ಬೆಂಗಳೂರು:ವಿಮರ್ಶಕರಿಂದ ಮೆಚ್ಚುಗೆ ಪಡೆದ ಕಾಂತಾರ ಕಮರ್ಷಿಯಲ್​ ಸಿನಿಮಾ ಆಗಿಯೂ ಯಶಸ್ಸು ಕಂಡಿದೆ. ಈಗ, ಯಾವ ಬಾಲಿವುಡ್​ ನಟನಿಂದಲೂ ಶಿವನ ಪಾತ್ರ ಮಾಡಲು ಸಾದ್ಯವಿಲ್ಲ ಎಂದು ರಿಷಭ್ ಹೇಳಿದ್ದಾರೆ.
ಖಾಸಗಿ ಸಂದರ್ಶನ ಒಂದರಲ್ಲಿ ರಿಷಭ್ ಶೆಟ್ಟಿಗೆ ‘ಕಾಂತಾರ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ ಮಾಡಿದರೆ ಯಾವ ಬಾಲಿವುಡ್​ ನಟ ಶಿವನ ಪಾತ್ರವನ್ನು ನಿರ್ವಹಿಸಬಲ್ಲರು’ ಎಂದು ಕೇಳಿದ್ದಾರೆ.
ಅದಕ್ಕೆ ಉತ್ತರಿಸಿದ ಶೆಟ್ರು ‘ಬಹುಷಃ ಯಾರಿಂದಲೂ ಸಾಧ್ಯವಿಲ್ಲ. ನಾನು ಆ ಪಾತ್ರವನ್ನು ಇನ್ನೊಬ್ಬ ನಟನಿಗೆ ಹೇಗೆ ವಿವರಿಸುತ್ತೇನೋ ಗೊತ್ತಿಲ್ಲ. ನಾನು ಭೂತ ಕೋಲದ ಸೀಕ್ವೆನ್ಸ್​ಗೆ ಭಾವನಾತ್ಮಕವಾಗಿ ಕನೆಕ್ಟ್​ ಆಗಿದ್ದೇನೆ. ಅದರ ನಟನೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಪ್ರಯಾಣ. ನಾವು ಭೂತ ಕೋಲವನ್ನು ಬಾಲ್ಯದಿಂದ ನೋಡುತ್ತಾ ಬೆಳೆದವರು. ನೀವು ದೈವದಲ್ಲಿ ನಂಬಿಕೆ ಇಡಬೇಕು’ ಎಂದು ಹೇಳಿದರು.
ಬಳಿಕ ಸ್ಪಷ್ಟನೆ ನೀಡಿದ ರಿಷಭ್​, ‘ಬಾಲಿವುಡ್​ನಲ್ಲಿ ಒಳ್ಳೆಯ ನಟರಿಗೆ ಕೊರತೆ ಇಲ್ಲ. ಆದರೆ ನನ್ನಿಂದ ಶಿವನ ಪಾತ್ರವನ್ನು ಬಾಲಿವುಡ್​ ನಟರು ನಿರ್ವಹಿಸುವುದನ್ನು ಊಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eighteen =
Remember me
