ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಇಂದು ಚಲಿಸುತ್ತಿದ್ದ ಬೈಕ್​ನಿಂದ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದ ಸದ್ದು ಕೇಳಿ ಬಂದಿದ್ದು, ರಸ್ತೆ ಅಕ್ಕಪಕ್ಕದಲ್ಲಿದ್ದ ಜನರಲ್ಲಿ ಹಲವರು ಒಮ್ಮೆ ಬೆಚ್ಚಿ ಬೀಳುವಂತಾಗಿದೆ. ಮಾತ್ರವಲ್ಲ, ಬೈಕ್​ ಸವಾರರು ಬೆದರಿ ಬೈಕ್​ನಿಂದ ಪಕ್ಕಕ್ಕೆ ನೆಗೆದಿದ್ದಾರೆ.
ಹುಬ್ಬಳ್ಳಿಯ ಮಹಾನಗರಪಾಲಿಕೆ ಎದುರುಗಡೆಯೇ ಇಂಥದ್ದೊಂದು ಘಟನೆ ಸಂಭವಿಸಿದೆ. ಬೈಕ್​ನಲ್ಲಿ ಇಬ್ಬರು ಯುವಕರು ಸಾಗುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಯುವಕರು ಬೈಕ್​ನಲ್ಲಿ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯುತ್ತಿದ್ದರು. ಆಗ ಸಿಲಿಂಡರ್ ಬ್ಲಾಸ್ಟ್​ ಆಗಿದ್ದು, ಪವಾಡದ ರೀತಿಯಲ್ಲಿ ಬೈಕ್​ ಸವಾರರು ಅಪಾಯದಿಂದ ಪಾರಾಗಿದ್ದಾರೆ. ಬೈಕ್​ ಕೆಳಕ್ಕೆ ಬಿದ್ದಿದ್ದು, ಬೆಚ್ಚಿಬಿದ್ದ ಜನರು ಕೂಡಲೇ ಸಾವರಿಸಿಕೊಂಡು ಬೈಕ್​ ಸವಾರರ ನೆರವಿಗೆ ಧಾವಿಸಿದರು. ಬೈಕ್ ಸವಾರರಿಗೆ ನೀರು ಕೊಟ್ಟು ಧೈರ್ಯ ತುಂಬಿದರು.

ಕೆಮಿಕಲ್ ಸೋರಿಕೆಯಿಂದಾಗಿ ಕಾರ್ಮಿಕರೊಬ್ಬರ ಸಾವು; ಮೂವರ ಪರಿಸ್ಥಿತಿ ಗಂಭೀರ…

ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ಮನೆಗಳಲ್ಲೇ ವಿದ್ಯುತ್ ದೀಪ ಬೆಳಗಲ್ಲ!; ಕಚೇರಿಗಳಲ್ಲೂ ನಾಳೆ ರಾತ್ರಿ ಒಂದು ಗಂಟೆ ಎಲೆಕ್ಟ್ರಿಕ್​ ಲೈಟ್​ ಆಫ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 11 =
Remember me
