ಬೆಂಗಳೂರು:ಪ್ರತಿವರ್ಷ ಕ್ಯಾನ್ಸರ್​ನಿಂದ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಲ್ಯುಕೇಮಿಯಾ ಕೂಡ ಒಂದು. ಲ್ಯುಕೇಮಿಯಾ ಎಂದರೆ ನಿಮಗೆ ಥಟ್ಟನೆ ಅರ್ಥವಾಗುವುದಿಲ್ಲ. ಆದರೆ, ಕನ್ನಡದಲ್ಲಿ ರಕ್ತದ ಕ್ಯಾನ್ಸರ್ ಎಂದು ಹೇಳಿದರೆ ಬಹುಬೇಗನೆ ತಿಳಿಯುತ್ತದೆ.
ಲ್ಯುಕೇಮಿಯಾ ರೋಗ ಗುಣ ಪಡಿಸಲಿರುವ ಪರಿಣಾಮ ಕಾರಿ ಮಾರ್ಗವೆಂದರೆ ಕಾಂಡಕೋಶ ವರ್ಗಾವಣೆ (ಸ್ಟೆಮ್ ಸೆಲ್ ಟ್ರಾನ್ಸ್​ಫ್ಯೂಷನ್). ಇದರಿಂದ ರೋಗಿಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಯುಎಸ್​ನಲ್ಲಿ ಇರುವ ಕರ್ನಾಟಕ ಮೂಲದ ವೈದ್ಯೆ ಯೊಬ್ಬರೀಗ ಲ್ಯುಕೇಮಿಯಾ ದಿಂದ ಬಳಲುತ್ತಿದ್ದು, ರಕ್ತ ಕಾಂಡಕೋಶ (ಬ್ಲಡ್ ಸ್ಟೆಮ್​ ಸೆಲ್​) ದಾನದ ಅಗತ್ಯವಿದೆ.
ಮಂಡ್ಯ ಮೂಲದ 45 ವರ್ಷದ ಡಾ. ಶೋಭಾ ಲ್ಯುಕೇಮಿಯಾದಿಂದ ಬಳಲುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಇವರು, ಲ್ಯುಕೇಮಿಯಾ ರೋಗದ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಜೀವ ಉಳಿಯಲು ತಕ್ಷಣವೇ ರಕ್ತದ ಕಾಂಡಕೋಶ ಕಸಿಯ ಅಗತ್ಯವಿದೆ. ಹೀಗಾಗಿ ಕಾಂಡಕೋಶ ದಾನ ಮಾಡಲು ಅವರು ಮನವಿ ಮಾಡಿದ್ದಾರೆ.
ಜನಸಂಖ್ಯಾಶಾಸ್ತ್ರೀಯವಾಗಿ ಹಾಗೂ ಜನಾಂಗೀಯವಾಗಿ ಒಂದೇ ರೀತಿಯ ದಾನಿಗಳ ಕಾಂಡಕೋಶ ವರ್ಗಾವಣೆಯಿಂದ ಲ್ಯುಕೇ ಮಿಯಾ ರೋಗ ಗುಣಪಡಿಸಲು ಪರಿಣಾಮಕಾರಿ. ಹೀಗಾಗಿಯೇ ಭಾರತೀಯ ಸಮುದಾಯ, ಅದರಲ್ಲೂ ಕರ್ನಾಟಕದಿಂದ ಕಾಂಡಕೋಶ ದಾನ ಮಾಡಲು ನೋಂದಣಿ ಮಾಡಿಕೊಳ್ಳುವಂತೆ ಶೋಭ ವಿನಂತಿಸಿದ್ದಾರೆ.
18ರಿಂದ 55 ವರ್ಷದೊಳಗಿ ನವರು ಕಾಂಡಕೋಶಗಳನ್ನು ದಾನ ಮಾಡಬಹುದಾಗಿದ್ದು, ಹೊಂದಾಣಿಕೆ ಕಂಡುಬಂದರೆ ದಾನ ಪ್ರಕ್ರಿಯೆಯಲ್ಲಿ ಪ್ಲಾಸ್ಮಾ ಅಥವಾ ಪ್ಲೇಟ್​ಲೆಟ್​ಗಳನ್ನು ದಾನಿಗಳಿಂದ ಪಡೆಯಲಾಗುವುದು. ಇವರು ದಾನ ಮಾಡಿದ 1-2 ದಿನಗಳಲ್ಲಿ ಸಾಮಾನ್ಯ ದಿನಚರಿಗೆ ಮರಳಬಹುದಾಗಿದೆ. ನೋಂದಣಿಗೆ ಕ್ಯೂಆರ್ ಕೋಡ್ ಬಳಸಬಹುದಾಗಿದೆ.
ದೊಡ್ಡ ಮನಸ್ಸಿನ ಪುಟ್ಟ ಬಾಲಕಿ: 6 ತಿಂಗಳಲ್ಲಿ 3 ಲಕ್ಷ ರೂ. ದಾನ, ಈಕೆಯ ಕತೆ ಕೇಳಿದ್ರೆ ಹೆಮ್ಮೆ ಅನ್ಸುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
