ಬೆಂಗಳೂರು:ಬಿಎಂಟಿಸಿ ಬಸ್ ದರ ಹೆಚ್ಚಾಗುವ ಕಾಲ ಸನಿಹದಲ್ಲಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುವ ಜನತೆಗೆ ಬಸ್​ ಟಿಕೆಟ್​ ದರದ ಬಿಸಿ ಮತ್ತಷ್ಟು ಹೆಚ್ಚಲಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಶೇ.18 ಬಿಎಂಟಿಸಿ‌ ಬಸ್ ದರ ಏರಿಕೆಗೆ ಪ್ರಸ್ತಾಪ ಬಂದಿದ್ದು, ಸಿಎಂ ಗಮನಕ್ಕೆ ತರಲಾಗುವುದು. ಸಿಎಂ ಒಪ್ಪಿಗೆ ನೀಡಿದರೆ ಬಿಎಂಟಿಸಿ ಬಸ್ ಟಿಕೆಟ್​ ದರವನ್ನ ಇದೇ ಅಧಿವೇಶನದಲ್ಲಿ ಹೆಚ್ಚಿಸಲಾಗುವುದು. ಇನ್ನೆರಡು ತಿಂಗಳಲ್ಲಿ ಕೋವಿಡ್ ಪೂರ್ವದ ಸ್ಥಿತಿಗೆ ತಲುಪಲಿದೆ. ಡಿಸೇಲ್ ದರ ಏರಿಕೆಯಾಗಿದೆ. ಪ್ರಯಾಣಿಕರ ಟಿಕೆಟ್ ದರ ಹೆಚ್ಚಿಸಬೇಕೆಂದು ನಾಲ್ಕು ನಿಗಮಗಳ ಬೇಡಿಕೆಯಿದೆ. ಈ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಸಿಟಿ ಟ್ಯಾಕ್ಸಿಗಳಿಗೆ ಶೇ.15 ದರ ಹೆಚ್ಚಿಸಿಲು ಒಪ್ಪಿಗೆ ಕೊಡಲಾಗಿದೆ. ಈಗ ಓಲಾ ಮತ್ತು ಊಬರ್​ನವರೂ ಕೇಳುತ್ತಿದ್ದಾರೆ ಎಂದು ವಿವರಿಸಿದರು.ಇದನ್ನೂ ಓದಿರಿಕೂಲಿ ಕೆಲಸ ಮುಗಿಸಿಕೊಂಡು ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೊರಟವರ ಪ್ರಾಣ ಹೊತ್ತೊಯ್ದ ಜವರಾಯ!
ಕರೊನಾ ಪರಿಣಾಮ ಸಾರಿಗೆ ಇಲಾಖೆಗೆ 2780 ಕೋಟಿ ರೂ. ನಷ್ಟ ಅನುಭವಿಸಿದೆ. ಆದಾಯದಲ್ಲಿ 4 ಸಾವಿರ ಕೋಟಿ ರೂ. ಕೊರತೆಯಾಗಿದೆ. ಬಿಎಂಟಿಸಿಯಲ್ಲಿ ಆದಾಯದ ಕೊರತೆಯಿದ್ದರೂ ನೌಕರರಿಗೆ ಪೂರ್ಣವಾಗಿ ಸಂಬಳ ಕೊಡಲಾಗಿದೆ. ಕೇವಲ ಲಾಭವನ್ನು ಗಮನದಲ್ಲಿ ಇಟ್ಟುಕೊಳ್ಳದೆ ಸಾರಿಗೆ ಇಲಾಖೆಯ ನೌಕರರ ಹಿತ ಕಾಪಾಡುತ್ತಿದ್ದೇವೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಇನ್ನು ಕರ್ನಾಟಕ ‌ಸಾರಿಗೆ ನಿಗಮ ಹೊಸ ಆಯಾಮ ಶುರು ಮಾಡಲಿದೆ. ಸಾರಿಗೆ ಇಲಾಖೆ ಮುಖಾಂತರ ಕಾರ್ಗೋ ಮತ್ತು ಪಾರ್ಸೆಲ್​ಗಳನ್ನು ಆರಂಭಿಸಲಾಗುವುದು. ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳಿಂದ ಈ ಸೇವೆ ಆರಂಭ ಆಗಲಿದೆ. ಕಾರ್ಗೋ ಸೇವೆಯಿಂದ ಪ್ರತಿ ವರ್ಷ 80 ಕೊಟಿ ರೂ. ಲಾಭ ಬರುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ 109 ಬಸ್ ನಿಲ್ದಾಣಗಳಲ್ಲಿ ಜಾರಿ ಮಾಡಲಾಗುತ್ತದೆ ಎಂದು ವಿವರಿಸಿದರು.
ಸಾರಿಗೆ ಇಲಾಖೆ‌ ನೌಕರರ 9 ಬೇಡಿಕೆ ಈಡೇರಿಸಲು ಬದ್ಧ. 9ರ ಪೈಕಿ ಈಗಾಗಲೇ 6ನ್ನು ಈಡೇರಿಸಲಾಗಿದೆ. ಉಳಿದ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕೋಡಿಹಳ್ಳಿ ಚಂದ್ರಶೇಖರ್​ಗೂ ನಮಗೂ ಯಾವುದೇ ಸಂಬಂಧವಿಲ್ಲ. ಸಾರಿಗೆ ನೌಕರರು ತಮ್ಮ ಸಮಸ್ಯೆಗಳ ಬಗ್ಗೆ ನನ್ನ ಹತ್ತಿರ ಬಂದು ಚರ್ಚೆ ಮಾಡಲಿ. ಸಾರಿಗೆ ನೌಕರರು ನಮ್ಮ ಕುಟುಂಬದವರು. ರೈತ ಸಂಘಟನೆ ಹಾಗೂ ಇತರ ಸಂಘಟನೆಗಳಿಗೆ ಇದರಲ್ಲಿ ಸಂಬಂಧವಿಲ್ಲ ಎಂದರು.
ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!

ಅಂದು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು, ಆಗ ಸಹಾಯಕ್ಕೆ ನಾನೇ ಬಂದೆ… ಇದನ್ನ ದರ್ಶನ್​ ನೆನೆಯಲಿ

ಖಾಸಗಿ ಶಾಲೆ ಮಾಲೀಕ ಆತ್ಮಹತ್ಯೆ! ಸಾವಿಗೂ ಮುನ್ನ ಬರೆದ ಡೆತ್​ನೋಟ್​ನಲ್ಲಿದೆ ನೋವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − eight =
Remember me
