ಬೆಂಗಳೂರು: ಕರೊನಾ ಭೀತಿ ನಡುವೆಯೂ ಕರ್ತವ್ಯ ನಿರ್ವಹಿಸಿದ್ದ ಬಿಎಂಟಿಸಿ ಚಾಲಕರೊಬ್ಬರಿಗೆ ಕೃಷಿ ಕಾರ್ಯ ಮಾಡಲು 8 ದಿನಗಳ ಕಾಲ ವೇತನಸಹಿತ ರಜೆ ನೀಡಲಾಗಿದೆ.
ಪೂರ್ಣಪ್ರಜ್ಞಾ ಲೇಔಟ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಎಸ್. ಯೋಗೇಶ್ ಸಕಲೇಶಪುರ ಮೂಲದ ರೈತ ಕುಟುಂಬಕ್ಕೆ ಸೇರಿದವರು. ಗದ್ದೆ ನಾಟಿ ಆರಂಭವಾಗಿದೆ. ಆ ಕೆಲಸ ಮಾಡಿಸಲು ಊರಿಗೆ ಹೋಗಬೇಕೆಂದು ರಜೆಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆ: ಹಿಂದೂ ದೇವತೆಗಳನ್ನು ಅವಹೇಳನಗೈಯ್ಯುವ ಪೋಸ್ಟ್​ಗಳನ್ನು ಮುಲಾಜಿಲ್ಲದೆ ಹಾಕುವ ಇವರಿಗೆ ಸರಿಯಾದ ಉತ್ತರ ಕೊಟ್ಟರೆ ಯಾಕಿಷ್ಟು ಕೋಪ!
ಅದನ್ನು ಪರಿಗಣಿಸಿರುವ ಘಟಕ ಅಧಿಕಾರಿಗಳು ವೇತನಸಹಿತ ರಜೆ ಮಂಜೂರು ಮಾಡಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಲಾಕ್​ಡೌನ್ ಜಾರಿ ಮಾಡಿದ ಪರಿಣಾಮ ಅಗತ್ಯ ಹಾಗೂ ತುರ್ತು ಸೇವೆ ಬಸ್​ಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಈ ವೇಳೆ ಯೋಗೇಶ್ ಕಾರ್ಯ ನಿರ್ವಹಿಸಿದ್ದರು. ಸಂಕಷ್ಟದ ಸಮಯದಲ್ಲಿ ತೋರಿದ ಕರ್ತವ್ಯಪ್ರಜ್ಞೆ ಪರಿಗಣಿಸಿ ವೇತನಸಹಿತ ರಜೆ ಮಂಜೂರು ಮಾಡಲಾಗಿದೆ.
ಕಾಶ್ಮೀರದಲ್ಲಿ ಉಗ್ರ ದಾಳಿಗೆ ಮೂವರು ಯೋಧರು ಹುತಾತ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 7 =
Remember me
