ಬೆಂಗಳೂರು:ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳನ್ನು ಹಾಗೂ ಸೆಲೆಬ್ರಿಟಿಗಳನ್ನು ಅಸಭ್ಯವಾಗಿ ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದ್ದು, ಅದರಲ್ಲೂ ಹೆಣ್ಣು ಮಕ್ಕಳ ಮನಸ್ಸಿಗೆ ಹಾಗೂ ಚರಿತ್ರೆಗೆ ಕುಂದು ಬರುವಂತೆ ಬೇಕೆಂದೇ ಅಶ್ಲೀಲವಾಗಿ, ಅಸಭ್ಯವಾಗಿ ವಿನಕಾರಣ ಮನಸ ಇಚ್ಛೆ ತಮ್ಮ ವಿಕೃತ ಮನಸ್ಥಿತಿಯನ್ನು ಬಯಲು ಆಗುತ್ತದೆಯೋ ಎಂದು ಸಮಾಜದ ಕೆಂಗಣ್ಣಿಗೆ ಹೆದರಿ, ನಕಲಿ ಖಾತೆಗಳನ್ನು ತೆರೆದು ತಮ್ಮ ಗುರುತನ್ನು ಮರೆಮಾಚಿ ನಕಲಿ ಖಾತೆಗಳ ಮೂಲಕ ಮನಬಂದಂತೆ ಕಾಮೆಂಟ್​ ಮಾಡುವವರೇ ಹೆಚ್ಚಾಗುತ್ತಿದ್ದಾರೆ.
ಇದನ್ನೂ ಓದಿ:ಕಾಲಿವುಡ್‌ ನಿರ್ದೇಶಕ ಸೂರ್ಯ ಪ್ರಕಾಶ್​ ಹೃದಯಾಘಾತದಿಂದ ನಿಧನ; ಸೆಲೆಬ್ರಿಟಿಗಳ ಸಂತಾಪ
ಇದರಿಂದ ಮನನೊಂದು ಅನೇಕ ಹೆಣ್ಣು ಮಕ್ಕಳ ಕುಟುಂಬ ಹಾಳಾಗಿ ಹೋಗಿದೆ ಇನ್ನು ಕೆಲವು ಡಿಪ್ರೆಶನ್ ಗೆ ಬಲಿಯಾಗಿದ್ದಾರೆ, ಮತ್ತೊಂದೆಡೆ ಪ್ರಾಣ ಕಳೆದುಕೊಂಡ ಕರಾಳ ಉದಾಹರಣೆಗಳು ಕೂಡ ನಮ್ಮ ಕಣ್ಣ ಮುಂದಿವೆ.
ಇನ್ನೂ ಟ್ರೋಲ್​ ಮಾಡುವವರಿಗೆ ಸೆಲೆಬ್ರಿಟಿಗಳೇ ಪ್ರಮುಖ ಟಾರ್ಗೆಟ್​. ಅದರಲ್ಲೂ ಹೆಣ್ಣು ಮಕ್ಕಳು ಹಾಗೂ ನಟಿಯರೇ ಹೆಚ್ಚು ಟಾರ್ಗೆಟ್​. ಅಶ್ಲೀಲ ಕಾಮೆಂಟ್​ಗಳ ಮೂಲಕ ಹೆಣ್ಣು ಮಕ್ಕಳು ಹಾಗೂ ಕಲಾವಿದರ ಬಾಳಲ್ಲಿ ದುಸ್ವಪ್ನವಾಗಿ ಕಾಡುತ್ತಿರುವ unethical trollers ಹಾಗೂ ನಕಲಿ ಖಾತೆಗಳ ಮೂಲಕ ಕಾಮೆಂಟ್​ ಮಾಡುವರ ವಿರುದ್ಧ ನಟಿ ಸುಷ್ಮಾ ವೀರ್​ ಅವರು ಸಮರ ಸಾರಿದ್ದಾರೆ.
ಕೆಟ್ಟದಾಗಿ ಕಾಮೆಂಟ್​ ಮಾಡುವ ಮೂಲಕ ನಟಿಯರ ಗೌರವಯುತ ಬದುಕಿಗೆ ಕಳಂಕ ತರುವುದಲ್ಲದೆ ಆ ಹೆಣ್ಣು ಮಕ್ಕಳ ಫ್ಯಾಮಿಲಿಗಳನ್ನು ವಿನ ಕಾರಣ ಸಮಾಜದಲ್ಲಿ ತಲೆತಗ್ಗಿಸಿ ಉಸಿರುಗಟ್ಟಿಸುವಂತೆ ಮಾಡುತ್ತಿರುವ ಇಂಥ ವಿಕೃತ ಮನಸ್ಸುಗಳು, ಹೆಣ್ಣು ಮಕ್ಕಳ ಮೇಲೆ ನಡೆಸುತ್ತಿರುವುದು ಮಾನಸಿಕ ಅತ್ಯಾಚಾರ ಇಂತಹ ಕೆಟ್ಟ ಮನಸ್ಥಿತಿಯುಳ್ಳ ದುಷ್ಕರ್ಮಿಗಳ ಮೇಲೆ ಹಾಗೂ ಕಿಡಿಗೇಡಿಗಳ ವಿರುದ್ಧ ಸುಷ್ಮಾ ವೀರ್​ ಅವರು ಮಹಿಳಾ ಆಯೋಗ ಮತ್ತು ಸೈಬರ್​ ಕ್ರೈಂ ವಿಭಾಗಕ್ಕೆ ದೂರು ದಾಖಲಿಸಿದ್ದಾರೆ.
ಇಂತಹ ಕಾಮುಕ ಹಾಗೂ ವಿಕೃತ ಮನಸ್ಥಿತಿಗಳನ್ನು ಸಮಾಜದಲ್ಲಿ ಸಾರ್ವಜನಿಕರು ಒಪ್ಪೋದಿಲ್ಲ ಎಂದು ಚೆನ್ನಾಗಿ ಗೊತ್ತಿದ್ದೇ ತಮ್ಮ ನಿಜವಾದ ಪ್ರೊಫೈಲ್ ಇಂದ ಈ ಅಸಹ್ಯ ಕೃತ್ಯವನ್ನು ಮಾಡಲಾರದೆ ಹೇಡಿಗಳಂತೆ ಫೇಕ್ ಪ್ರೊಫೈಲ್ ಇಂದ ಹೆಣ್ಣು ಮಕ್ಕಳ ಮೇಲೆ ಬಹಳ ಹೀನಾಯವಾಗಿ ಅಶ್ಲೀಲ ಕಾಮೆಂಟ್​ಗಳನ್ನು ಮಾಡಿ ತಮ್ಮ ಜೀವನದ frustration ಗಳನ್ನು ಈ ಕಮೆಂಟ್ಗಳ ಮೂಲಕ ಹೆಣ್ಣು ಮಕ್ಕಳ ಮೇಲೆ ಹೀನಾಯವಾಗಿ ಕಮೆಂಟ್ ಮಾಡಿ ತಮ್ಮ ಚಪಲವನ್ನು ತೀರಿಸಿಕೊಳ್ಳೋದೇ ಒಂದು ಕೆಲಸವಾಗಿದೆ.
ಇನ್ನೊಂದೆಡೆ ಕೆಲವು ಟ್ರೋಲರ್ಸ್ ಗಳು ತಮ್ಮ ಪ್ರೊಫೈಲ್ ಲೈಕ್ಸ್ ಗಳನ್ನು ಹಾಗೂ page Reach ಗಳನ್ನು ಹೆಚ್ಚಾಗಿ ಚಾಲನೆಯಲ್ಲಿ ಇಡುವುದಕ್ಕಾಗಿ ಈ ರೀತಿ ಹಿಂದೂಮುಂದಿಲ್ಲದ ವಿಷಯವನ್ನು ತಿಳಿಯದೆ ಕೇವಲ ಕ್ಷಣಿಕ ಫೇಮಗಾಗಿ ಕಂಡವರ ಬಗ್ಗೆ ಹೀನಾಯವಾಗಿ ಟ್ರೋಲ್ ಮೇಲೆ ಕಮೆಂಟ್ ಮಾಡೋದು ಇವರ ಚಾಳಿಯಾಗಿದೆ.
ಸಾಮಾನ್ಯ ಇದನ್ನು ಯಾರು ಏನು ಮಾಡುವುದಿಲ್ಲ ಇದು ಕಾಮನ್ ಆಗಿದೆ ಅಂದುಕೊಳ್ಳುವ ವಿಕೃತರಿಗೆ ಇವತ್ತು ಸುಷ್ಮಾ ವೀರವರು ಸಾಮಾಜಿಕ ಜಾಲತಾಣಗಳಲ್ಲಿ” ಇಂತಹ ಅಶ್ಲೀಲ ಟ್ರೋಲರ್ಸ್​ ಹಾಗೂ ಕಮೆಂಟರ್ ಗಳಿಗೆ ಒಂದು ಕಡಿವಾಣ ಬೀಳದೆ ಹೋದರೆ ಹೆಣ್ಣು ಮಕ್ಕಳ ಬಾಳನ್ನು ಇವರು ತಮ್ಮ ಚಪಲಕ್ಕೆ ಬಲಿ ಹಾಕುವುದು ತಪ್ಪೋದಿಲ್ಲ. ಎನ್ನುವ ಕಾರಣದಿಂದ ಅವರು ಮುಂದಾಗಿ ಇಂತಹ ಕಮೆಂಟ್ ಹಾಗೂ ರಿಪೀಟೆಡ್ ಅಫೆಂಡರ್ಸ್ ಗಳ ವಿರುದ್ಧ ದೂರನ್ನು ಮಹಿಳಾ ಆಯೋಗಕ್ಕೆ ನೀಡಿದ್ದಾರೆ.
ಈ ವಿಕೃತಕ್ಕೆ ಬಲಿಯಾಗಿರುವ ಅನೇಕ ಹೆಣ್ಣು ಮಕ್ಕಳ ಕುಟುಂಬ – ಸ್ವಾಭಿಮಾನವುಳ್ಳ ಹೆಣ್ಣು ಮಕ್ಕಳು – ಕಲಾವಿದರು ಹಾಗೂ ಸೆಲೆಬ್ರಿಟಿಗಳ ಪರವಾಗಿ ನಾನು ಒಂದು ಹೆಣ್ಣಾಗಿ ದೂರು ಕೊಡಲು ಮುಂದಾಗಿದ್ದೇನೆ.
ದೂರು ದಾಖಲು: ಇತ್ತೀಚಿಗೆ ರಘುರಾಮ ಅವರ ಯೂಟ್ಯೂಬ್ ಚಾನಲ್​ಗೆ ನಾನು ನೀಡಿದಂತಹ ಸಂದರ್ಶನದಲ್ಲಿ ರಘುರಾಮ ಅವರು ಕೇಳಿದ ಪ್ರಶ್ನೆಗೆ ನಾನು ನನ್ನ ವೈಯಕ್ತಿಕ ಒಪೀನಿಯನ್ ಅನ್ನು ಹಂಚಿಕೊಂಡಿರುತ್ತೇನೆ. ನಾನು ಹೇಳಿಲ್ಲದ ಮಾತುಗಳನ್ನು ಈ ಕೆಲವು ಟ್ರೇಲರ್ಸ್ ಗಳು ( AV News, Ram News, Troll Annatammas, Filmi Beats, Bindas Toller’s, Suddhi Madhyama, Instagram,) ತಪ್ಪಾಗಿ ಅದನ್ನೇ ತಿರುಚು, ಅವರವರ ವೈಯಕ್ತಿಕ FB ಪೇಜ್ ಲೈಕ್ ಲಾಭಕ್ಕಾಗಿ ನನ್ನ ತಮ್ಮ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸಿ, ಮಾನಹಾನಿ ಮಾಡಿದ್ದಾರೆ.
ಅಶ್ಲೀಲ ಕಾಮೆಂಟ್​ಗಳ ಮೂಲಕ ಕಲಾವಿದರ ಬಾಳಲ್ಲಿ ದುಸ್ವಪ್ನವಾಗಿ ಕಾಡುತ್ತಿರುವ ಟ್ರೋಲಿಗರ ವಿರುದ್ಧ ನಟಿ ಸುಷ್ಮಾ ವೀರ್​ ಅವರು ಸಮರ ಸಾರಿದ್ದಾರೆ. ಕೆಟ್ಟದಾಗಿ ಕಾಮೆಂಟ್​ ಮಾಡುವ ಮೂಲಕ ನಟಿಯರ ಗೌರವಯುತ ಬದುಕಿಗೆ ಕಳಂಕ ತರುವ ಮೂಲಕ ಮಾನಸಿಕ ಅತ್ಯಾಚಾರ ಎಸಗುತ್ತಿರುವ ಕಿಡಿಗೇಡಿಗಳ ವಿರುದ್ಧ ಸುಷ್ಮಾ ವೀರ್​ ಅವರು ಮಹಿಳಾ ಆಯೋಗ ಮತ್ತು ಸೈಬರ್​ ಕ್ರೈಂ ವಿಭಾಗಕ್ಕೆ ದೂರು ದಾಖಲಿಸಿದ್ದಾರೆ.
ಹಾಗೆ ಸೈಬರ್ ಕ್ರೈಂ ಹಾಗೂ ಪೊಲೀಸ್ ಕಮಿಷನರಿಗೆ ಈ ಸದ್ಯದಲ್ಲೇ ಪ್ರೂಫ್ ಸಮೇತ ಕ್ರಮ ತೆಗೆದುಕೊಳ್ಳುವಂತೆ ಕಂಪ್ಲೇಂಟ್ ಫೈಲ್ ಮಾಡಿದ್ದು, FIR ದಾಖಲಿಸಲಿದ್ದು ಸದ್ಯದಲ್ಲೇ ಅಶ್ಲೀಲ ಕಮೆಂಟರಿಗೆ ನೋಟಿಸ್ ಜಾರಿಯಾಗಲಿದೆ ನಟಿ ಸುಷ್ಮಾ ವೀರ್ ಹೇಳಿದರು.
ದೂರು ದಾಖಲಿಸಿದ ಬೆನ್ನಲ್ಲೇ ಸುಷ್ಮಾ ಅವರಿಗೆ ಸಾರ್ವಜನಿಕರ ಬೆಂಬಲವೂ ಸಿಕ್ಕಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ, ಪೊಲೀಸ್​ ಇಲಾಖೆ ಹಾಗೂ ಅವರ ವಕೀಲರು ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ನೋಟಿಸ್​ ನೀಡಿ ವಿಚಾರಣೆ ನಡೆಸಲು ಮುಂದಾಗಿದೆ ಎಂದು ತಿಳಿಸಿದರು.
ಪದ್ಮಶ್ರೀ ಪ್ರಶಸ್ತಿ ವಾಪಸ್‌ ನೀಡಿದ ವೈದ್ಯ ಹೇಮಚಂದ್‌ ಮಾಂಝಿ, ಕಾರಣ ಹೀಗಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 6 =
Remember me
