ಹೇಮನಾಥ ಪಡುಬಿದ್ರಿರಾಜ್ಯ ಸರ್ಕಾರದಿಂದ ಕಲ್ಪಿಸಬೇಕಾಗಿರುವ ಅಗತ್ಯ ಯೋಜನೆಗಳು ಕಾರ್ಯಗತವಾಗದೆ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‌ಗೆ ಸಾರ್ವಜನಿಕರ ಪ್ರವೇಶ ವಿಳಂಬವಾಗುವ ಸಾಧ್ಯತೆಯಿದೆ.
ಪಡುಬಿದ್ರಿ ಎಂಡ್ ಪಾಯಿಂಟ್ ಬಳಿ ಕೇಂದ್ರ ಸರ್ಕಾರದ ಎಂಟು ಕೋಟಿ ರೂಪಾಯಿ ಅನುದಾನದಲ್ಲಿ ಅನುಷ್ಠಾನವಾಗಿರುವ ಬೀಚ್ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಬ್ಲೂಫ್ಲ್ಯಾಗ್ ಬೀಚ್ ಮಾನ್ಯತೆ ಕೂಡ ಸಿಕ್ಕಿದೆ. ಈಗ ಅಂತಿಮ ಹಂತದ ಬಿದಿರು ಗುಡಿಸಲು ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಬೀಚ್ ಸಂಪರ್ಕಿಸುವ ರಸ್ತೆ, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಗೊಳ್ಳದ ಪರಿಣಾಮ ಪ್ರವಾಸಿಗರ ಪ್ರವೇಶಕ್ಕೆ ತೊಡಕಾಗುತ್ತಿದೆ.
ಅಕ್ಟೋಬರ್‌ನಲ್ಲಿ ಬ್ಲೂಫ್ಲ್ಯಾಗ್ ಮಾನ್ಯತೆ ಪಡೆದ ಬಳಿಕ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಸಂಪರ್ಕ ರಸ್ತೆಗಳಲ್ಲಿ ವಾಹನ ದಟ್ಟಣೆ ಕಾಣಿಸಿಕೊಂಡಿದೆ. ಬಿದಿರ ಗುಡಿಸಲುಗಳ ನಿರ್ಮಾಣ ಆರಂಭಿಸಿರುವ ಕಾರಣ ನ.3ರಿಂದ ಬೀಚ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದ್ದು, ಒಂದು ವಾರದಲ್ಲಿ ಅ ಕಾಮಗಾರಿ ಪೂರ್ಣಗೊಳ್ಳಲಿದೆ. ಪಡುಬಿದ್ರಿ ಹೆದ್ದಾರಿಯಿಂದ ಬೀಚ್ ಸಂಪರ್ಕಿಸುವ ಪ್ರಮುಖ ರಸ್ತೆ ಹಾಗೂ ಸೇತುವೆ ಸಹಿತ ಇತರ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಕೆಯಾಗದೆ ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಮುಕ್ತವಾದರೂ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ವಿದ್ಯುತ್ ಕಂಬದಿಂದ ಸಂಚಾರ ತೊಂದರೆ:ಯೋಜನಾ ಪ್ರದೇಶದವರೆಗೆ ಹೊಸದಾಗಿ ವಿದ್ಯುತ್ ಸಂಪರ್ಕ ಮಾಡಲಾಗಿದ್ದರೂ, ಬಂದರು ಮತ್ತು ಮೀನುಗಾರಿಕಾ ಇಲಾಖೆ ಮೂಲಕ ಒಂದು ಕೋಟಿ ರೂ. ವೆಚ್ಚದಲ್ಲಿ ಪಡುಬಿದ್ರಿ ಬೀಚ್ ಎಂಡ್ ಪಾಯಿಂಟ್‌ನಿಂದ ನಡಿಪಟ್ಣದವರೆಗೆ ವಿಸ್ತಾರಗೊಳಿಸಿ ಕಾಂಕ್ರೀಟ್ ಅಳವಡಿಸಲಾಗಿದೆ. ಆದರೆ ರಸ್ತೆ ನಿರ್ಮಾಣದ ವೇಳೆ ಮಧ್ಯದಲ್ಲಿರುವ ವಿದ್ಯುತ್ ಕಂಬ ಸ್ಥಳಾಂತರಿಸದೆ ಕಾಂಕ್ರೀಟ್ ಮಾಡಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬೀಚ್ ಆವರಣದಲ್ಲಿ 45 ವಾಹನಗಳಿಗಷ್ಟೇ ನಿಲುಗಡೆ ವ್ಯವಸ್ಥೆಯಿದ್ದು, ಪ್ರವೇಶ ದ್ವಾರದಲ್ಲಿ ಕಲ್ಪಿಸಬೇಕಾದ ಪಾರ್ಕಿಂಗ್ ಕಾಮಗಾರಿ ಇನ್ನೂ ಆರಂಭವಾಗಿಲ್ಲ.
ಟ್ಯಾಂಕರ್ ನೀರೇ ಗತಿ:ಬೀಚ್ ಒಳಗಡೆ ನೀರಿನ ವ್ಯವಸ್ಥೆ ಇನ್ನೂ ಅನುಷ್ಠಾನವಾಗಿಲ್ಲ. ಪರಿಣಾಮ ದಿನಬಳಕೆ ಬೀಚ್ ಹಸಿರೀಕರಣಕ್ಕೆ ಟ್ಯಾಂಕರ್ ನೀರಿಗೆ ಹಣ ವ್ಯಯಿಸಬೇಕಾಗಿದೆ. ದಿನಂಪ್ರತಿ 3 ಟ್ಯಾಂಕರ್ ನೀರು ಬಳಕೆಯಾಗುತ್ತಿದ್ದು, ಉಪಯೋಗಿಸಿದ ತ್ಯಾಜ್ಯ ನೀರು ಸಂಸ್ಕರಿಸಿ ಗಿಡಗಳಿಗೆ ಬಳಕೆ ಮಾಡಲಾಗುತ್ತಿದೆ. ಬೇಸಿಗೆ ಹಾಗೂ ಪ್ರವಾಸಿಗರು ಹೆಚ್ಚಾದಲ್ಲಿ ಮತ್ತೆ ನೀರಿಗೆ ತೊಂದರೆ ಉಂಟಾಗಲಿದೆ. ನೀರು ಪೂರೈಕೆಗಾಗಿ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಬೀಡು ಬಳಿಯಲ್ಲಿ ಕೆಐಆರ್‌ಡಿಎಲ್ ಮೂಲಕ ಕೊಳವೆಬಾವಿ ನಿರ್ಮಾಣ ಯೋಜನೆ ಹಾಕಿಕೊಂಡಿದ್ದರೂ, ಸ್ಥಳೀಯರ ವಿರೋಧದಿಂದ ಅದು ಇನ್ನೂ ಕಾರ್ಯಗತವಾಗಿಲ್ಲ.
ಬಿದಿರಿನ ಗುಡಿಸಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ವಾರದೊಳಗೆ ಪೂರ್ಣಗೊಳ್ಳಲಿದೆ. ಇಲ್ಲಿನ ಕಾಮಗಾರಿ ಅಂತಿಮಗೊಳಿಸಿ ವರದಿ ನೀಡಿದ ಬಳಿಕ ಉದ್ಘಾಟನೆ ನಡೆಯಲಿದೆ. ಪ್ರಮುಖ ಸಂಪರ್ಕ ರಸ್ತೆ, ಪಾರ್ಕಿಂಗ್ ಹಾಗೂ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು.-ವಿಜಯ ಶೆಟ್ಟಿ,  ಬ್ಲೂಫ್ಲ್ಯಾಗ್ ಬೀಚ್ ಪ್ರಬಂಧಕ
ಬ್ಲೂಫ್ಲಾೃಗ್ ಬೀಚ್ ಸಂಪರ್ಕಿಸುವ ರಸ್ತೆಗಳು ಯಾವ ಇಲಾಖೆಗಳಿಗೆ ಸೇರಿವೆ ಎಂಬುದನ್ನು ತಿಳಿದುಕೊಂಡು ಅವರಲ್ಲಿ ಮಾತುಕತೆ ನಡೆಸಿ ರಸ್ತೆ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ನೀರು ಪೂರೈಸುವ ಯೋಜನೆ ಅನುಷ್ಠಾನ ಕುರಿತಂತೆ ಸೂಕ್ತ ನೀರಿರುವ ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.-ಸೋಮಶೇಖರ್, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:12 − 11 =
Remember me
