ಬೆಂಗಳೂರು:ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಜೀವನಾಡಿ ಎಂದೇ ಹೆಸರುವಾಸಿಯಾಗಿರುವ ಬಿಎಂಟಿಸಿ ಬಸ್​ಗಳು ಬೆಂಕಿಗಾಹುತಿಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಇದೀಗ ಎಲೆಕ್ಟ್ರಿಕ್​ ಬಸ್ಸೊಂದು ಜೋರು ಮಳೆಯ ನಡುವೆಯೂ ಧಗಧಗನೆ ಹೊತ್ತಿ ಉರಿದಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯು ಬೆಂಗಳೂರು ನಗರದ ನಾಗವಾರ- ಹೆಬ್ಬಾಳ ಸರ್ವೀಸ್​ ರಸ್ತೆಯಲ್ಲಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನ ಸಮಯ ಪ್ರಜ್ಞೆಗೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ನಿನ್ನೆ (ಆಗಸ್ಟ್​ 05) ಸುರಿದ ಭಾರೀ ಮಳೆಗೆ ಮಾನ್ಯತಾ ಟೆಕ್​ ಪಾರ್ಕ್​ ಬಳಿ ಇರುವ  ಸರ್ವಿಸ್​ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಇದೇ ಮಾರ್ಗದಲ್ಲಿ ಬಂದ ಎಲೆಕ್ಟ್ರಿಕ್​ ಬಸ್​ನಲ್ಲಿ ಹೊಗೆ ಕಾಣಲು ಆರಂಭಿಸಿದೆ. ಇದನ್ನು ಗಮನಿಸಿದ ಚಾಲಕ ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿ ದೂರಕ್ಕೆ ಕಳುಹಿಸಿದ್ದಾನೆ.ಬಸ್​ ಕ್ಷಣಾರ್ಧದಲ್ಲೇ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳುವ ವೇಳೆಗಾಗಲೇ ಬಸ್​ ಸುಟ್ಟು ಬೂದಿಯಾಗಿತ್ತು. ಬಸ್​ನಲ್ಲಿ ಉಂಟಾದ ಶಾರ್ಟ್​​​​ ಸರ್ಕ್ಯೂಟ್​​ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
The burning BMTC electric bus in BENGALURU city right in front of Bangalore Water Supply & Sewage Board (BWSSB) office at HebbalaVC:@kaushikmrinal#BengaluruRains#BangaloreRainshttps://t.co/cqkVJ0Reqhpic.twitter.com/BghqZykAqx
Video 1: Smoke coming out of BMTC electric bus after it was stuck in waterlogged road in Nagawara – Hebbal Service Road.Video 2: Vehicles stuck creating a long traffic jam.Irony – This happened in front of BWSSB water treatment plant.#BrandBengaluru#BengaluruRainspic.twitter.com/Gk3d4P3EMB
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
