ಬೆಂಗಳೂರು:ಲಾಕ್​ಡೌನ್​ 4.0 ಅವಧಿಯಲ್ಲಿ ನಗರ ಸಾರಿಗೆ ಬಸ್​ಗಳ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದ ಬಳಿಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಸೇವೆಯನ್ನು ಆರಂಭಿಸಿದೆ. ಆದರೆ, ಬಸ್​ಗಳಲ್ಲಿ ಪ್ರಯಾಣಿಸಲು ಪಾಸ್​ಗಳ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಪಾಸ್​ಗಳು ಸ್ವಲ್ಪ ದುಬಾರಿಯಾಗಿರುವ ಕಾರಣ ಹಾಗೂ ಕರೊನಾ ಸೋಂಕು ತಗಲುವ ಭಯದಲ್ಲಿ ಸಾರ್ವಜನಿಕರು ಬಿಎಂಟಿಸಿ ಬಸ್​ಗಳ ಸೇವೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬಿಎಂಟಿಸಿಗೆ ಪ್ರಯಾಣಿಕರ ಕೊರತೆ ಉಂಟಾಗಿ ಭಾರಿ ನಷ್ಟವಾಗುತ್ತಿದೆ.
ಇದೀಗ ಎಚ್ಚೆತ್ತುಕೊಂಡಿರುವ ಬಿಎಂಟಿಸಿ, ಕನಿಷ್ಠ ಪ್ರಯಾಣದರ ಜಾರಿಗೊಳಿಸುವ ಮೂಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಇದರ ಪ್ರಕಾರ ಮೊದಲ 2 ಕಿ.ಮೀ. ಪ್ರಯಾಣಕ್ಕೆ 5 ರೂ. ಟಿಕೆಟ್​ ದರ ನಿಗದಿಪಡಿಸಿದೆ. ಈ ದರಗಳು ಮಂಗಳವಾರದಿಂದ (ಮೇ 26) ಜಾರಿಗೆ ಬರಲಿವೆ.
ಇದನ್ನೂ ಓದಿ:ಕೇಂದ್ರ ಸಚಿವರು ಎಂಬ ಕಾರಣಕ್ಕೆ ಕ್ವಾರಂಟೈನ್​ ಅಗತ್ಯವಿಲ್ಲವಂತೆ!
3ರಿಂದ 4 ಕಿ.ಮೀ. ಅಂತರದ ಪ್ರಯಾಣಕ್ಕೆ 10 ರೂ., 5ರಿಂದ 6 ಕಿ.ಮೀ. ಅಂತರದ ಪ್ರಯಾಣಕ್ಕೆ 15 ರೂ., 7ರಿಂದ 14 ಕಿ.ಮೀ.ವರೆಗಿನ ಪ್ರಯಾಣಕ್ಕೆ 20 ರೂ. ಶುಲ್ಕ ನಿಗದಿಯಾಗಿದೆ.
15ರಿಂದ 40 ಕಿ.ಮೀ. ಅಂತರ ಪ್ರಯಾಣಿಸುವವರು 25 ರೂ. ಹಾಗೂ 41ರಿಂದ ನಗರ ವ್ಯಾಪ್ತಿಯಲ್ಲಿ ಗರಿಷ್ಠ ಅಂತರದವರೆಗೆ ಪ್ರಯಾಣಿಸುವವರು 30 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
ಷರತ್ತುಗಳು ಅನ್ವಯ:ಪ್ರಯಾಣಿಕರು ನಿಖರವಾಗಿ 5, 10, 15, 20, 25 ಮತ್ತು 30 ರೂ. ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ. ಚಿಲ್ಲರೆ ಕೊಡುವಾಗ ಕಂಡಕ್ಟರ್​ಗಳೊಂದಿಗಿನ ಪದೇಪದೆ ಸಂಪರ್ಕವನ್ನು ತಪ್ಪಿಸುವ ಉದ್ದೇಶದಿಂದ ಇದನ್ನು ಕಡ್ಡಾಯಗೊಳಿಸಲಾಗಿದೆ.ಬಿಎಂಟಿಸಿ ಬಸ್​ ಹತ್ತು ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್​ ಧರಿಸಿರಬೇಕು. ಸರ್ಕಾರ ನಿಗದಿಪಡಿಸಿರುವಂತೆ ಕನಿಷ್ಠ 20 ಜನರು ಮಾತ್ರ ಪ್ರಯಾಣಿಸಬಹುದಾಗಿದೆ.
ದಿಲ್ಲಿಯಿಂದ ಬೆಂಗಳೂರಿಗೆ ಒಬ್ಬನೇ ಬಂದ ಐದರ ಪೋರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:18 − 14 =
Remember me
