ಬೆಂಗಳೂರು: ಬಿಎಂಟಿಸಿ ಚಾಲಕರೊಬ್ಬರಲ್ಲಿ ಕೋವಿಡ್-19 ಕಾಣಿಸಿಕೊಂಡ ಬೆನ್ನಲ್ಲೇ ಮತ್ತಿಬ್ಬರಿಗೆ ಸೋಂಕು ತಗುಲಿದೆ. ಕೆಎಸ್​ಆರ್​ಟಿಸಿ ಸಿಬ್ಬಂದಿ ನಂತರ ಇದೀಗ ಬಿಎಂಟಿಸಿ ಸಿಬ್ಬಂದಿಯಲ್ಲೂ ಕರೊನಾ ಸೋಂಕು ಹೆಚ್ಚುವಂತಾಗಿದೆ. 15 ದಿನಗಳ ಹಿಂದೆ ಕೆಎಸ್​ಆರ್​ಟಿಸಿಯ ಮಾಗಡಿ ಡಿಪೋ ನೌಕರನಿಗೆ ಸೋಂಕು ತಗುಲಿತ್ತು ಎಂಬುದು ಬಹಿರಂಗವಾಗಿದೆ.
ಪತ್ನಿಗೂ ಸೋಂಕು
ಶುಕ್ರವಾರ ಸೋಂಕು ದೃಢ ಪಟ್ಟ ಚಾಲಕನ ಪತ್ನಿಗೂ ಕೋವಿಡ್ ತಗುಲಿದೆ. ಚಾಲಕನ ಮನೆಯಲ್ಲಿದ್ದವರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಸೋಂಕಿತನ ಪತ್ನಿಯ ವರದಿ ಪಾಸಿಟಿವ್ ಬಂದಿದೆ.
ಅದರೀಗ ಕಳೆದ ಶುಕ್ರವಾರ ಬಿಎಂಟಿಸಿಯ ದೂರವಾಣಿ ನಗರ ಡಿಪೋದಿಂದ ಸಂಚರಿಸುತ್ತಿದ್ದ ಬಸ್ ಚಾಲಕರಿಗೆ ಸೋಂಕಿರುವುದು ಪತ್ತೆಯಾಗಿದೆ. ಅವರ ಜತೆಗೆ ಅದೇ ಡಿಪೋದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಮತ್ತೊಬ್ಬ ಚಾಲಕನಿಗೂ ಸೋಂಕು ದೃಢಪಟ್ಟಿದೆ. ಜತೆಗೆ, ಇಂದಿರಾನಗರ ಡಿಪೋ ಸಂಚಾರ ನಿಯಂತ್ರಕರಿಗೂ ಸೋಂಕು ಇರುವುದು ಖಚಿತವಾಗಿದೆ. ಇನ್ನಷ್ಟು ಸಿಬ್ಬಂದಿಗೂ ಕರೊನಾ ವೈರಾಣು ತಗುಲಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪರೀಕ್ಷೆಗೊಳಪಡಿಸಲಾಗಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ 30 ಸಾವಿರಕ್ಕೂ ಹೆಚ್ಚಿನ ನೌಕರರ ಜತೆಗೆ ಪ್ರಯಾಣಿಕರಲ್ಲೂ ಆತಂಕ ಉಂಟಾಗಿದೆ.
ಜತೆಯಲ್ಲಿ ಕೆಲಸ ಮಾಡಿದ್ದಕ್ಕೆ ಕರೊನಾ:ದೂರವಾಣಿನಗರ ಬಸ್ ಡಿಪೋದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕರೊನಾ ಸೋಂಕು ತಗುಲಲು ಶುಕ್ರವಾರ ಸೋಂಕಿತರಾದ ಚಾಲಕ ಕಾರಣ ಎನ್ನಲಾಗಿದೆ. ಈ ಹಿಂದೆ ಸೋಂಕು ದೃಢಪಟ್ಟ ಚಾಲಕನ ಜತೆಗೆ ಅದೇ ಬಸ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರೂ ಚಾಲಕ ಕಂ ನಿರ್ವಾಹಕರಾಗಿದ್ದ ಕಾರಣ ಬಸ್ ಚಾಲನೆ ಮತ್ತು ನಿರ್ವಹಣೆಯನ್ನು ಹಂಚಿಕೊಂಡು ಮಾಡಿದ್ದರು.
ಇದನ್ನೂ ಓದಿ:ವಿಶ್ವಗುರು: ಚೀನಾದೊಂದಿಗೆ ಯುದ್ಧವಾದ್ರೆ ಯಾರ್ ಗೆಲ್ತಾರೆ?!
ನಿತ್ಯವೂ 10 ಲಕ್ಷ ಪ್ರಯಾಣಿಕರು!
ಲಾಕ್​ಡೌನ್ ಸಡಿಲಿಕೆ ನಂತರ ಮೇ 19 ರಿಂದ ಬಿಎಂಟಿಸಿ ಬಸ್ ಸೇವೆ ಆರಂಭಿಸ ಲಾಗಿದೆ. ಮೊದಲಿಗೆ 60 ಸಾವಿರ ಜನರು ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಈಗ ನಿತ್ಯ 10 ಲಕ್ಷ ಜನರು ಬಿಎಂಟಿಸಿ ಬಸ್ ಬಳಸುತ್ತಿದ್ದಾರೆ. ಇದೀಗ ಜನರು ಕರೊನಾ ಭೀತಿ ನಡುವೆಯೇ ಬಸ್ ಸಂಚಾರ ಮಾಡಬೇಕಿದೆ.
ಪ್ರಯಾಣಿಕರ ಪತ್ತೆಯೇ ಸವಾಲು:ಸೋಂಕು ಪತ್ತೆಯಾಗಿರುವ ಚಾಲಕ ಕಂ ನಿರ್ವಾಹಕರು ಸಿಲ್ಕ್​ಬೋರ್ಡ್ ನಿಂದ ಯಶವಂತಪುರ ಟಿಟಿಎಂಸಿವರೆಗೆ ಸಂಚರಿಸುವ 500ಬಿ ಸಂಖ್ಯೆಯ ಬಸ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಬಸ್​ನಲ್ಲಿ ನಿತ್ಯ 500ಕ್ಕೂ ಹೆಚ್ಚಿನ ಜನರು ಪ್ರಯಾಣಿಸಿದ್ದಾರೆ. ಚಾಲಕರಿಬ್ಬರಿಗೆ ಸೋಂಕು ಯಾವಾಗ ತಗುಲಿತು ಎಂಬುದು ತಿಳಿದಿಲ್ಲ. ಹೀಗಾಗಿ ಬಸ್​ನಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಪತ್ತೆ ಸವಾಲಾಗಿದೆ. ಒಂದು ವೇಳೆ ಸೋಂಕಿನ ಲಕ್ಷಣಗಳು ಕಂಡುಬಂದರೆ ಅಥವಾ 500ಬಿ ಸಂಖ್ಯೆಯ ಬಸ್​ನಲ್ಲಿ ಸಂಚರಿಸಿದವರು ಪರೀಕ್ಷೆಗೊಳಪಡುವುದು ಉತ್ತಮ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಮತ್ತಷ್ಟು ಸಿಬ್ಬಂದಿಗೆ ಸೋಂಕಿರುವ ಅನುಮಾನ:ಬಿಎಂಟಿಸಿಯ ಮತ್ತಷ್ಟು ಸಿಬ್ಬಂದಿಗೆ ಕರೊನಾ ಸೋಂಕಿರುವ ಕುರಿತು ಅನುಮಾನ ವ್ಯಕ್ತವಾಗುತ್ತಿದೆ. ಕೆಲ ಡಿಪೋಗಳಲ್ಲಿನ ಸಿಬ್ಬಂದಿ ಪರೀಕ್ಷೆಗೊಳ ಪಡಿಸಲಾಗಿದೆ. ಅವರ ವರದಿ ಸೋಮವಾರ ಅಥವಾ ಮಂಗಳವಾರ ಬರುವ ಸಾಧ್ಯತೆಗಳಿವೆ. ಅವರಲ್ಲಿ ಯಾರಿಗಾದರೂ ಸೋಂಕಿರುವುದು ದೃಢಪಟ್ಟರೆ, ಬಸ್ ಹತ್ತಲು ಸಾರ್ವಜನಿಕರು ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
ಸಿಬ್ಬಂದಿ ಪ್ರತಿಭಟನೆ:ಸೋಂಕಿನಿಂದ ಬಚಾವಾಗಲು ಸುರಕ್ಷತಾ ಸಾಮಗ್ರಿ ನೀಡದ ಹಿರಿಯ ಅಧಿಕಾರಿಗಳ ವಿರುದ್ಧ ಬಿಎಂಟಿಸಿ ಸಿಬ್ಬಂದಿ ಭಾನುವಾರ ಕೋರಮಂಗಲ ಡಿಪೋದಲ್ಲಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಸಿಬ್ಬಂದಿ ಆರೋಗ್ಯ ಸುರಕ್ಷತೆಗೆ ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಭರವಸೆ ನೀಡಿದರು.
ರಾಜ್ಯ ರಾಜಧಾನಿಯಲ್ಲಿ 42 ಮಂದಿಗೆ ಕೋವಿಡ್ 19 ಸೋಂಕು, ಮೂರು ಸಾವು

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:6 − 3 =
Remember me
