ಯಲ್ಲಾಪುರ:ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಅರಬೈಲ್ ಘಟ್ಟದಲ್ಲಿ ಮಂಗಳವಾರ ಭೀಕರ ಅಪಘಾತ ಸಂಭವಿಸಿದೆ. ಬೊಲೆರೊ ವಾಹನಕ್ಕೆ ಎಡದಿಂದ ಒಂದು ಲಾರಿ, ಬಲದಿಂದ ಮತ್ತೊಂದು ಟಿಪ್ಪರ್​ ಡಿಕ್ಕಿ ಹೊಡೆದಿದ್ದು, ಲಾರಿ-ಟಿಪ್ಪರ್​ ಮಧ್ಯೆ ಸಿಕ್ಕ ಬೊಲೆರೊ ನಜ್ಜುಗುಜ್ಜಾಗಿದೆ. ಈ ದೃಶ್ಯ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಬಾಗಲಕೋಟೆಯ ಲೋಕಾಪುರದ 8 ಜನರು ಬೊಲೆರೊದಲ್ಲಿ ಗೋಕರ್ಣ ಮತ್ತು ಧರ್ಮಸ್ಥಳಕ್ಕೆಂದು ಹೋಗುತ್ತಿದ್ದರು. ಈ ಪೈಕಿ ನಾಲ್ವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಹೊಸ ಬೊಲೆರೊ ಖರೀದಿಸಿದ್ದ ಕುಟುಂಬ ಕಾರಿಗೆ ಪೂಜೆ ಮಾಡಿಸಲೆಂದು ದೇವರ ಸನ್ನಿಧಿಗೆ ಹೋಗುತ್ತಿತ್ತು. ಮಾರ್ಗಮಧ್ಯೆ ಭೀಕರ ಅಪಘಾತವಾಗಿದ್ದು, ಕಾರಿನಲ್ಲಿದ್ದ ಭಾಗ್ಯಶ್ರೀ(35) ಮತ್ತು ಚಿಕ್ಕಮ್ಮ (28) ಮೃತಪಟ್ಟಿದ್ದಾರೆ.
ಬೊಲೆರೊದಲ್ಲಿದ್ದ ತಿಮ್ಮನ ಗೌಡ, ಹನುಮಂತ, ಲಕ್ಷ್ಮೀ, ಶೃತಿ, ಆಕಾಶ ಮತ್ತು ಅಪೇಕ್ಷಾ ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಯ್ಯೋ, ಮಗಳೇ ಕಾಲೇಜಿಗೆ ಹೋಗವ್ವ ಅಂದಿದ್ದೇ ತಪ್ಪಾಯ್ತಾ? ನಡೆದೇ ಹೋಯ್ತು ದುರಂತ

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ

ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಈಶ್ವರಪ್ಪ- ಇಬ್ರಾಹಿಂ ಇಬ್ಬರಲ್ಲಿ ಯಾರು ಹೆಚ್ಚು ಬೆಳ್ಳಗಿದ್ದಾರೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
