ಬೆಂಗಳೂರು:ಮಾಂಸಾಹಾರಿ ಹೋಟೆಲ್‌ನಲ್ಲಿ ಕಬಾಬ್ ಪಾರ್ಸೆಲ್ ಪಡೆದು ಹಣ ಕೊಡದೆ ನಾಲ್ವರು ಪುಡಾರಿಗಳು, ಮಾಲೀಕ ಮತ್ತು ಸಿಬ್ಬಂದಿಗೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಕೋಣನಗುಂಟೆ ಸಮೀಪದ ಈಶ್ವರ್ ಲೇಔಟ್‌ನಲ್ಲಿ ಮಾಲ್ಗುಡಿ ನಾಟಿ ಸ್ಟೈಲ್ ಹೋಟೆಲ್‌ನಲ್ಲಿ ಬುಧವಾರ ತಡರಾತ್ರಿ 12.30ರಲ್ಲಿ ಘಟನೆ ನಡೆದಿದೆ. ಹೋಟೆಲ್ ಮಾಲೀಕ ಬಾಬು ಎಂಬಾತ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲ ವರ್ಷಗಳಿಂದ ಬಾಬು, ಮಾಂಸಾಹಾರಿ ಹೋಟೆಲ್ ನಡೆಯುತ್ತಿದ್ದಾರೆ. ಆರೋಪಿಗಳಾದ ಅಭಿ, ಮನು ಸೇರಿ ನಾಲ್ವರು ಯುವಕರು ುಡ್ ಡಿಲವರಿ ಬಾಯ್ ಆಗಿ ಅರೆ ನೌಕರಿ ಮಾಡುತ್ತಿದ್ದಾರೆ. ಬುಧವಾರ ರಾತ್ರಿ ಬಾಬು ಹೋಟೆಲ್‌ಗೆ ಬಂದು ಒಂದು ಪ್ಲೇಟ್ ಕಬಾಬ್ ಪಡೆದು 120 ರೂ. ಕೊಡುವ ಬದಲು 90 ರೂ. ಕೊಟ್ಟಿದ್ದಾರೆ. ಅದಕ್ಕೆ ಮಾಲೀಕ ಬಾಬು, 30 ರೂ. ಕೊಡುವಂತೆ ತಾಕೀತು ಮಾಡಿದ್ದಾರೆ. ಅದಕ್ಕೆ ಕುಪಿತಗೊಂಡ ಯುವಕರು, ಲೋಕಲ್ ಹುಡುಗರು. ಕೊಡುತ್ತೆವೆ ಎಂದು ಹೇಳಿದ್ದಾರೆ. ಅದಕ್ಕೆ ಹಳೆಯ ಬಾಕಿ 1 ಸಾವಿರ ರೂ. ಇದೆ. ಇದೇ ರೀತಿ ಸಾಲ ಮಾಡಬೇಡಿ ಎಂದು ಬಾಬು ಮನವಿ ಮಾಡಿದ್ದಾರೆ. ಅಲ್ಲಿಂದ ಹೋದ ನಾಲ್ವರು ಯುವಕರು, ವಾಪಸ್ ಮತ್ತೆ ಬಂದು 10 ಪೀಸ್ ಕಬಾಬ್‌ನಲ್ಲಿ 1 ಪೀಸ್ ಕಡಿಮೆ ಇದೆ ಎಂದು ಗಲಾಟೆ ಮಾಡಿದ್ದಾರೆ. ಆಗ ಬಾಬು, ಕಡಿಮೆ ಕೊಟ್ಟಿಲ್ಲ. ಬೇಕಾದರೇ 1 ಪೀಸ್ ಬದಲು 3 ಪೀಸ್ ಕೊಡುತ್ತೆವೆ. ಗಲಾಟೆ ಮಾಡದಂತೆ ಮನವಿ ಮಾಡಿದ್ದಾರೆ. ಆದರೂ ಬಿಡದೆ ಹೋಟೆಲ್ ಸಿಬ್ಬಂದಿ ಮತ್ತು ಮಾಲೀಕರಿಗೆ ಥಳಿಸಿದ್ದಾರೆ.
ಮಾಲೀಕ ಬಾಬುಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗಾಯಾಳು ಕೊಟ್ಟ ದೂರಿನ ಮೇರೆಗೆ ಕೋಣನಗುಂಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.
ಕಲಬುರಗಿಯಿಂದ ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿಗೆ ಸನ್ಮಾನ ಮಾಡಿ ಕಾಲಿಗೆ ಬಿದ್ದ ನಟ ದುನಿಯಾ ವಿಜಯ್​!

ಮುಕೇಶ್​ ಅಂಬಾನಿ ಮನೆಯಲ್ಲಿ ಸಂಭ್ರಮ: ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ

ಹಿಂದುಗಳಿಗೆ ಮಾತ್ರ ಪ್ರವೇಶ! ದೇವರ ದರ್ಶನ ಸಿಗದಿದ್ದಕ್ಕೆ ಎಂಟ್ರಿ ಬುಕ್​ನಲ್ಲಿ ಖಡಕ್​ ಪ್ರತಿಕ್ರಿಯೆ ಕೊಟ್ಟ ಅಮಲಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
