ಬೆಂಗಳೂರು:ಕೊಟ್ಟಿಗೆಪಾಳ್ಯ ಜಂಕ್ಷನ್​ ಬಳಿ ಬಿಎಂಟಿಸಿ ಬಸ್​ ಬ್ರೇಕ್​ ಫೇಲ್​ ಆಗಿ ಇಬ್ಬರು ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಪೋ ಮ್ಯಾನೇಜರ್​ ಶಿವಲಿಂಗಯ್ಯ ಹಾಗೂ ಅಸಿಸ್ಟೆಂಟ್​ ವರ್ಕ್​ ಸೂಪರಿಂಟೆಂಡೆಂಟ್ ರನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಟಿಸಿ ಪಶ್ಚಿಮ ವಿಭಾಗ ನಿಯಂತ್ರಣಾಧಿಕಾರಿ ಶ್ರೀನಾಥ್​ ತಿಳಿಸಿದ್ದಾರೆ.
ಮಾಗಡಿ ರಸ್ತೆ ಸೀಗೇಹಳ್ಳಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್​ ಇಂದು ಬೆಳಗ್ಗೆ ಬ್ರೇಕ್​ ಫೇಲ್​ ಆಗಿ ಅಪಘಾತಕ್ಕೀಡಾಗಿತ್ತು. ಇದರಿಂದ ಇಬ್ಬರು ಮೃತಪಟ್ಟಿದ್ದರು. ಈ ಬಸ್​ಗೆ ಬ್ರೇಕ್​ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಒಂದು ವಾರದಿಂದಲೂ ಚಾಲಕ ಡಿಪೋದಲ್ಲಿ ಹೇಳುತ್ತಲೇ ಇದ್ದರೂ ಅಲ್ಲಿನ ಅಧಿಕಾರಿಗಳು ಲಕ್ಷ್ಯ ವಹಿಸಿರಲಿಲ್ಲ ಎಂದು ಹೇಳಲಾಗಿತ್ತು.
ಗಾಯಗೊಂಡು ಆಸ್ಪತ್ರೆಗೆ ದಾಖಲಾದವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಶ್ರೀನಾಥ್​ ಅವರು, ಮೃತರ ಕುಟುಂಬಕ್ಕೆ ಸದ್ಯ ತಲಾ 25 ಸಾವಿರ ರೂಪಾಯಿ ಘೋಷಣೆ ಮಾಡಿದ್ದು ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ.
ಬಿಎಂಟಿಸಿ ಎಂಡಿ ಸೂಚನೆ ಮೇರೆಗೆ ಇಬ್ಬರನ್ನು ಅಮಾನತು ಮಾಡಲಾಗಿದೆ. ಬಸ್​ ಚಾಲಕರು ಪ್ರತಿದಿನ ತಾವು ಓಡಿಸುವ ಬಸ್​ನಲ್ಲಿರುವ ಸಮಸ್ಯೆಗಳ ಬಗ್ಗೆ ಡಿಪೋದಲ್ಲಿ ಮಾಹಿತಿ ನೀಡುತ್ತಾರೆ. ಅದನ್ನು ಡಿಪೋ ಮ್ಯಾನೇಜರ್​ಗಳು ನೋಡಬೇಕು. ಇವತ್ತಿನ ಅಪಘಾತದ ಬಗ್ಗೆ ಆಂತರಿಕ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಒಂದು ಬಿಎಂಟಿಸಿ ಬಸ್​ನ್ನು ಎಂಟು ಲಕ್ಷ ಕಿ.ಮೀ.ವರೆಗೆ ಸಂಚಾರ ಮಾಡಿಸುತ್ತೇವೆ. ಇವತ್ತು ಅಪಘಾತವಾದ ಬಸ್​ 5 ಲಕ್ಷ ಕಿ.ಮೀ ಸಂಚರಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + sixteen =
Remember me
