ವಿಜಯಪುರ:ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರ ಶವ ಪತ್ತೆಯಾಗಿದೆ.
ಜುಲೈ 2ರ ಮಂಗಳವಾರ ಸಾಯಂಕಾಲ 4.30ರ ಸುಮಾರಿಗೆ ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಏಳು ಜನರು ನೀರುಪಾಲಾಗಿದ್ದರು. ಆ ಪೈಕಿ ಇಬ್ಬರನ್ನು ರಕ್ಷಿಸಲಾಗಿತ್ತು ಮತ್ತು ಮೂವರು ಶವವಾಗಿ ಪತ್ತೆಯಾಗಿದ್ದರು. ಇದೀಗ ಗುರುವಾರ ಬೆಳಗ್ಗೆ ಮತ್ತಿಬ್ಬರ ಶವವನ್ನು ಹೊರತೆಗೆಯಲಾಗಿದೆ.
ಪುಂಡಲಿಕ ಯಂಕಂಚಿ, ತಯ್ಯಬ್ ಚೌಧರಿ, ದಶರಥ ಗೌಡರ್ ಶವಗಳನ್ನು ಈಗಾಗಲೇ ತೆಗೆಯಲಾಗಿತ್ತು. ಇದೀಗ ಉಳಿದ ಇಬ್ಬರಾದ ರಫೀಕ್ ಬಾಂಬೆ ಹಾಗೂ ಮೆಹಬೂಬ್ ವಾಲಿಕಾರ್ ಶವ ಕೂಡ ಹೊರತೆಗೆಯಲಾಗಿದೆ.
ಬೆಳಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆಗೆ ನಡೆಸಿದ ಅಗ್ನಿಶಾಮಕದಳದ 30 ಸಿಬ್ಬಂದಿ, ಐದು ಬೋಟ್​ಗಳ ಸಹಾಯದಿಂದ ಶವ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು, ಪೊಲೀಸರನ್ನು ಕಂಡ ಕೂಡಲೇ ಭಯದಿಂದ ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ತೆಪ್ಪದಲ್ಲಿ ಹೋಗುತ್ತಿದ್ದಾಗ ಜೋರಾಗಿ ಗಾಳಿ ಬೀಸಿದ ಪರಿಣಾಮ ತೆಪ್ಪ ನದಿಯಲ್ಲಿ ಮುಗುಚಿ ದುರಂತ ಸಂಭವಿಸಿತು. ಈ ವೇಳೆ ಇಬ್ಬರು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದರು.
ಟೀಮ್​ ಇಂಡಿಯಾದ ಈ ಆಟಗಾರ ಕೊಹಿನೂರ್ ವಜ್ರಕ್ಕಿಂತಲೂ ಹೆಚ್ಚು! ದಿನೇಶ್​​ ಕಾರ್ತಿಕ್​ ಹೇಳಿಕೆ ವೈರಲ್​

ಹೀರೋಯಿನ್​ ಅಂದ್ರೆ ಇಷ್ಟು ದಪ್ಪ ಇರ್ತಾರಾ? ನಿವೇತಾ ಥಾಮಸ್​ ಕೊಟ್ಟ ಖಡಕ್​ ಉತ್ತರ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
