ಬೆಂಗಳೂರು:ಕರೊನಾ ಲಾಕ್​ಡೌನ್​ ಎಫೆಕ್ಟ್​ ಹೇಗಿದೆ ಅಂದ್ರೆ ಮಕ್ಕಳ ಮದುವೆಗೆ ಸ್ವತಃ ತಂದೆ-ತಾಯಿ ಖುದ್ದು ಭಾಗವಹಿಸದಂತಾಗಿದೆ. ಇತ್ತೀಚೆಗೆ ಗುರುಗ್ರಾಮ್​ನಲ್ಲಿ ಬೆಂಗಳೂರು ಮೂಲದ ಪೈಲಟ್​ವೊಬ್ಬರ ವಿವಾಹ ನಡೆಯಿತು. ಅಲ್ಲಿಗೆ ಹೋಗಲು ಆಗದ ವರನ ಪಾಲಕರು ವಿಡಿಯೋ ಕಾಲ್​ನಲ್ಲೇ ಮಗ-ಸೊಸೆಗೆ ಆರತಿ ಮಾಡಿ ಬೆಂಗಳೂರಿನ ಮನೆ ತುಂಬಿಸಿಕೊಂಡಿದ್ದರು. ಇಂತಹದ್ದೇ ಮತ್ತೊಂದು ಮದುವೆಗೆ ರಾಜಧಾನಿ ಬುಧವಾರ ಸಾಕ್ಷಿಯಾಯಿತು.
ಇದನ್ನೂ ಓದಿಕರೊನಾ ಗೆದ್ದ 113 ವರ್ಷದ ಅಜ್ಜಿ ..!
ಶಿವಮೊಗ್ಗ ಜಿಲ್ಲೆ ಹೊಸೂರು ತಾಲೂಕಿನ ಕೋಡೂರು ಜಯಲಕ್ಷ್ಮೀ ಮತ್ತು ಲಕ್ಷ್ಮೀನಾರಾಯಣ ಜೋಯ್ಸ್​ ಅವರ ಪುತ್ರ ಕೆ.ಎಲ್​. ಶಿವಶ್ಚಂದ್ರ ಜೋಯ್ಸ್ ಜತೆ ಶೈಲಜಾ ಮತ್ತು ಚಂದ್ರಶೇಖರ್​ ಪುತ್ರಿ ಸಿ. ಕಾವ್ಯಾ ಮದುವೆ ನಿಶ್ಚಯವಾಗಿತ್ತು. ಮೇ 13 ರಂದು ಬೆಂಗಳೂರಿನ ಬಸವನಗುಡಿಯ ‘ಶ್ರೀ ಚಂದ್ರಶೇಖರಭಾರತೀ ಕಲ್ಯಾಣ’ ಮಂಟಪದಲ್ಲಿ ಇವರ ಮದುವೆ ನೆರವೇರಿಸಲು ಎರಡೂ ಕುಟುಂಬದ ಗುರುಹಿರಿಯರು ನಿರ್ಧರಿಸಿದ್ದರು. ಅದರಂತೆ ಲಗ್ನ ಪತ್ರಿಕೆಯೂ ಪ್ರಿಂಟ್​ ಆಗಿತ್ತು.
ಎಲ್ಲೆಡೆ ಲಾಕ್​ಡೌನ್​ ಛಾಯೆ ಆವರಿಸಿದ್ದರಿಂದ ಪೂರ್ವ ನಿಗದಿಯ ಮದುವೆ ಸ್ಥಳ ಬದಲಾಯಿತು. ನಿಗದಿತ ದಿನಾಂಕದಂದೇ ಬೆಂಗಳೂರಿನಲ್ಲಿ ವಧುವಿನ ಸೋದರ ಮಾವನ ಮನೆಯಲ್ಲಿ ಶಿವಶ್ಚಂದ್ರ ಮತ್ತು ಶೈಲಜಾ ಮದುವೆ ಸರಳವಾಗಿ ನೆರವೇರಿತು.
ಈ ಮದುವೆಗೆ ಖುದ್ದು ಹಾಜರಿರದ ವರನ ತಂದೆ-ತಾಯಿ ಶಿವಮೊಗ್ಗದಲ್ಲಿ ತಮ್ಮ ಮನೆಯಲ್ಲೇ ಕುಳಿತು ವಾಟ್ಸ್ಆ್ಯಪ್​ ವಿಡಿಯೋ ಕಾಲ್​ನಲ್ಲೇ ಮಗನ ಮದುವೆ ಸಂಭ್ರಮ ಕಣ್ತುಂಬಿಕೊಂಡರು. ವಿಡಿಯೋ ಕನೆಕ್ಟ್​ ಮಾಡಿದ್ದ ಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಯನ್ನು ಆಶೀರ್ವದಿಸಿದರು. ಈ ಮದುವೆಗೆ ಬೆಂಗಳೂರಿನಲ್ಲೇ ಇರುವ ವರನ ಅಕ್ಕ ಮತ್ತು ಭಾವ ಸಾಕ್ಷಿಯಾದರು. ಎರಡೂ ಕುಟುಂಬದ ಕಡೆಯಿಂದ ಒಟ್ಟಾರೆ 35 ಜನರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿನಿಖಿಲ್ ಮದುವೆಗೆ ನೀಡಿದ್ದ ವಾಹನ ಪಾಸ್​ಗಳೆಷ್ಟು?
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮದುವೆಯಲ್ಲಿ ವರನ ತಂದೆ-ತಾಯಿ ಸೇರಿ ಎರಡೂ ಕಡೆಯ ಸಂಬಂಧಿಕರು, ಸ್ನೇಹಿತರು ಪಾಲ್ಗೊಳ್ಳುತ್ತಿದ್ದರು. ಮೇ 15ರಂದು ವರನ ಸ್ವಗ್ರಾಮ ಹೊಸನಗರ ತಾಲೂಕು ಕೋಡೂರಿನ ಶ್ರೀ ಶಂಕರೇಶ್ವರ ದೇವಸ್ಥಾನ ಆವರಣದಲ್ಲಿ ಆರತಕ್ಷತೆ ಕೂಡ ನಡೆಯುತ್ತಿತ್ತು. ಇದೆಲ್ಲಕ್ಕೂ ಲಾಕ್​ಡೌನ್​ ಬ್ರೇಕ್​ ಹಾಕಿದೆ.
ಮಗನ ಮದುವೆಯಲ್ಲಿ ಖುದ್ದು ಪಾಲ್ಗೊಳ್ಳಲು ಆಗಲಿಲ್ಲ ಎಂದು ತುಂಬಾ ದುಃಖ ಆಯ್ತು. ಕರೊನಾ ಪರಿಸ್ಥಿತಿ ಅರಿತು ಸಮಾಧಾನ ಮಾಡಿಕೊಂಡಿದ್ದೇವೆ. ಮಗ-ಸೊಸೆಗೆ ನಾವಿದ್ದ ಜಾಗದಿಂದಲೇ ಆಶೀರ್ವದಿಸಿದ್ದೇವೆ. ಅವರ ದಾಂಪತ್ಯ ಸುಖಕರವಾಗಿರಲಿ. ದೇವರು ಆಯುಷ್, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ವರನ ತಂದೆ ಲಕ್ಷ್ಮೀನಾರಾಯಣ ಜೋಯ್ಸ್​ ಹೇಳಿದರು.
ಇದನ್ನೂ ಓದಿಗುರುಗ್ರಾಮ್​ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್​ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − 6 =
Remember me
