ಮಂಗಳೂರು:ಇಲ್ಲಿನ ಎಂಆರ್‌ಪಿಎಲ್‌ಗೆ ಸಂಬಂಧಿಸಿದ ತೇಲು ಜೆಟ್ಟಿ (ಸಿಂಗಲ್ ಪಾಯಿಂಟ್ ಮೂರಿಂಗ್) ನಿರ್ವಹಣೆ ಮಾಡುವವರ ಬೋಟ್‌ವೊಂದು ಚಂಡಮಾರುತಕ್ಕೆ ಸಿಲುಕಿ ನೀರುಪಾಲಾಗಿದ್ದು 8 ಮಂದಿ ನಾಪತ್ತೆಯಾಗಿದ್ದಾರೆ. ಒಬ್ಬರ ಮೃತದೇಹ ಕಾಪು ಸಮೀಪ ಪತ್ತೆಯಾಗಿದೆ.
ಮಂಗಳೂರಿನ ನವಮಂಗಳೂರು ಬಂದರಿನಿಂದ ಸುಮಾರು 17 ಕಿ.ಮೀ. ದೂರದಲ್ಲಿ ಅರಬ್ಬಿ ಸಮುದ್ರದಲ್ಲಿರುವ ಎಸ್‌ಪಿಎಂ ಮೂಲಕ ದೊಡ್ಡ ದೊಡ್ಡ ತೈಲ ಹಡಗುಗಳಿಂದ ತೈಲವನ್ನು ಸ್ವೀಕರಿಸಲಾಗುತ್ತದೆ. ಇದಕ್ಕೆ ಬೇಕಾದ ನಿರ್ವಹಣಾ ಕೆಲಸಗಳಿಗೆ ಬೋಟ್ ಮೂಲಕ ಔಟ್‌ಸೋರ್ಸ್ ಮಾಡಲಾದ ಸಿಬ್ಬಂದಿ ತೆರಳುತ್ತಾರೆ.
ಈ ಕೆಲಸವನ್ನು ನಿರ್ವಹಣೆ ಮಾಡುತ್ತಿದ್ದ 9 ಮಂದಿಯ ತಂಡ ಡಗ್ ಅಲಯನ್ಸ್ ಎಂಬ ದೋಣಿಯಲ್ಲಿ ಶುಕ್ರವಾರ ಎಸ್‌ಪಿಎಂಗೆ ತೆರಳಿತ್ತು. ರಾತ್ರಿಯೇ ಮರಳಬೇಕಿತ್ತು. ಆದರೆ ತಂಡ ಶನಿವಾರ ಬೆಳಗ್ಗೆ ಎಸ್‌ಪಿಎಂನಿಂದ ಹೊರಟಿದೆ. ಹೊರಟವರು ಮರಳಿ ನವಮಂಗಳೂರು ಬಂದರು ತಲಪಿಲ್ಲ. ಅಂಡರ್ ವಾಟರ್ ಸರ್ವಿಸಸ್ ಎನ್ನುವ ಕಂಪನಿಗೆ ಸೇರಿದ ಸಿಬ್ಬಂದಿ ಇವರಾಗಿದ್ದಾರೆ ಎಂದು ತಿಳಿದುಬಂದಿದೆ. ಐದು ವರ್ಷಕ್ಕೊಮ್ಮೆ ಗುತ್ತಿಗೆ ನೀಡಲಾಗುತ್ತಿದೆ.
ಚಂಡಮಾರುತ ಇಫೆಕ್ಟ್​, ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್​: ನಾಳೆಯೂ ಕರಾವಳಿಯಲ್ಲಿ ಭಾರಿ ಮಳೆ…

ಆಚೆಗೆ ಬರೋಕಾಗಲ್ಲ ಅಂದ್ಕೋಬೇಡಿ, ಬಂದೇ ಬರ್ತೀವಿ.. ಮನಸಿದ್ದರೆ ಮಾರ್ಗ: ನೀನಾಸಂ ಸತೀಶ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
