ಬೆಂಗಳೂರು:ಜ್ಯೋತಿಷಿ ಆನಂದ್​ ಗುರೂಜಿ ಅವರಿಗೆ ಸಂಬಂಧಿಸಿದ ವಿಡಿಯೋ ಇಟ್ಟುಕೊಂಡು 50 ಲಕ್ಷ ಹಣಕ್ಕಾಗಿ ಮೂವರು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಬಗ್ಗೆ ಗಿರಿನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಬಿ.ಆರ್​.ನಾಗರಾಜ್​ ಕೊಟ್ಟ ದೂರಿನ ಮೇರೆಗೆ ಕೃಷ್ಣಮೂರ್ತಿ, ವೆಂಕಟೇಶ್ ಮತ್ತು ಜಿ.ಕೆ. ವೇಲು ಅಲಿಯಾಸ್​ ಮಾರ್ಕೆಟ್​ ವೇಲು ಎಂಬುವವರ ವಿರುದ್ಧ ಕೇಸ್​ ದಾಖಲಾಗಿದೆ.
ಆನಂದ್​ ಗುರೂಜಿ ಮತ್ತು ಎಸ್.​ಇ. ಸುದೀಂದ್ರ ಅವರ ಕುರಿತಾಗಿ ಕೆಟ್ಟದ್ದಾಗಿ ಚಿತ್ರಿಸಿದ ವಿಡಿಯೋ ತುಣಕನ್ನು ವೈರಲ್​ ಮಾಡುವುದಾಗಿ ಬೆದರಿಸಿದ ದುಷ್ಕಮಿಗಳು ಹಣಕ್ಕಾಗಿ ಸುಧೀಂದ್ರನನ್ನು ಪೀಡಿಸಿದ್ದಾರೆ. ಈ ಬಗ್ಗೆ ಸುದೀಂದ್ರರ ಆಪ್ತ ನಾಗರಾಜ್​ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?:ಹಾಯ್​ ಸೂರ್ಯ ಪತ್ರಿಕೆ ಪ್ರದಾನ ಸಂಪಾದನ ಜಿ.ಕೆ. ವೇಲು ಅಲಿಯಾಸ್​ ಮಾರ್ಕೆಟ್​ ವೇಲು ಮತ್ತು ಯುವ ಕರ್ನಾಟಕ ಸಂಘದ ಅಧ್ಯಕ್ಷ ಎ.ಸಿ.ವೆಂಕಟೇಶ್​ ಎಂಬುವವರು ಸುಧೀಂದ್ರ ಹಾಗೂ ಆನಂದ್​ಗುರೂಜಿ ಕುಟುಂಬದ ವೈಯಕ್ತಿಕ ವಿಷಯಗಳ ಕುರಿತಾಗಿ ಕೆಲವೊಂದು ಮಾಹಿತಿಗಳನ್ನು ಸಿದ್ಧಪಡಿಸಿದ್ದು, ಅದರ ಕುರಿತು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಹಾಗೂ ಎಲ್ಲ ಟಿವಿ ಚಾನೆಲ್​ಗಳಿಗೂ ಕೊಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಈ ಬಗ್ಗೆ ಸುದ್ದಿ ಮಾಡದಿರಲು 50 ಲಕ್ಷ ರೂ. ಕೊಡುವಂತೆ ಸುಧೀಂದ್ರಗೆ ಬೆದರಿಕೆ ಹಾದ್ದರು.ಇದನ್ನೂ ಓದಿರಿಪ್ರಿಯಕರನ ಕರೆ ಬಂತೆಂದು ಮನೆಯಿಂದ ಹೊರ ಹೋದ ಬಾಲಕಿ ಶವವಾಗಿ ಪತ್ತೆ! ಆ ರಾತ್ರಿಯ ರಹಸ್ಯ ಇಲ್ಲಿದೆ
ಈ ಬೆದರಿಕೆಯನ್ನ ಸುಧೀಂದ್ರ ನಿರ್ಲಕ್ಷಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಅವರು ಗುರೂಜಿ ಮತ್ತು ಸುಧೀಂದ್ರರ ಬಗ್ಗೆ ಇನ್ನಷ್ಟು ಕೆಟ್ಟದ್ದಾಗಿ ಚಿತ್ರಿಸಿ ಅದರ ವಿಡಿಯೋ ತುಣಕನ್ನು ಕೃಷ್ಣಮೂರ್ತಿ ಎಂಬಾತನ ಮೊಬೈಲ್​ ನಂಬರ್​ನಿಂದ ಸುಧೀಂದ್ರನ ಆಪ್ತ ನಾಗರಾಜ್​ ಮೊಬೈಲ್​ಗೆ ಕಳುಸಿದ್ದರು. ಅಲ್ಲದೆ ಈ ಬಗ್ಗೆ ಸುದ್ದಿ ಪ್ರಕಟಿಸುವುದಾಗಿ ಬ್ಲ್ಯಾಕ್​ಮೇಲ್​ ಮಾಡಿದ್ದರು.
2021ರ ಜ.12ರಿಂದ 21ರವರೆಗೆ ಸತತವಾಗಿ ಕರೆ ಮಾಡಿದ ದುಷ್ಕರ್ಮಿಗಳು, ಇದು ಕೊನೆಯ ಅವಕಾಶ. ಸುದ್ದಿ ಪ್ರಕಟ ಆಗಬಾರದು ಎಂದರೆ ಹಣ ಕೊಡಿಸಿ ಎಂದು ದುಂಬಾಲು ಬಿದ್ದಿದ್ದರು. ಕೊನೇ ಪಕ್ಷ 26 ಲಕ್ಷ ಹಣವಾದರೂ ಕೊಡಿಸಬೇಕು. ಇಲ್ಲವಾದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಜೀವ ಸಹಿತ ಉಳಿಸಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದರು. ಆ ಮೂವರು ಆರೋಪಿಗಳು ನಮಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಸುಳ್ಳು ಸುದ್ದಿ ಪ್ರಕಟಿಸಿ, ಮಾನ ಕಳೆಯುವುದಾಗಿ ಹಿಂಸಿಸಿದ್ದಾರೆ ಎಂದು ನಾಗರಾಜ್​ ದೂರಿನಲ್ಲಿ ವಿವರಿಸಿದ್ದಾರೆ.
ಈ ದೂರಿನ ಮೇರೆಗೆ ಆರೋಪಿಗಳಾದ ಕೃಷ್ಣಮೂರ್ತಿ, ವೆಂಕಟೇಶ್ ಎಂಬುವರನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಮಾರ್ಕೆಟ್​ ವೇಲುಗಾಗಿ ಬಲೆ ಬೀಸಲಾಗಿದೆ.
ಪ್ರಿಯಕರನ ಕರೆ ಬಂತೆಂದು ಮನೆಯಿಂದ ಹೊರ ಹೋದ ಬಾಲಕಿ ಶವವಾಗಿ ಪತ್ತೆ! ಆ ರಾತ್ರಿಯ ರಹಸ್ಯ ಇಲ್ಲಿದೆ

ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + six =
Remember me
