೇಕವಾಗಿದ್ದರು.
ಇದನ್ನೂ ಓದಿ:ಇಂದಿನಿಂದ ವಾರದ ಲಾಕ್​ಡೌನ್
ಆಕೆಯ ಕೆಲ ನಗ್ನ ವಿಡಿಯೋ ಹಾಗೂ ಫೋಟೋಗಳನ್ನು ಬಳಸಿಕೊಂಡು ಮದುವೆ ನಿಲ್ಲಿಸಲು ಪೃಥ್ವಿ ಯತ್ನಿಸುತ್ತಿದ್ದ. ಈ ಸಂಬಂಧ ಸಂತ್ರಸ್ತೆ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು
ಆರೋಪಿಯ ಮೊಬೈಲ್​ನಲ್ಲಿದ್ದ ವಿಡಿಯೋ ಮತ್ತು ಫೋಟೋ ಡಿಲಿಟ್ ಮಾಡಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದಾದ ಬಳಿಕ ಸಂತ್ರಸ್ತೆ ವಿವಾಹವಾಗಿತ್ತು. ಇದರಿಂದ ಆರೋಪಿ ಕುಪಿತಗೊಂಡಿದ್ದ. ‘ನನ್ನ ಪತಿ ಹಾಗೂ ಮಾವನ ಮೊಬೈಲ್​ಗೆ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿದ್ದಾನೆ. ಈ ಮೂಲಕ ನನ್ನ ವೈವಾಹಿಕ ಜೀವನ ಹಾಳು ಮಾಡಲು ಯತ್ನಿಸುತ್ತಿದ್ದಾನೆ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿನಿಮಾ ನಟಿ ಮೇಲೆ ಅತ್ಯಾಚಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 16 =
Remember me
